Thursday, January 23, 2025

ಪಿಪಿಇ ಕಿಟ್​ಗಳ ಮರುಬಳಕೆ ಶಂಕೆ!?

ಮೈಸೂರು:  ಪಿಪಿಇ ಕಿಟ್ ಗಳನ್ನ ಎಲ್ಲೆಂದ್ರೆ ಅಲ್ಲಿ ಬಿಸಾಡಿ ಸಾರ್ವಜನಿಕರಿಗೆ ಆತಂಕ ತರಲಾಗುತ್ತಿದೆ. ಇಂತಹ ಬೆಳವಣಿಗೆಗಳಿಗೆ ಜಿಲ್ಲಾಡಳಿತ ಬ್ರೇಕ್ ಹಾಕಬೇಕಿದೆ.ಇದೀಗ ಮೈಸೂರಿನಲ್ಲಿ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.ಬಳಸಿದ ಪಿಪಿಇ ಕಿಟ್​ಗಳನ್ನ ಮರುಬಳಕೆ ಮಾಡುತ್ತಿರುವ ಶಂಕೆಯೊಂದು ಮನೆ ಮಾಡಿದೆ. ಮೈಸೂರಿನ ಬೃಂದಾವನ ಬಡಾವಣೆಯಲ್ಲಿರುವ ನ್ಯೂ ಪ್ರಿಯದರ್ಶಿನಿ ಆಸ್ಪತ್ರೆ ಹಿಂಭಾಗದಲ್ಲಿ ಪಿಪಿಇ ಕಿಟ್​ಗಳನ್ನ ಒಗೆದು ಬಟ್ಟೆಗಳಂತೆ ಒಣಗಲು ಹಾಕಲಾಗಿದೆ. ಆಸ್ಪತ್ರೆ ಸಿಬ್ಬಂದಿಗಳ ವರ್ತನೆ ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ.

ಸರ್ಕಾರದ ಗೈಡ್ ಲೈನ್ಸ್ ಪ್ರಕಾರ ಪಿಪಿಇ ಕಿಟ್​ಗಳನ್ನ ನಾಶ ಪಡಿಸಬೇಕು. ಆದ್ರೆ ಇಲ್ಲಿ ಮರುಬಳಕೆ ಆಗುತ್ತಿರುವ ಅನುಮಾನ ಕಾಡುತ್ತಿದೆ. ಇತರ ಬಟ್ಟೆಗಳನ್ನ ಒಗೆದು ಹಾಕುವಂತೆ ಪಿಪಿಇ ಕಿಟ್ ಗಳನ್ನೂ ಸಹ ವಾಶ್ ಮಾಡಿ ಒಣಗಲು ಹಾಕಲಾಗಿದೆ. ಪಿಪಿಇ ಕಿಟ್ ಗಳನ್ನ ಒಗೆದು ಹಾಕುವ ಉದ್ದೇಶವೇನು ಎಂಬುದು ಅರ್ಥವಾಗುತ್ತಿಲ್ಲ. ಪ್ರಿಯದರ್ಶಿನಿ ಆಸ್ಪತ್ರೆಯಲ್ಲಿ ಕಂದಾಯ ಇಲಾಖೆಯ ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈಗಾಗಲೇ ಅಕ್ಕಪಕ್ಕದ ನಿವಾಸಿಗಳಿಗೆ ಕೊವಿಡ್ ಆಸ್ಪತ್ರೆಯಾಗಿರುವುದೇ ಬೇಸರದ ಸಂಗತಿ.ಇದೀಗ ಈ ಬೆಳವಣಿಗೆ ಮತ್ತಷ್ಟು ಆತಂಕ ಸೃಷ್ಟಿಸಿದೆ.ಇದನ್ನ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಾಗ ಸ್ಯಾನಿಟೈಸ್ ಮಾಡಿ ನಾಶಪಡಿಸುತ್ತಿರುವುದಾಗಿ ಆಸ್ಪತ್ರೆ ವೈದ್ಯರು ತಿಳಿಸಿದರಂತೆ. ಕೊನೆಗೆ ಜಿಲ್ಲಾಧಿಕಾರಿಗಳು ನೇರವಾಗಿ ಡಿಸ್ಪೋಸ್ ಮಾಡುವಂತೆ ಸೂಚನೆ ನೀಡಿದ್ದಾರೆ.

RELATED ARTICLES

Related Articles

TRENDING ARTICLES