Monday, January 20, 2025

ಫ್ಯಾಂಟಮ್​ ಟೀಮ್​ನಿಂದ ಕಿಚ್ಚನ ಅಭಿಮಾನಿಗಳಿಗೆ ಸಿಕ್ತು ಮತ್ತೊಂದು ಸೂಪರ್ ಗಿಫ್ಟ್​..!

ಬೆಂಗಳೂರು  : ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಫ್ಯಾಂಟಮ್ ಸಿನಿತಂಡ ಸಾಲು ಸಾಲು ಗಿಫ್ಟ್​ಗಳನ್ನು ಕೊಡ್ತಿದೆ.  ಕೊರೋನಾ ಲಾಕ್​ಡೌನ್  ಬ್ರೇಕ್​ನ ಬಳಿಕ ಕೆಲಸದಲ್ಲಿ ಬ್ಯುಸಿ ಆಗಿರೋ ಫ್ಯಾಂಟಮ್ ಟೀಮ್ ಅಭಿಮಾನಿಗಳಿಗೆ ಚಿತ್ರದ ಅಪ್​ಡೇಟ್​ಗಳನ್ನು ಆಗಾಗ ನೀಡ್ತಿದೆ.

ಈಗಾಗಲೇ ಟೀಸರ್ ಹಾಗೂ ಸುದೀಪ್ ಕಾಸ್ಟ್ಯೂಮ್​ ಬಿಡುಗಡೆ ಮಾಡಿ ಸರ್​ಪ್ರೈಸ್ ಗಿಫ್ಟ್​ ಕೊಟ್ಟಿದ್ದ ಫ್ಯಾಂಟಮ್ ಬಳಗ ಇಂದು ಮತ್ತೊಂದು ಸೂಪರ್ ಗಿಫ್ಟ್ ನೀಡಿದೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಫಸ್ಟ್ ಲುಕ್ ಬಿಡುಗಡೆಯಾಗಿದ್ದು, ಕಿಚ್ಚನ ಹೊಸ ಗೆಟಪ್​ಗೆ ಫ್ಯಾನ್ಸ್ ಫುಲ್ ಫಿದಾ ಆಗಿದ್ದಾರೆ.

`ರಂಗಿತರಂಗ’ ಖ್ಯಾತಿಯ ಅನೂಪ್ ಭಂಡಾರಿ ಆ್ಯಕ್ಷನ್ ಕಟ್ ಹೇಳುತ್ತಿದ್ದು, ಅನೂಪ್  -ಸುದೀಪ್​​ ಕಾಂಬಿನೇಷನ್​ ಸಿನಿಮಾದ ಮೇಲೆ  ಬಹಳ ನಿರೀಕ್ಷೆ ಇದೆ.

RELATED ARTICLES

Related Articles

TRENDING ARTICLES