ಶಿವಮೊಗ್ಗ : ಜಿಲ್ಲೆಯ ಶಿಕಾರಿಪುರದ ಜೀವನಾಡಿ ಅಂಜನಾಪುರ ಜಲಾಶಯ ಭರ್ತಿಯಾಗಿದೆ. ಕಳೆದ ಹಲವಾರು ದಿನಗಳಿಂದ ಸುರಿಯುತ್ತಿರುವ ಆಶ್ಲೇಷ ಮಳೆಗೆ ಅಂಜನಾಪುರ ಡ್ಯಾಂ ತುಂಬಿದ್ದು ಇಂದು ಕೋಡಿ ಬಿದ್ದಿದ್ದು ಈಗಾಗಲೇ ಡ್ಯಾಂನಿಂದ ನೀರು ಹೊರಬೀಳುತ್ತಿದೆ. ಶಿಕಾರಿಪುರ ನಗರ ಮತ್ತು ಶಿರಾಳಕೊಪ್ಪ ಪಟ್ಟಣಗಳಿಗೆ ಕುಡಿಯುವ ನೀರು ಸರಬರಾಜು ಮತ್ತು ತಾಲೂಕಿನ ರೈತರಿಗೆ ಬೇಸಿಗೆಯ ಬೆಳೆಗೆ ನೀರು ಒದಗಿಸುವ ಡ್ಯಾಂ ಇದಾಗಿದ್ದು, ತಾಲೂಕಿನ ರೈತರು ಮತ್ತು ಜನತೆಗೆ ಖುಷಿಯಾಗಿದೆ.
ಇನ್ನು ಡ್ಯಾಂ ಭರ್ತಿಯಾಗುತ್ತಿದ್ದಂತೆ, ವೀಕ್ಷಿಸಲು ತಾಲೂಕಿನ ಸುತ್ತಮುತ್ತಲಿನ ನಾಗರೀಕರು ಇಂದು ಮುಗಿಬಿದ್ದಿದ್ರು. ಅಲ್ಲದೇ, ಶಾಲಾ, ಕಾಲೇಜು ಇಲ್ಲದಿರುವ ಹಿನ್ನೆಲೆಯಲ್ಲಿ ಇಂದು ಜಲಾಶಯ ವೀಕ್ಷಣೆಗೆ ಜನರು ಆಗಮಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿ ಜಲಾಶಯದ ಸೌಂದರ್ಯವನ್ನು ಸವಿಯುತ್ತಿದ್ದು, ಪ್ರವಾಹೋಪಾದಿಯಲ್ಲಿ ಜಲಾಶಯದಿಂದ ನೀರು ಹೊರ ಬೀಳುತ್ತಿದೆ.