Monday, December 23, 2024

ಬೆಳ್ತಂಗಡಿ ದಿಡುಪೆ ಸಮೀಪ ಭಾರೀ ಭೂಕುಸಿತ

ದಕ್ಷಿಣ ಕನ್ನಡ : ಜಿಲ್ಲೆಯಲ್ಲಿ ಎಡಬಿಡದೆ ಮಳೆ ಸುರಿಯುತ್ತಿದೆ. ಬೆಳ್ತಂಗಡಿ ತಾಲ್ಲೂಕಿನ ಮಿತ್ತಬಾಗಿಲು ಗ್ರಾಮ ಪಂಚಾಯತಿ ವ್ಯಾಪ್ತಿಯ ಕೊಲ್ಲಿ ನಡ್ತಿಕಲ್ಲು ಆಲದ ಕಾಡು ಎಂಬಲ್ಲಿ 4 ಎಕರೆಯಷ್ಟು ವ್ಯಾಪ್ತಿಯಲ್ಲಿ ಭೂಕುಸಿತ ಉಂಟಾಗಿದೆ.

ಈ ಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಪರಿಣಾಮ ಭೂಕುಸಿತ ಸಂಭವಿಸಿರಬಹುದು ಎನ್ನುತ್ತಾರೆ ಸ್ಥಳೀಯರು. 

ಭೂಕುಸಿತವಾದ ಈ ಪ್ರದೇಶದವು ಮೀಸಲು ಅರಣ್ಯ ಪ್ರದೇಶವಾಗಿದ್ದು ಜನ ವಾಸಿಸುವ ಸ್ಥಳದಿಂದ ಸುಮಾರು 3 ಕಿಮೀ ದೂರದಲ್ಲಿ ಈ ಘಟನೆ ನಡೆದಿದೆ. ಆದ್ದರಿಂದ ಯಾವುದೇ ರೀತಿಯ ಅಪಾಯ ಸಂಭವಿಸಿಲ್ಲ.

ಆದರೆ ಮುಂದೆ ಭಾರೀ ಮಳೆ ಆದಲ್ಲಿ ಪ್ರವಾಹಕ್ಕೆ  ಇದು ಕಾರಣವಾಗುವ ಸಾಧ್ಯತೆ ಇದೆ. ಆ ರೀತಿಯಾದರೆ ಕುಸಿತ ಸಂಭವಿಸಿದ ಜಾಗದ 3 ಕಿಮೀ ಕೆಳಗಡೆ ಹಲವು ಮನೆಗಳಿದ್ದು ಅಪಾಯ ಆಗುವ ಸಂಭವವಿದೆ ಎನ್ನುವ ಆತಂಕ ಎದುರಾಗಿದೆ. ಕಳೆದ ಬಾರಿ ಈ ದಿಡುಪೆ ಗ್ರಾಮ ಭಾರಿ ನೆರೆಗೆ ತುತ್ತಾಗಿತ್ತು.

-ಇರ್ಷಾದ್ ಕಿನ್ನಿಗೋಳಿ

RELATED ARTICLES

Related Articles

TRENDING ARTICLES