Wednesday, January 22, 2025

ಮತ್ತೆ ಬೀದಿಗಿಳಿದ ಅಂಗನವಾಡಿ ಕಾರ್ಯಕರ್ತೆಯರು

ಶಿವಮೊಗ್ಗ : ನಾ ಕೊಡೆ, ನೀ ಬಿಡೇ ಎಂಬಂತಾಗಿದೆ, ಈ ಆಶಾ ಮತ್ತು ಅಂಗನವಾಡಿ ಕಾರ್ಯರ್ತೆಯರ ಬೇಡಿಕೆಗಳು. ಅದೆಷ್ಟು ಸರ್ಕಾರಗಳು ಬಂದು ಹೋದರೂ ಇವರ ಬೇಡಿಕೆಗಳೇ ಈಡೇರುತ್ತಿಲ್ಲ. ಅದರಂತೆ, ತಮ್ಮ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಶಿವಮೊಗ್ಗದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಇಂದು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದಾರೆ.

ಅಂಗನವಾಡಿ ಕಾರ್ಯಕರ್ತೆಯರು, ಬಿಸಿಯೂಟ ನೌಕರರು ಹಲವು ವರ್ಷಗಳಿಂದ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಹೋರಾಟ ನಡೆಸುತ್ತಲೇ ಬಂದಿದ್ದಾರೆ. ಆದರೆ ಸರ್ಕಾರ ಯಾವ ಬೇಡಿಕೆಯನ್ನು ಈಡೇರಿಸಿಲ್ಲ ಮತ್ತು ಕೆಲಸಗಾರರಿಗೆ ಸುರಕ್ಷತೆ ನೀಡುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ದೂರಿದ್ದಾರೆ. ಮೂಲಭೂತ ಸೇವೆಗಳಾದ ಆರೋಗ್ಯ, ಪೋಷಕಾಂಶ, ಶಿಕ್ಷಣ ಸೇರಿದಂತೆ ನಡೆಯುತ್ತಿರುವ ಯೋಜನೆಗಳನ್ನು ಖಾಸಗೀಕರಣ ಮಾಡಬಾರದು ಮತ್ತು ಕೇಂದ್ರದ ಈ ಪ್ರಾಯೋಜಿತ ಯೋಜನೆಗಳಿಗೆ ಮತ್ತಷ್ಟು ಅನುದಾನ ನೀಡಬೇಕು. ಕಾರ್ಮಿಕ ಸಮ್ಮೇಳನಗಳ ಶಿಫಾರಸಿನಂತೆ ಅಧೀಕೃತವಾಗಿ ಖಾಯಂ ಮಾಡಿ ಕನಿಷ್ಟ 21 ಸಾವಿರ ವೇತನ ನೀಡಬೇಕು, ಜೊತೆಗೆ ಮಾಸಿಕ ಪಿಂಚಣಿ 10 ಸಾವಿರ ನೀಡಬೇಕು ಮತ್ತು ಎಲ್ಲರಿಗೂ ಇಎಸ್‍ಐ, ಪಿಎಫ್ ಸೌಲಭ್ಯ ದೊರಕಿಸಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.

ಇನ್ನು ಕೆಲಸದ ಭದ್ರತೆಗಾಗಿ ಮತ್ತು ಸಾರ್ವತ್ರಿಕ ಆರೋಗ್ಯದ ಶಿಕ್ಷಣ ರಕ್ಷಣೆಗಾಗಿ ಶಾಸನ ಜಾರಿ ಮಾಡಬೇಕು, ಎಲ್ಲ ಬಡ ಕುಟುಂಬಗಳಿಗೆ 6 ತಿಂಗಳ ಕಾಲ 7500 ರಂತೆ ನೀಡಬೇಕು ಮತ್ತು ಉಚಿತ ರೇಷನ್ ಹಾಗೂ ಆಹಾರ ಧಾನ್ಯ ನೀಡಬೇಕು ಮತ್ತು ಕಂಟೈನ್ಮೆಂಟ್ ವಲಯದಲ್ಲಿ ವಾಸಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರಿಗೆ ಉಚಿತ ತಪಾಸಣೆ ಮತ್ತು ಪಿಪಿಇ ಕಿಟ್ ನೀಡಬೇಕು, ಅಕಸ್ಮಾತ್ ಮೃತಪಟ್ಟರೆ 50 ಲಕ್ಷ ರೂ.ವಿಮಾ ಸೌಲಭ್ಯ ನೀಡಬೇಕು. ಈಗಾಗಲೇ ರಾಜ್ಯದಲ್ಲಿ 5 ಅಂಗನವಾಡಿ ಕಾರ್ಯಕರ್ತೆಯರು ಇಬ್ಬರು ಆಶಾ ಕಾರ್ಯಕರ್ತೆಯರು ಮರಣ ಹೊಂದಿದ್ದಾರೆ. ಹಲವು ಜನರು ಸೋಂಕಿತರಾಗಿದ್ದಾರೆ. ಒತ್ತಡದ ಕೆಲಸದಿಂದ 23 ನೌಕರರು ನಿಧನರಾಗಿದ್ದಾರೆ. ಈ ಎಲ್ಲರಿಗೂ ಕನಿಷ್ಟ 10 ಲಕ್ಷ ರೂ.ಗಳ ಪರಿಹಾರ ನೀಡಬೇಕು ಮತ್ತು ಅಪಾಯಕಾರಿ ಕೆಲಸದ ಭತ್ಯೆ ಎಂದು ಪ್ರತ್ಯೇಕವಾಗಿ 10 ಸಾವಿರ ರೂ. ನೀಡಬೇಕೆಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

RELATED ARTICLES

Related Articles

TRENDING ARTICLES