Monday, January 20, 2025

ಹೆಂಡತಿ ಅಡುಗೆ ಮಾಡಲು ಬರಲ್ಲ ಅಂತ ಗಂಡ ಆತ್ಮಹತ್ಯೆ ..!

ಬಳ್ಳಾರಿ : ಹೆಂಡತಿಗೆ ರುಚಿಕರವಾಗಿ ಅಡುಗೆ ಮಾಡಲು ಬರುವದಿಲ್ಲ ಎನ್ನುವ ಕಾರಣಕ್ಕೆ ಗಂಡ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಹುರುಳಿಹಾಳ್ ಗ್ರಾಮದ ಶರಣೇಶ್ ಎಂಬಾತ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.

ಕಳೆದ ನಾಲ್ಕುವರೆ ತಿಂಗಳ ಹಿಂದಷ್ಟೇ ಶರಣೇಶ್ ಮದುವೆ ಆಗಿದ್ದ. ಮದುವೆ ಮಾಡಿಕೊಂಡ ದಿನದಿಂದ ತನ್ನ ಹೆಂಡತಿಗೆ ಅಡುಗೆ ಮಾಡಲು ಬರುವುದಿಲ್ಲ ಎಂದು ದೂರುತ್ತಿದ್ದ. ಇದೇ ಕಾರಣಕ್ಕೆ ದಂಪತಿ ಮಧ್ಯೆ ಆಗಾಗ ಜಗಳ ನಡೆಯುತ್ತಿತ್ತು. ಇದು ಇಬ್ಬರ ನಡುವಿನ ವೈಮನಸ್ಸಿಗೂ ಕಾರಣವಾಗಿತ್ತೆಂದು ಹೇಳಲಾಗಿದೆ. ಇದರಿಂದ ಮನನೊಂದ ಪತಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ, ಆತ್ಮಹತ್ಯೆಗೆ ಅಡುಗೆ ನೆಪ ಕಾರಣವಾ ? ಬೇರೇನಾದರು ಕಾರಣವೇ ಎನ್ನುವದರ ಕುರಿತು ತನಿಖೆ ನಡೆಯುತ್ತಿದೆ.

– ಅರುಣ್ ನವಲಿ

RELATED ARTICLES

Related Articles

TRENDING ARTICLES