Sunday, December 22, 2024

ಕೊವಿಡ್ ಜೊತೆಗೆ ಮನುಷ್ಯನದು ಒಂಟಿ ಕೈ ಯುದ್ಧ : CPI ಭಾವನಾತ್ಮಕ ಪತ್ರ

ಬಳ್ಳಾರಿ : ಕೊರೋನಾ ಸೋಂಕಿಗೆ ಒಳಗಾಗಿರುವ ಬಳ್ಳಾರಿ ಗಾಂಧಿನಗರದ CPI ಭಾವನಾತ್ಮಕ ಪತ್ರ ಬರೆದಿದ್ದಾರೆ. ಕೊವಿಡ್ ತಂದೊಡ್ಡಿರುವ ಸವಾಲು ಮತ್ತು ತಾಪತ್ರಯಗಳ ಕುರಿತು ಭಾವುಕ ಮಾತುಗಳನ್ನು ಹಂಚಿಕೊಂಡಿದ್ದಾರೆ. ಕೊರೋನಾ ವಾರಿಯರ್ ಆಗಿ ಸ್ವತಃ ತಮಗೇ ಪಾಸಿಟಿವ್ ಆದಾಗ ಅಗಿರುವ ಅನುಭವನ್ನು CPI ಗಾಯತ್ರಿ ರೊಡ್ಡ ಫೇಸ್​ಬುಕ್ ನಲ್ಲಿ ಹಂಚಿಕೊಂಡಿದ್ದಾರೆ.

ಪತ್ರದ ಸಾರಾಂಶ:

ಹಾಯ್ ಫ್ರೆಂಡ್ಸ್,
ಸುಮಾರು ವರ್ಷಗಳಾದ ಮೇಲೆ ನಿಮ್ಮ ಜೊತೆ ಫೀಲಿಂಗ್ಸ್ ಶೇರ್ ಮಾಡ್ಬೇಕು ಅನಿಸ್ತಿದೆ. ನಂಗೆ ಕೊರೋನಾ ಬಂದು ಹದಿನಾಲ್ಕು ದಿನ ಆಯ್ತು. ಈ 14 ದಿನಗಳಲ್ಲಿ ಚಿತ್ರವಿಚಿತ್ರ ಸನ್ನಿವೇಶಗಳನ್ನು ಎದುರಿಸಿದ್ದೇನೆ. ಪೊಲೀಸ್ ಇಲಾಖೆಯಲ್ಲಿ ಇರುವವರು ಎಷ್ಟೆಲ್ಲ ಕಷ್ಟಪಟ್ಟು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ನಮಗೂ ಜನಸಾಮಾನ್ಯರಂತೆ ಹೆಂಡತಿ, ಗಂಡ,ಮಕ್ಕಳು ಸಹೋದರರು ಇದ್ದಾರೆ. ನಮಗೂ ನಮ್ಮವರು ಇದ್ದಾರೆ. ನಿಷ್ಠೆಯಿಂದ ನಾನು ನನ್ನ ಅಧಿಕಾರಿ ಸಿಬ್ಬಂದಿ ಗಾಂಧಿನಗರ ಲಿಮಿಟ್ಸ್ ನಲ್ಲಿ ಕೆಲಸ ಮಾಡ್ತಾ ಇದ್ದೀವಿ.

ಸೀಲ್​ಡೌನ್ ಟೈಮ್ ನಲ್ಲಿ ನನ್ನ ಗಾಂಧಿನಗರ ಲಿಮಿಟ್ಸ್ ನಲ್ಲಿ
ಒಟ್ಟು ಹತ್ತರಿಂದ ಹನ್ನೆರಡು ಕ್ವಾರೆಂಟೈನ್ ಕೇಂದ್ರ, 1 ಕೊವಿಡ್ ಆಸ್ಪತ್ರೆ, 1 ರೈಲ್ವೆ ಸ್ಟೇಷನ್, 4 ಮಾರುಕಟ್ಟೆ ಪ್ರದೇಶ, ಒಂದು ಪ್ರಾಥಮಿಕ ಆರೋಗ್ಯ ಕೇಂದ್ರ ಹೀಗೆ ಎಲ್ಲರೂ ಕರ್ತವ್ಯ ನಿರ್ವಹಿಸಿದ್ದೇವೆ. ನಮ್ಮ ಅಧಿಕಾರಿಗಳು ಸಹ ನಮಗೆ ಬೆನ್ನೆಲುಬಾಗಿ ನಿಂತರು. ಪ್ರತಿಯೊಬ್ಬರು ತಮ್ಮ ತಮ್ಮ ಕುಟುಂಬವನ್ನು ಮರೆತು ಹೃದಯಪೂರ್ವಕವಾಗಿ ಕೆಲಸ ಮಾಡಿದರು ಮತ್ತು ಮಾಡ್ತಿದಾರೆ. ಇದೀಗ ನನಗೂ ಸೇರಿ ನನ್ನ ಹನ್ನೆರಡು ಜನ ಸಿಬ್ಬಂದಿಗಳಿಗೆ ಪಾಸಿಟಿವ್ ಆಗಿದೆ.

