ತುಮಕೂರು : ಹಾಸನ ಸೇರಿದಂತೆ ಹೇಮಾವತಿ ನಾಲಾ ಭಾಗದಲ್ಲಿ ಅತಿ ಹೆಚ್ಚು ಮಳೆಯಾಗುತ್ತಿದ್ದು ಹೇಮಾವತಿ ನದಿ ತುಂಬಿ ಹರಿಯುತ್ತಿದೆ. ಈ ಹಿನ್ನೆಲೆ ಹಾಸನ ಜಿಲ್ಲೆಯ ಗೂರೂರು ಜಲಾಶಯದಿಂದ ತುಮಕೂರು, ಮಂಡ್ಯ, ಮೈಸೂರು ಹಾಗೂ ಹಾಸನದ ಕೆಲ ತಾಲೂಕುಗಳಿಗೆ ಇಂದು ರಾತ್ರಿಯಿಂದಲೇ ನೀರು ಹರಿಸಲು ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯ ಸೂಚಿಸಿದ್ದಾರೆ. ಗೂರೂರು ಹೇಮಾವತಿ ಜಲಾಶಯದಿಂದ ಇಂದು 20,000 ಕ್ಯೂಸೆಕ್ಸ್ ನೀರು ಹೊರಬಿಡಲಾಗಿದ್ದು, ತುಮಕೂರು ಜಿಲ್ಲೆ ಸೇರಿದಂತೆ ಮಂಡ್ಯ, ಮೈಸೂರು, ಹಾಸನದ ಕೆಲ ಭಾಗಗಳಿಗೂ ಇಂದು ರಾತ್ರಿಯಿಂದಲೇ ಹೇಮಾವತಿ ನೀರು ಹರಿಯಲಿದೆ. ಸರ್ಕಾರದ ಈ ನಿರ್ಣಯದಿಂದ ಮಳೆಯಿಲ್ಲದೇ ಕಂಗಾಲಾಗಿದ್ದ ತುಮಕೂರು ಜಿಲ್ಲೆಯ ಜನತೆಗೆ ಸಂತಸ ಉಂಟಾಗಿದೆ.
ಹೇಮಂತ್ ಕುಮಾರ್. ಜೆ.ಎಸ್ ಪವರ್ ಟಿವಿ ತುಮಕೂರು.