Monday, December 23, 2024

ಕಾರಿಗೆ ಪೆಟ್ರೋಲ್ ಬದಲು ಡೀಸೆಲ್ ಹಾಕಿಸಿದ ಕಾರು ಡ್ರೈವರ್ – ನಟ ವಿಜಯ ರಾಘವೇಂದ್ರ ತಬ್ಬಿಬ್ಬು

ಶಿವಮೊಗ್ಗ: ಜೋಗ ವೀಕ್ಷಿಸಲು ಮಲೆನಾಡು ಜಿಲ್ಲೆ ಶಿವಮೊಗ್ಗಕ್ಕೆ ಬಂದಿದ್ದ ನಟ ವಿಜಯ ರಾಘವೇಂದ್ರಗೆ ಸಕ್ಕತ್ತಾಗಿ ಬ್ಲೇಡ್ ಬಿದ್ದಿದೆ. ಅದು ಕೂಡ ಅವರ ಕಾರಿನ ಡ್ರೈವರ್ ನಿಂದಲೇ. ನಾಯಕ ನಟ ವಿಜಯ್ ರಾಘವೇಂದ್ರ, ಜಿಲ್ಲೆಗೆ ನಿನ್ನೆ ಭೇಟಿ ನೀಡಿದ್ದು, ಈ ವೇಳೆ ಸಾಗರ ರಸ್ತೆಯ ಪೆಟ್ರೋಲ್ ಬಂಕ್ ವೊಂದರಲ್ಲಿ, ತಮ್ಮ ಐಷಾರಾಮಿ ಕಾರಿಗೆ ಪೆಟ್ರೋಲ್ ಹಾಕಿಸಲು ನಿಲ್ಲಿಸಿದ್ದಾರೆ. ಈ ವೇಳೆ, ಕಾರು ಡ್ರೈವರ್ ಹೇಳಿದ ಹಿನ್ನೆಲೆಯಲ್ಲಿ ಬಂಕ್ ಸಿಬ್ಬಂದಿ ಕಾರಿಗೆ ಪೆಟ್ರೋಲ್ ಬದಲಾಗಿ ಡೀಸೆಲ್ ಹಾಕಿದ್ದಾರಂತೆ. ಟ್ಯಾಂಕ್ ತುಂಬಿದ ಬಳಿಕ ಹಣ ನೀಡುವಾಗಿ ಈ ವಿಚಾರ ತಿಳಿದು ಬಂದಿದ್ದು, ಈ ವೇಳೆ ನಟ ವಿಜಯ್ ರಾಘವೇಂದ್ರ ತಲೆ ಮೇಲೆ ಕೈ ಹೊತ್ತು ಕುಳಿತುಕುಳ್ಳುವಂತಾಗಿದೆ. ಕಾರು ಚಾಲಕನ ಅವಾಂತರದಿಂದಾಗಿ ಈ ಘಟನೆ ನಡೆದಿದ್ದು, ಎಚ್ಚೆತ್ತ ಬಂಕ್ ಸಿಬ್ಬಂದಿ ಮತ್ತು ಮಾಲಿಕರು ವಿಜಯ್ ರಾಘವೇಂದ್ರ ಬಳಿ ಕ್ಷಮೆ ಕೋರಿದ್ದಾರಂತೆ.

ಅಷ್ಟಕ್ಕೂ, ವಿಜಯ್ ರಾಘವೇಂದ್ರ ಅವರ ಕಾರು ಚಾಲಕನಿಗೆ ಈ ಕಾರು ಹೊಸದಾಗಿದ್ದು, ಈ ಕಾರು ಪೆಟ್ರೋಲ್​ದೊ ಅಥವಾ ಡಿಸೇಲ್​ದೊ ಎಂದು ತಿಳಿದಿರಲಿಲ್ಲವಂತೆ. ಹೀಗಾಗಿ ಡಿಸೇಲ್ ಪಂಪ್ ಬಳಿ ನಿಲ್ಲಿಸಿದ್ದಾರೆ. ನಂತರ ಈ ಕಾರು ಪೆಟ್ರೋಲ್​ದೆಂದು ತಿಳಿದ ನಂತರವಷ್ಟೇ, ಎಲ್ಲರೂ ಪೆಚ್ಚಾಗಿದ್ದಾರೆ. ನಂತರ ವಿಜಯ್ ರಾಘವೇಂದ್ರ ಮರುಮಾತನಾಡದೇ, ಕಾರನ್ನು ಟೋ ಗಾಡಿಯಲ್ಲಿ ಹಾಕಿ ಸರ್ವಿಸ್​ಗೆ ಕಳಿಸಿದ್ದಾರೆ. ಈ ವೇಳೆ ಬೇರೆ ದಾರಿ ಕಾಣದೇ, ವಿಜಯ್ ರಾಘವೇಂದ್ರ ಬೇರೆ ಕಾರಿನಲ್ಲಿ ಬೆಂಗಳೂರಿಗೆ ಪ್ರಯಾಣಿಸಿದ್ದಾರೆ. ಬೆಂಜ್ ಕಾರಿನ ಸರ್ವಿಸ್ ದರ ಸುಮ್ಮನೆ ತಲೆಗೆ ಬಂತಲ್ಲಾ, ಸಕ್ಕತ್ತಾಗಿ ಬ್ಲೇಡ್ ಬಿತ್ತಲ್ಲಾ ಅಂತಾ ನೊಂದುಕೊಂಡಿದ್ದಾರಂತೆ.

RELATED ARTICLES

Related Articles

TRENDING ARTICLES