Monday, December 23, 2024

ಜೈಲಿನಲ್ಲೇ ಇಡೀ ಜೀವನ ಕಳೆಯೋಕೆ ಈಶ್ವರಪ್ಪ ರೆಡಿಯಂತೆ..!

ಶಿವಮೊಗ್ಗ: ಮಥುರಾ ಮತ್ತು ಕಾಶಿಯಲ್ಲಿ ಹಿಂದೂ ದೇವಾಲಯಗಳನ್ನು ಒಡೆದು ಹಾಕಿ ಮಸೀದಿ ನಿರ್ಮಾಣ ಮಾಡಿರುವುದನ್ನು ನೋಡಿ ನನಗೆ ಬಹಳ ನೋವು ಮತ್ತು ಸಿಟ್ಟು ಬಂದಿದೆ. ಈ ಹಿನ್ನೆಲೆಯಲ್ಲಿ, ಆ ಕ್ಷೇತ್ರಗಳಲ್ಲಿ ಮಸೀದಿ ತೆರವುಗೊಳಿಸಿ,  ಕೃಷ್ಣ ದೇವಾಲಯ ಮತ್ತು ಕಾಶಿಯಲ್ಲಿ ವಿಶ್ವನಾಥನ ಮಂದಿರ ನಿರ್ಮಾಣವಾಗಬೇಕೆಂದು ಹೇಳಿಕೆ ನೀಡಿದ್ದೇನೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಪ್ರತಿಕ್ರಿಯಿಸಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ಹೈದರಾಬಾದ್​ನ ಸಂಸದ ಅಸಾದುದ್ದಿನ್ ಓವೈಸಿ ನನ್ನ ವಿರುದ್ಧ ಹೇಳಿಕೆ ನೀಡಿದ್ದಾರೆ. ಅದರಲ್ಲೂ  ನನ್ನನ್ನು ಬಂಧಿಸುವಂತೆ ಹೇಳಿಕೆ ನೀಡಿದ್ದಾರೆ. ನಾನು ನೂರು ಬಾರಿ ಬಂಧನಕ್ಕೊಳಗಾಗಲು ಸಿದ್ಧನಾಗಿದ್ದೇನೆ. ಬೇಕಾದರೆ ಇಡೀ ಜೀವನ ಜೈಲಲ್ಲೇ ಇರಲು ನಾನು ರೆಡಿ ಅಂತಾ ಈಶ್ವರಪ್ಪ ಹೇಳಿದ್ದಾರೆ.

ಸರ್ಕಾರಗಳಿರುವುದು, ಕೇವಲ ರಸ್ತೆ, ಚರಂಡಿ ನಿರ್ಮಾಣ ಮಾಡಲಷ್ಟೆ ಅಲ್ಲ. ಬದಲಾಗಿ ಈ ದೇಶದ ಜನರ ಅಪೇಕ್ಷೆಯಂತೆ ಇರಲು. ಇದೀಗ, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಶಿಲನ್ಯಾಸವಾಗಿದೆ. ಅದರಂತೆ, ಈ ಎರಡೂ ಜಾಗದಲ್ಲಿಯೂ ಮಂದಿರ ನಿರ್ಮಾಣವಾಗಬೇಕು. ಇದು ಕೇವಲ ನನ್ನ ಭಾವನೆಯಷ್ಟೇ ಅಲ್ಲ ದೇಶದ ಜನರ ಅಪೇಕ್ಷೆಯಾಗಿದೆ. ಇದರ ನಡುವೆ ಪಕ್ಷವನ್ನೂ ತರಲು ಇಷ್ಟ ಪಡುವುದಿಲ್ಲ. ಕಾಂಗ್ರೆಸ್ ಮತ್ತು ಜೆಡಿಎಸ್ ಸೇರಿದಂತೆ ಪಕ್ಷಾತೀತವಾಗಿ ಕೋಟ್ಯಾಂತರ ಜನರ ಭಾವನೆಯೂ ಇದೇ ಆಗಿದೆ. ಆದರೆ ಈ ಮಾತನ್ನು ಮುಂದೆ ಬಂದು ಯಾರು ಹೇಳುವುದಿಲ್ಲ. ಹೈದರಾಬಾದ್ ನ ಸಂಸದ ಅಸಾವುದ್ದೀನ್ ಓವೈಸಿ ನನ್ನ ಹೇಳಿಕೆಗೆ ಟೀಕೆ ಮಾಡಿದ್ದಾರೆ. ನನ್ನ ಹೇಳಿಕೆ ರಾಜಕಾರಣಗೊಳಿಸಿದ್ದಾರೆ. ನಾನು ಈ ದೇಶದ ಮಣ್ಣಿನ ಮಗನಾಗಿದ್ದು, ದೇಶದ ಪರವಾಗಿ ಹೇಳಿಕೆ ನೀಡಿದ್ದೇನೆಷ್ಟೆ ಅಂತಾ ಈಶ್ವರಪ್ಪ ಪ್ರತಿಕ್ರಿಯಿಸಿದ್ದಾರೆ.

  ನನ್ನ ಹೇಳಿಕೆಯಿಂದ ಹಿಂದೂ ಧಾರ್ಮಿಕ ಕೇಂದ್ರಗಳು ಮಸೀದಿಗಳಿಂದ ಮುಕ್ತಿಯಾಗುವುದಾರೆ ಆಗಲೀ. ನಾನು ನೂರು ಬಂಧನಕ್ಕೊಳಗಾಗಲು ನಾನು ತಯಾರಾಗಿದ್ದೆನೆ. ಇಡೀ ಜೀವನ ಬೇಕಾದರೆ ಜೈಲಲ್ಲೇ ಇರುತ್ತೇನೆ ಅಂತಾ ಈಶ್ವರಪ್ಪ ಡಿಕೆಶಿಗೆ ತಿರುಗೇಟು ನೀಡಿದ್ದಾರೆ.

ಆದರೆ, ನಾವು ಸ್ವತಂತ್ರ ಭಾರತದಲ್ಲಿದ್ದೇವೆ. ಈ ಪ್ರಮೆಯವೇ ಬರುವುದಿಲ್ಲ. ನಮ್ಮ ಶ್ರದ್ಧಾ ಕೇಂದ್ರವನ್ನು ಒಡೆದು ಮಸೀದಿ ನಿರ್ಮಾಣ ಮಾಡಿರುವುದು ಸರಿಯಲ್ಲ. ಓವೈಸಿಯ ರಕ್ತವೇ ಹಿಂದೂ ವಿರೋಧಿ ರಕ್ತವಾಗಿದೆ. ದೇಶದ ಶ್ರದ್ಧಾ ಕೇಂದ್ರಗಳ ಬಗ್ಗೆ ಅವರಿಗೆ ಶ್ರದ್ಧೇ ಬರಲು ಸಾಧ್ಯವೇ ಇಲ್ಲ. ಓವೈಸಿಯ ದೃಷ್ಟಿಯೇ ಬೇರೆಯಾಗಿದ್ದು, ರಾಷ್ಟ್ರ ಭಕ್ತರ ಪರವಾಗಿ ಹೇಳಿಕೆ ನೀಡಲು ಅವರಿಗೆ ಮನಸ್ಸೇ ಬರುವುದಿಲ್ಲ ಎಂದು ಓವೈಸಿ ವಿರುದ್ಧ ಈಶ್ವರಪ್ಪ ತಿರುಗೇಟು ನೀಡಿದ್ದಾರೆ.

 

 

RELATED ARTICLES

Related Articles

TRENDING ARTICLES