Wednesday, January 8, 2025

ದೇವಾಲಯದಲ್ಲಿ ಕೃಷ್ಣನ ಆರಾಧನೆ ಮಾಡಿದ ಸಚಿವ ಈಶ್ವರಪ್ಪ

ಶಿವಮೊಗ್ಗ: ಇಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಭಜನೆ ಮೊರೆ ಹೋಗಿದ್ದಾರೆ. ಇಂದು ಶ್ರೀ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ, ಶಿವಮೊಗ್ಗದ ಬಿದರೆ ಗ್ರಾಮದಲ್ಲಿರುವ ಇಸ್ಕಾನ್ ದೇವಾಲಯದಲ್ಲಿ ವಿಶೇಷ ಭಜನೆ, ಕೀರ್ತನೆ ಜೊತೆಗೆ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು.

ಸಚಿವ ಈಶ್ವರಪ್ಪ, ಈ ವಿಶೇಷ ಪೂಜೆಯಲ್ಲಿ ಪಾಲ್ಗೊಂಡು, ಶ್ರೀ ಕೃಷ್ಣನ ಆರಾಧನೆ ನೆರವೇರಿಸಿದ್ರು. ದೇವಾಲಯದಲ್ಲಿ ಬಾಲ ಕೃಷ್ಣನ ತೊಟ್ಟಿಲು ತೂಗಿ ಆರಾಧಿಸಿದ್ರು. ಈ ವೇಳೆ ಭಜನೆ ಮಾಡಿ ಶ್ರೀ ಕೃಷ್ಣನ ಆಶೀರ್ವಾದ ಪಡೆದ ಸಚಿವರು, ಭಕ್ತರಿಗೆ ತಾವೇ ಸ್ವತಃ ಭಜನೆ ಹೇಳಿಕೊಟ್ಟು ಆರಾಧಿಸಿದ್ರು.

RELATED ARTICLES

Related Articles

TRENDING ARTICLES