Monday, May 20, 2024

‘ಕೊವಿಡ್-19 ಉಪಕರಣ ಖರೀದಿಯಲ್ಲಿ ಎರಡು ಸಾವಿರ ಕೋಟಿ ಲೂಟಿ ಆಗಿದೆ’: ಮಾಜಿ ಸಚಿವೆ ಉಮಾಶ್ರೀ

ಕೊಪ್ಪಳ: ಕೊಪ್ಪಳದಲ್ಲಿ ಇಂದು ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ಮಾಡಿತು ಪ್ರತಿಭಟನೆಗೂ ಮುನ್ನ ಮಾಜಿ ಸಚಿವೆ ಉಮಾಶ್ರೀ ಮಾತನಾಡಿ, ರಾಜ್ಯ ಸರ್ಕಾರದ ವೈಫಲ್ಯಗಳ ಬಗ್ಗೆ ಮಾಹಿತಿ ನೀಡಿದ್ರು‌. ಕೊರೋನಾ ಸಂದರ್ಭದಲ್ಲಿ ಸರಕಾರ ನಡೆದುಕೊಂಡಿರುವ ರೀತಿ ಸರಿಯಾಗಿಲ್ಲ. ಕೋವಿಡ್-19 ಉಪಕರಣ ಖರೀದಿಗೆ ಸಂಬಂಧಿಸಿದಂತೆ ಸರಕಾರ ಇದರಿಂದ ನುಣುಚಿಕೊಳ್ಳುತ್ತಿದೆ. ಎರಡು ಸಾವಿರ ಕೋಟಿ ರೂ.  ಕೊವಿಡ್-19 ಉಪಕರಣ ಖರೀದಿಯಲ್ಲಿ ಲೂಟಿ ಆಗಿದೆ. ಸಾರ್ವಜನಿಕರ ಹಣ ಇದರಿಂದ ಲೂಟಿ ಆಗುತ್ತಿದೆ ಈ ಬಗ್ಗೆ ರಾಜ್ಯದ ಬಿಜೆಪಿ ನಾಯಕರು ಮಾತಡ್ತಿಲ್ಲಾ.

ಉಚ್ಚ ನ್ಯಾಯಾಲಯದ ನ್ಯಾಯಾಧೀಶರಿಂದ ಹಗರಣದ ಬಗ್ಗೆ ತನಿಖೆ ಮಾಡಿಸಬೇಕು, ಇಲ್ಲವೆ ರಾಜ್ಯ ಸರಕಾರವೇ ತನಿಖೆ ಮಾಡಿಸಬೇಕು.ಇದಕ್ಕೊಸ್ಕರಾನೆ ರಾಜ್ಯದ ಜನರ ಅನುಕೂಲಕ್ಕಾಗಿ ಕಾಂಗ್ರೆಸ್ ಪಕ್ಷ ಆರೋಗ್ಯ ಹಸ್ತ ಕಾರ್ಯಕ್ರಮವನ್ನು ಜಾರಿಗೆ ತರುತ್ತಿದ್ದು, ಪ್ರತಿ ಗ್ರಾ.ಪಂ. ವ್ಯಾಪ್ತಿಯ ಇಬ್ಬರನ್ನು ನೇಮಿಸಿ, ಸೋಂಕು ತಡೆಗಟ್ಟುವ ಬಗ್ಗೆ ಜಾಗೃತಿ ಮೂಡಿಸಲಾಗುವುದು ಎಂದರು. ಇನ್ನೂ ಮುಂದುವರಿದು ಕೇಂದ್ರ ಸರ್ಕಾರ ಯೋಜನೆಗಳ ಬಗ್ಗೆ ತರಾಟೆ ತಗೆದುಕೊಂಡ್ರು. ಕೇಂದ್ರ ಸರಕಾರದ 20 ಲಕ್ಷ ಕೋಟಿ ಯಾರಿಗೆ ಬಂದು ತಲುಪಿದೆ ಎಂದು ಪ್ರಶ್ನಿಸಿದರು. ಆತ್ಮನಿರ್ಭರ ಭಾರತದ ಬಗ್ಗೆ ಮಾತನಾಡುವ ಬಿಜೆಪಿಯವರಿಗೆ ಆತ್ಮವನ್ನೆ ಕಳೆದುಕೊಂಡ ನಿರ್ಜೀವಿಯಾಗಿದ್ದಾರೆ ಎಂದು ಮಾಜಿ ಸಚಿವೆ ಉಮಾಶ್ರೀ ಕಿಡಿಗಾರಿದರು.

-ಶುಕ್ರಾಜ ಕುಮಾರ್

RELATED ARTICLES

Related Articles

TRENDING ARTICLES