Wednesday, January 22, 2025

ಮಂಡಿಯಿಂದಲೇ ಬೆಟ್ಟದ ಮೆಟ್ಟಿಲೇರಿದ ಬಿಎಸ್​​ವೈ ಅಭಿಮಾನಿ

ಮೈಸೂರು: ಕೊರೋನಾ ಸೋಂಕಿನಿಂದ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಕೇಂದ್ರ ಗೃಹಮಂತ್ರಿ ಅಮಿತ್ ಷಾ ಆಸ್ಪತ್ರೆ ದಾಖಲಾಗಿದ್ದಾರೆ.ಇಬ್ಬರೂ ಶೀಘ್ರ ಗುಣಮುಖರಾಗಲೆಂದು ಹಾರೈಸಿ ಯಡಿಯೂರಪ್ಪ ಕಟ್ಟಾ ಅಭಿಮಾನಿಯೊಬ್ಬರು ವಿಶಿಷ್ಟ ಸೇವೆ ಸಲ್ಲಿಸಿದ್ದಾರೆ.ಮಂಡಿ‌ಯಿಂದ ಚಾಮುಂಡಿ ಬೆಟ್ಟ ಹತ್ತಿ ಗುಣಮುಖರಾಗಲೆಂದು ಪ್ರಾರ್ಥನೆ ಸಲ್ಲಿಸಿದ್ದಾರೆ.

ಬಿ.ಎಸ್. ವೈ ಕಟ್ಟಾ ಅಭಿಮಾನಿ ಕಾರ್ತಿಕ್ ಮರಿಯಪ್ಪನಿಂದ ವಿಶಿಷ್ಠವಾಗಿ ನಾಡದೇವಿಗೆ ಸೇವೆ ಸಲ್ಲಿಸಿದವರು.ಅತ್ಯಂತ ಕಠಿಣವಾದರೂ ಮಂಡಿಯಿಂದಲೇ ಬೆಟ್ಟದ ಮೆಟ್ಟಿಲುಗಳ‌ ಮೂಲಕ ಚಾಮುಂಡಿ ಸನ್ನಿಧಿ ತಲುಪಿದ್ದಾರೆ.೧೦೦೦ ಮೆಟ್ಟಿಲು ಮಂಡಿಯಲ್ಲೇ ಏರಿದ್ದಾರೆ.ಮಳೆ ಸಿಂಚನವನ್ನ ಲೆಕ್ಕಿಸದೆ ಮೆಟ್ಟಿಲು ಹತ್ತಿದ್ದಾರೆ.

ಬಿ.ಎಸ್.ವೈ ಗುಣಮುಖರಾಗುವವರೆಗೆ ಪಾದರಕ್ಷೆ ಧರಿಸುವುದಿಲ್ಲವೆಂದು ಹರಕೆ ಹೊತ್ತಿದ್ದಾರೆ. ಈ ಹಿಂದೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ‌ ಬರಲೆಂದು ಒಂದೂವರೆ ವರ್ಷ ಪಾದರಕ್ಷೆ ಧರಿಸದೆ ಹರಕೆ ಹೊತ್ತು ಗಮನ ಸೆಳೆದಿದ್ದರು.ಇದೀಗ ಯಡಿಯೂರಪ್ಪ ಆರೋಗ್ಯಕ್ಕಾಗಿ ಪಾದರಕ್ಷೆ ಧರಿಸುವುದನ್ನೂ ತ್ಯಜಿಸಿದ್ದಾರೆ.

RELATED ARTICLES

Related Articles

TRENDING ARTICLES