Monday, January 20, 2025

ಪೊಲೀಸ್ ಇಲಾಖೆಯ ಯಡವಟ್ಟು : ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ದೇಹವನ್ನು ಕಾರ್ ಡಿಕ್ಕಿಯಲ್ಲಿ ಸಾಗಾಟ

ಹುಬ್ಬಳ್ಳಿ : ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಶವವನ್ನು ಡಿಕ್ಕಿಯಲ್ಲಿ ಸಾಗಿಸಿದ ಅಮಾನವೀಯ ಘಟನೆಯೊಂದು ಹುಬ್ಬಳ್ಳಿಯಲ್ಲಿ ನಡೆದಿದೆ.

ವಾಸಿಂ ಅಕ್ರಮ್ (22) ಆತ್ಮಹತ್ಯೆ ಮಾಡಿಕೊಂಡಿದ್ದ ವ್ಯಕ್ತಿಯಾಗಿದ್ದಾನೆ. ಹುಬ್ಬಳ್ಳಿಯ ಶಹರ ಠಾಣೆ ಪೊಲೀಸರು ಕಾರಿನ ಡಿಕ್ಕಿಯಲ್ಲಿ ಶವ ಸಾಗಿಸಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಆಂಬ್ಯುಲೆನ್ಸ್ ವ್ಯವಸ್ಥೆ ಇದ್ದರು, ಕಾರಿನ ಡಿಕ್ಕಿಯಲ್ಲಿ ಕಿಮ್ಸ್ ಶವಾಗಾರಕ್ಕೆ ಶವ ಸಾಗಾಟ ಮಾಡಿದ್ದು, ಹುಬ್ಬಳ್ಳಿ ನಗರದ ತುಂಬೆಲ್ಲಾ ಡಿಕ್ಕಿ ಓಪನ್ ಮಾಡಿಕೊಂಡು ಕಿಮ್ಸ್‌ ಶವಗಾರಕ್ಕೆ ಶವವನ್ನು ತರಲಾಗಿದೆ. ಜವಾಬ್ದಾರಿಯುತ ಪೊಲೀಸರಿಂದಲೇ ಮಹಾ ಯಡವಟ್ಟು ನಡೆದಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

RELATED ARTICLES

Related Articles

TRENDING ARTICLES