ಸದ್ಯ ನನಗೆ ಕೊವಿಡ್ ಇದ್ದು ನ್ಯಮೇನಿಯ ಸಹ ಇದೆ. ಮಜಾ ಅಂದ್ರೆ ರೋಗದ ಜೊತೆ ನಾನು ಅಪರಾಧಿ ಥರ ಬಿಂಬಿತ ಆಗ್ತಿದೀನಿ. ಒಂದು ಕಡೆ ನನ್ನನ್ನು ಅಪರಾಧಿ ಥರ ಕಾಣೋರು. ಮತ್ತೊಂದು ಕಡೆ ನಾವೆಲ್ಲ ಇದೀವಿ ಅಂತ ಧೈರ್ಯ ತುಂಬೋರು. ಈ ಕೊವಿಡ್ ಮನುಷ್ಯನ ಎಲ್ಲ ಸಂಬಂಧಗಳನ್ನು ಹಾಳುಮಾಡಿದೆ. ಕಷ್ಟದಲ್ಲಿ ಇರೋರನ್ನ ಅಪ್ಪಿಕೊಂಡು ಅಳುವ ಹಾಗಿಲ್ಲ, ಸಂತೋಷದಲ್ಲಿ ಪಾಲ್ಗೊಳ್ಳೋಕೆ ಆಗಲ್ಲ, ನಮ್ಮವರು ಸತ್ತಾಗ ಅಂತಿಮ ಕ್ರಿಯೆಗಳಿಗೆ ಹೋಗಲು ಸಹ ಭಯದ ವಾತಾವರಣ ನಿರ್ಮಾಣ ಆಗಿದೆ.

ಇವತ್ತು ಇರೋರು ನಾಳೆ ಇಲ್ಲ. ಆ ಬಳ್ಳಾರಿ ದುರ್ಗಮ್ಮ ಊರನ್ನು ಕಾಪಾಡ್ಬೇಕು. ಇದು ಮನುಷ್ಯನಿಗೆ ಇದ್ದ ಅಹಂ ಕಡಿಮೆ ಮಾಡಿಕೊಳ್ಳಲು ಆ ದೇವರೇ ಹೀಗೆ ಮಾಡ್ತಾ ಇದಾನೇನೋ ಅಂತ ಅನಿಸ್ತಾ ಇದೆ. ಇಷ್ಟು ದಿನ ಹಣ ಮತ್ತು ಪ್ರತಿಷ್ಠೆಗೆ ಕೊಡುತ್ತಿದ್ದ ಆದ್ಯತೆ ಬದಲಾಯಿಸಿಕೊಳ್ಳಬೇಕು. ಪ್ರೀತಿ,ಪ್ರೇಮ,ಕರುಣೆ,ದಾನ ಧರ್ಮ ಈ ಭೂಮಿ ಮೇಲೆ ಹೆಚ್ಚಾಗಬೇಕಿದೆ. ನನ್ನ ದೃಷ್ಠಿಯಲ್ಲಿ ಧರ್ಮ ಅಂದ್ರೆ ಒಳ್ಳೆಯದ್ದು ಮತ್ತು ಅಧರ್ಮ ಅಂದ್ರೆ ಕೆಟ್ಟದ್ದು ಅಂತ ಅರ್ಥ.

ಕೊರೋನಾ ಬಂತು ಅಂದ ಕೂಡಲೇ ಯಾರೂ ಹೆದರುವುದು ಬೇಡ. ನಿಮ್ಮ ಆತ್ಮವಿಶ್ವಾಸ ನಿಮ್ಮನ್ನು ಕಾಪಾಡೋದು. ಹಿಂದಿಯಲ್ಲಿ ಒಂದು ಮಾತಿದೆ ‘ ಜೋ ಢರ್ ಗಯಾ ತೋ ವೋ ಮರ್ ಗಯಾ ‘ ಅಂತ. ಎಷ್ಟು ದಿನ ಇರ್ತಿವಿ ಅಷ್ಟು ದಿನ ಈ ಜೀವನ ಮತ್ತು ರೋಗದ ಜೊತೆ ಯೋಧರಾಗಿ ಹೋರಾಡೋಣ. ನಮ್ಮ ಕುಟುಂಬ ಮತ್ತು ನಮ್ಮ ನಂಬಿದವರಿಗಾಗಿ ನಾವು ಬದುಕಬೇಕಿದೆ. ಹೆದರದೆ ಹೋರಾಡೋಣ. ಸದ್ಯ ಕೊರೋನಾ ಜೊತೆ ಹೋರಾಡೋದು ಅಂದ್ರೆ ಒಂಟಿ ಕೈಯಿಂದ ಯುದ್ದ ಮಾಡಿದಂತೆ.! ನಮಗೆ ನಾವೇ ಈಗ. ಸೆಲ್ಫ್ ಮೆಡಿಷನ್ ಮೊರೆ ಹೋಗದಿರಿ. ಅದು ತುಂಬಾ ಅಪಾಯಕಾರಿ. ಆಸ್ಪತ್ರೆ ಸಂಪರ್ಕಿಸಿ. ನಾನಂತೂ ಸೊಲೊಪ್ಪಿಕೊಳ್ಳಲ್ಲ. ತುಂಬಾ ಅದ್ಭುತವಾಗಿ ರೋಗದ ವಿರುದ್ಧ ಹೋರಾಡುತ್ತಿರುವೆ. ನೀವು ಸಹ ತುಂಬಾ ಜಾಗೃತವಾಗಿರಿ. ಮಾನಸಿಕವಾಗಿ ಧೈರ್ಯದಿಂದಿರಿ. ಸಿಗೋಣ, ಹತ್ತಿರವಿಲ್ಲದೇ ಇದ್ದರೆ ಏನಾಯ್ತು ಮಾನಸಿಕವಾಗಿ ಒಬ್ಬರಿಗೊಬ್ಬರು ಶಕ್ತಿ ಕೊಡೋಣ.. ಜೈ ಹಿಂದ್

ಗಾಯತ್ರಿ ರೊಡ್ಡ CPI

RELATED ARTICLES

Related Articles

TRENDING ARTICLES