ದಕ್ಷಿಣ ಕನ್ನಡ : SSLC ಪರೀಕ್ಷಾ ಫಲಿತಾಂಶದಲ್ಲಿ ರಾಜ್ಯಕ್ಕೆ ಟಾಪರ್ ಆದ ಸುಳ್ಯದ ವಿದ್ಯಾರ್ಥಿ ಅನುಷ್ ಎಎಲ್ ಅವರಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಚ್ಚರಿ ಮೂಡಿಸಿದರು. ಮಧ್ಯಾಹ್ನ 3 ಗಂಟೆಗೆ ರಿಸಲ್ಟ್ ಪ್ರಕಟವಾಗುತ್ತಿದ್ದಂತೆ ಜಿಲ್ಲೆಯಾದ್ಯಂತ ಸಾಮಾಜಿಕ ಜಾಲತಾಣಗಳಲ್ಲಿ ಅನುಷ್ ಸಾಧನೆಗೆ ಜನ ಭೇಷ್ ಎನ್ನುತ್ತಿದ್ದರೆ, ಸಾಯಂಕಾಲವಾಗುತ್ತಲೇ ರಾಜ್ಯ ಮುಜರಾಯಿ ಸಚಿವರೂ ಆದ, ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ SSLC ಟಾಪರ್ ಅನುಷ್ ಎಎಲ್ ಅವರಿಗೆ ಕರೆ ಮಾಡಿ ಅಭಿನಂದನೆ ಸಲ್ಲಿಸಿದರು. ಸಚಿವರ ಕರೆಯಿಂದ ಅನುಷ್ ಖುಷಿ ಜೊತೆಗೆ ಅಚ್ಚರಿಯನ್ನೂ ಪಡುವಂತಾಯಿತು. ಅನುಷ್ ಸಾಧನೆಗೆ ಮೆಚ್ಚುಗೆ ಸೂಚಿಸಿದ ಸಚಿವರು, ತಮ್ಮ ಸಾಧನೆ ಜಿಲ್ಲೆಯ ಕೀರ್ತಿಯನ್ನ ಹೆಚ್ಚಿಸಿದೆ ಎಂದು ಅಭಿನಂದಿಸುವ ಮೂಲಕ ಸರಳತೆ ಮೆರೆದರು.
ಅನುಷ್, ಸುಳ್ಯ ತಾಲೂಕಿನ ಸುಬ್ರಹ್ಮಣ್ಯದ ವಿದ್ಯಾನಗರದಲ್ಲಿರುವ ಕುಮಾರಸ್ವಾಮಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಯಾಗಿದ್ದಾರೆ. 625/625 ಅಂಕ ಪಡೆದ ಅನುಷ್, ಬಳ್ಪ ಗ್ರಾಮದ ಲೋಕೇಶ್ ಹಾಗೂ ಉಷಾ ದಂಪತಿ ಪುತ್ರನಾಗಿದ್ದಾರೆ.
ಇರ್ಷಾದ್ ಕಿನ್ನಿಗೋಳಿ
ಪವರ್ ಟಿವಿ, ಮಂಗಳೂರು