Monday, December 23, 2024

ನಿವೃತ್ತ ಕಾರ್ಮಿಕರಿಗೆ ಆಸರೆಯಾದ ಶಿವಮೊಗ್ಗ ಎಂ.ಪಿ.

ಶಿವಮೊಗ್ಗ:ವಿಐಎಸ್ಎಲ್ ಕಾರ್ಖಾನೆ ನಿವೃತ್ತ ಕಾರ್ಮಿಕರಿಗೆ ಸಂಸದ ಬಿ.ವೈ. ರಾಘವೇಂದ್ರ ಆಸರೆಯಾಗಿದ್ದಾರೆ. ಕೊರೋನಾ ಸಂಕಷ್ಟದ ಸಮಯದಲ್ಲಿ, ಭದ್ರಾವತಿಯ ವಿಐಎಸ್ಎಲ್ ಕಾರ್ಖಾನೆಯ ನಿವೃತ್ತ ನೌಕರರ ಮನೆ ಬಾಡಿಗೆಯನ್ನು ಶೇ. ನೂರರಷ್ಟು ಹೆಚ್ಚಿಸಲಾಗಿತ್ತು. ಈ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿದ ಸಂಸದ ರಾಘವೇಂದ್ರ, ಇಂದು ವಿಐಎಸ್ಎಲ್​ನ ನಿರ್ದೇಶಕ ಕೆ.ಎಲ್. ರಾವ್ ಅವರನ್ನು ಭೇಟಿ ಮಾಡಿ ಹೆಚ್ಚಿಸಿರುವ ಮನೆ ಬಾಡಿಗೆಯನ್ನು ಇಳಿಸುವಂತೆ ಕೋರಿದ್ರು. ಅಲ್ಲದೇ, ವಿಐಎಸ್ಎಲ್​​ಗೆ ತಕ್ಷಣಕ್ಕೆ ಅಗತ್ಯವಿರುವ ಸುಮಾರು 20 ಕೋಟಿ ರೂ. ಬಂಡವಾಳದ ಬಗ್ಗೆ ಸೈಲ್ ನ ಚೇರ್ಮನ್ ಬಳಿ ಚರ್ಚಿಸಿದ್ದು, ಇದು ಫಲಪ್ರದವಾಗುವ ಲಕ್ಷಣ ಕಂಡು ಬಂದಿದೆ ಎಂದು ತಿಳಿಸಿದರು. ಇದರ ಜೊತೆಗೆ, ಎಂಪಿಎಂ ಪುನರುಜ್ಜೀವನದ ಬಗ್ಗೆ ಖಾಸಗಿ ಸಂಸ್ಥೆಯೊಂದರ ಸಹಭಾಗಿತ್ವದಲ್ಲಿ ಪುನರ್ ಆರಂಭದ ಬಗ್ಗೆ ಚರ್ಚಿಸಲಾಗಿದೆ ಎಂದರು. ಸುಮಾರು 3 ವರೆ ಸಾವಿರ ಕಬ್ಬು ಬೆಳೆಗಾರರಿಗೆ ಸಹಾಯವಾಗುವ ನಿಟ್ಟಿನಲ್ಲಿ 2010-11 ರ ಪ್ರತಿ ಟನ್ ಗೆ ಹೆಚ್ಚುವರಿಯಾಗಿ 100 ರೂ. ಗಳನ್ನು ಕೊಡಿಸುವ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಎಂ.ಪಿ.ಎಂ. ನ ಕಾರ್ಮಿಕರ ಎಲ್ಲಾ ಸಮಸ್ಯೆಗಳ ಪರಿಹಾರಕ್ಕೆ ಇನ್ನು ಕೆಲವೇ ದಿನಗಳಲ್ಲಿಕ ಪರಿಹಾರ ದೊರಕಿಸಿಕೊಡುವ ಪ್ರಯತ್ನ ನಡೆಸಲಾಗಿದೆ ಎಂದು ಸಂಸದ ರಾಘವೇಂದ್ರ ಹೇಳಿದ್ರು. ಈ ಮೂಲಕ ಭದ್ರಾವತಿಯ ಅವಳಿ ಕಾರ್ಖಾನೆ ಕಾರ್ಮಿಕರ ಹಿತದೃಷ್ಟಿಯಿಂದ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ವಿಐಎಸ್ಎಲ್ ಮುಖ್ಯ ವ್ಯವಸ್ಥಾಪಕ ವಿಶ್ವನಾಥ್, ನಿವೃತ್ತ ಕಾರ್ಮಿಕ ಮುಖಂಡರುಗಳಾದ ಹನುಮಂತರಾವ್ ರಾಮಲಿಂಗಯ್ಯ, ನರಸಿಂಹಮೂರ್ತಿ, ಎಸ್ ಎನ್ ಬಾಲಕೃಷ್ಣ, ಚಂದ್ರಹಾಸ್, ಜಗದೀಶ್, ಅಮೃತ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

RELATED ARTICLES

Related Articles

TRENDING ARTICLES