Sunday, May 19, 2024

ತರಕಾರಿಗಳ ರೇಟು ಹೆಚ್ಚಳ:ಅನ್ನದಾತನ ಮುಖದಲ್ಲಿ ಮೂಡಿದೆ ಮಂದಹಾಸ

ಕೋಲಾರ: ಜಿಲ್ಲೆಯಲ್ಲಿ ತರಕಾರಿ ರೇಟು ಸುಧಾರಣೆಯಾಗಿದೆ. ಲಾಕ್ ಡೌನ್ ವೇಳೆಯಲ್ಲಿ ತರಕಾರಿಗಳನ್ನು ಚರಂಡಿಗೆ ಎಸೆಯಲಾಗಿತ್ತು. ಆದ್ರೆ, ಜಿಲ್ಲೆಯಲ್ಲಿ ಬೇಸಿಗೆ, ಮಳೆ ಹಾಗೂ ಟಮೊಟೋ ಬೆಳೆ ಜಾಸ್ತಿಯಾದ್ದರಿಂದ ತರಕಾರಿ ಬೆಳೆಗಳು ಕಡಿಮೆಯಾಗಿದೆ. ಇದ್ರಿಂದ ಏರಿಕೆ ಕಂಡಿರುವ ತರಕಾರಿ ರೇಟುಗಳಿಂದಾಗಿ ರೈತರಿಗೆ ಕೊಂಚ ನೆಮ್ಮದಿಯಾಗಿದೆ.ಕೋಲಾರ ಜಿಲ್ಲೆಯ ರೈತರು ಲಾಕ್ಡೌನ್ ವೇಳೆಯಲ್ಲಿ ಅತ್ಯಂತ ಕಷ್ಟವನ್ನು ಅನುಭವಿಸಿದ್ರು. ಬೆಳೆದ ತರಕಾರಿಗಳನ್ನು ವಿಲೇವಾರಿ ಮಾಡಲಾಗದೆ ಕಂಗಾಲಾಗಿದ್ರು. ಬೆಳೆಗಳನ್ನು ತೋಟದಲ್ಲಿಯೇ ಉಳುಮೆ ಮಾಡಿ ದುಃಖಪಟ್ರು. ಆದ್ರೆ, ಜಿಲ್ಲೆಯಲ್ಲಿ ಇತ್ತೀಚೆಗೆ ಜಿಲ್ಲೆಯಲ್ಲಿ ಹೆಚ್ಚಾದ ಬೇಸಿಗೆ ಹಾಗೂ ಇತ್ತೀಚೆಗೆ ಬಿದ್ದ ಮಳೆಯು ಅನ್ನದಾತರಿಗೆ ಪೆಟ್ಟುಕೊಟ್ಟಿದೆ. ಜೊತೆಗೆ ಜೂನ್, ಜುಲೈ, ಆಗಸ್ಟ್​ನಲ್ಲಿ ರೈತರು ಟೊಮ್ಯಾಟೊ ಬೆಳೆ ಮೇಲೆ ಅವಲಂಬಿತರಾಗಿ, ತರಕಾರಿ ಬೆಳೆಗಳು ಕಡಿಮೆ ಬೆಳೆದಿದ್ದರಿಂದ ಇದೀಗ ತರಕಾರಿ ರೇಟು ಚೇತರಿಸಿಕೊಂಡಿದೆ.

ಮೂರು ತಿಂಗಳಲ್ಲಿ ಟೊಮ್ಯಾಟೊ ಬೆಳೆ ಮಾಡೋದ್ರಿಂದ ಹೆಚ್ಚು ಕಾಸು ಸಿಗುತ್ತೆ ಅಂತಾ ಜಿಲ್ಲೆಯ ರೈತರು ಹೆಚ್ಚಾಗಿ ಟೊಮ್ಯಾಟೋ ಬೆಳೆ ಮೇಲೆ ಅವಲಂಬಿತರಾಗಿದ್ರು. ಇದ್ರಿಂದ ತರಕಾರಿಗಳನ್ನ ಬೆಳೆಯೋ ಪ್ರಮಾಣವನ್ನು ಕಡಿಮೆ ಮಾಡಿದ್ರು. ಈ ಮೊದಲು ಪ್ರತಿದಿನ 10 ಟನ್ ತರಕಾರಿ ಮಾರುಕಟ್ಟೆಗೆ ಬರ್ತಾಯಿತ್ತು. ಆದ್ರೆ, ಇದೀಗ ಪ್ರತಿ ದಿನ 3 ಟನ್ ತರಕಾರಿ ಬರ್ತಾಯಿದೆ. ಈಗ ಸುರಿಯುತ್ತಿರುವ ಮಳೆಯಿಂದ ಕೆಲವು ತರಕಾರಿ ಬೆಳೆಗಳು ರೋಗದಿಂದ ನಾಶವಾಗಿದೆ. ಅಳಿದುಳಿದ ತರಕಾರಿಗಳ ಬೆಲೆಯು ಹೆಚ್ಚಾಗೋದಿಕ್ಕೆ ಇದೂ ಒಂದು ಕಾರಣವಾಗಿದೆ.ಕೋಲಾರ ಇದೀಗ ಬಹುತೇಕ ಎಲ್ಲ ತರಕಾರಿಗಳ ಬೆಲೆಯೂ ಜಾಸ್ತಿಯಾಗಿದೆ. ಸಾಧಾರಣ ಬೆಲೆ ಇರುತ್ತಿದ್ದ ಬೀನ್ಸು, ಬದನೆಕಾಯಿ, ನುಗ್ಗೇಕಾಯಿ, ಕ್ಯಾರೇಟ್, ಹೂ ಕೋಸು, ಕ್ಯಾಪ್ಸಿಕಮ್, ಬಟಾಣಿ ರೇಟು ದುಪ್ಪಟ್ಟಾಗಿದೆ.

ಜೊತೆಗೆ ಪಾಲಕ್, ದಂಟು, ಪುದೀನಾ, ಕೊತ್ತಂಬರಿ ಸೊಪ್ಪು ಬೆಲೆಯೂ ಕಡಿಮೆಯೇನಿಲ್ಲ ಅಂತಾರೆ ವ್ಯಾಪಾರಸ್ಥರು.
ಒಟ್ನಲ್ಲಿ, ತರಕಾರಿಗಳಿಗೆ ರೇಟು ಇಲ್ಲ ಅಂತಾ ಯಾವಾಗ್ಲೂ ಸಪ್ಪೆ ಮೊರೆ ಹಾಕುತ್ತಿದ್ದ ಅನ್ನದಾತರು, ಇದೀಗ ರೇಟು ಸಿಕ್ಕಿರೋದ್ದಿಕ್ಕೆ ಸ್ವಲ್ಪ ಸಮಾಧಾನ ತಂದುಕೊಂಡಿದ್ದಾರೆ. ಈ ರೇಟು ಇನ್ನೆಷ್ಟು ದಿನ ಇರುತ್ತೆ ಅಂತ ಪ್ರಶ್ನೆನೂ ಕೂಡಾ ಮಾಡಿಕೊಳ್ಳುತ್ತಿದ್ದಾರೆ.

-ಆರ್.ಶ್ರೀನಿವಾಸಮೂರ್ತಿ

RELATED ARTICLES

Related Articles

TRENDING ARTICLES