ವಿಜಯಪುರ : ಮಹಾರಾಷ್ಟ್ರದಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ವಿಜಯಪುರ ಜಿಲ್ಲೆಯ ಆಲಮಟ್ಟಿ ಲಾಲ್ ಬಹದ್ದೂರ್ ಶಾಸ್ತ್ರಿ ಅಣೆಕಟ್ಟೆಗೆ ಒಳ ಹರಿವು ಹೆಚ್ಚಳವಾಗುತ್ತಿರುವ ಹಿನ್ನಲೆ 22 ಗೇಟ್ ಮೂಲಕ 70 ಸಾವಿರ ಕ್ಯೂಸೆಕ್ ನೀರು ಹರಿ ಬಿಡಲಾಗುತ್ತಿದೆ. ಇಂದು ಸಂಜೆ ವರೆಗೆ ಅಣೆಕಟ್ಟಿನ ಒಳ ಹರಿವು 1 ಲಕ್ಷ 900 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಒಟ್ಟು ಸಂಗ್ರಹ 519.60 ಮೀಟರ್ ಪೈಕಿ 517.94 ಮೀಟರ್ ಇಂದಿನ ಸಂಗ್ರಹವಿದೆ. 123.081 ಟಿ ಎಮ್ ಸಿ ಸಂಗ್ರಹ ಸಾಮರ್ಥ್ಯದ ಆಣೆಕಟ್ಟಿನಲ್ಲಿ ಒಟ್ಟು 96.8 ಟಿಎಂಸಿ ನೀರು ಆಣೆಕಟ್ಟಿನಲ್ಲಿದೆ ಎಂದು ಕೆಬಿಜೆಎನ್‌ಎಲ್ ಅಧಿಕಾರಿ ತಿಳಿಸಿದ್ದಾರೆ..