`ನಾನೇ ಅತ್ಯಂತ ವಿವಾದದ ವ್ಯಕ್ತಿ' : ಮಾಧುಸ್ವಾಮಿ - Power TV
Saturday, January 4, 2025

🕚 JUST IN :

`ನಾನೇ ಅತ್ಯಂತ ವಿವಾದದ ವ್ಯಕ್ತಿ’ : ಮಾಧುಸ್ವಾಮಿ

ತುಮಕೂರು: ರಾಜ್ಯದಲ್ಲಿ ಅತ್ಯಂತ ವಿವಾದದ ವ್ಯಕ್ತಿ ನಾನೇ ಎಂದು ಮತದಾರರ ಮುಂದೆ ಮನದಾಳದ ಮಾತು ಬಿಚ್ಚಿಟ್ಟದ್ದಾರೆ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ.

 ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಭಟ್ಟರಹಳ್ಳಿಯಲ್ಲಿ ನಡೆದ ಭದ್ರಮೇಲ್ದಂಡೆ ಯೋಜನೆಯ 108ನೇ ಸರಪಳಿ ಭೂಮಿ ಪೂಜೆ ವೇಳೆ ಮಾತನಾಡಿದ ಜೆ.ಸಿ.ಮಾಧುಸ್ವಾಮಿ “ನಾನು ಯಾರನ್ನೂ ಅಷ್ಟೋಂದು ಚೆನ್ನಾಗೂ ಇಟ್ಟುಕೊಂಡಿರಲ್ಲ. ಯಾರನ್ನೂ ದೂರನೂ ಮಾಡೋ ಮನುಷ್ಯ ಅಲ್ಲ. ನಾನು ಎಲ್ಲರಿಗೂ ಬೇಕಾದೋನು ಯಾರಿಗೂ ಬೇಡವಾದೋನು. ನನ್ನನ್ನ ಎಲ್ಲರೂ ಟೀಕೆ ಮಾಡ್ತಾರೆ, ಇನ್ನು ನಮ್ಮತ್ರ ಇರೋರು ನನ್ನ ಟೀಕೆ ಮಾಡೋದು ಬಿಟ್ಟಿಲ್ಲ. ಇದಕ್ಕೆಲ್ಲ ನಾನೇನು ತಲೆ ಕೆಡಿಸಿಕೊಳ್ಳಲ್ಲ. ನಮ್ಮನ್ನ ಸುಮಾರು ಜನ ಹೊಗಳುತ್ತೀರ. ಇನ್ನೂ ಇಡೀ ರಾಜ್ಯದಲ್ಲಿ ಅತ್ಯಂತ ವಿವಾದವಾದ ವ್ಯಕ್ತಿ ಅಂದ್ರೆ ನಾನೇ ನಾನು ಯಾವುದಕ್ಕೂ  ತಲೆಕೆಡಿಸಿಕೊಳ್ಳಲ್ಲ. ನಾನು ಏನ್ ಮಾಡಬೇಕು ಅಷ್ಟೇ ಮಾಡ್ತೀನಿ.  ನಾನು ಏನು ಹೇಳಬೇಕೋ ಅದು ಹೇಳೇ ಹೇಳ್ತೀನಿ” ಎಂದು ಮನದಾಳದ ಮಾತು ಬಿಚ್ಚಿಟ್ರು.

-ಹೇಮಂತ್ ಕುಮಾರ್. ಜೆ.ಎಸ್ 

RELATED ARTICLES

Related Articles

TRENDING ARTICLES