ಕೊಪ್ಪಳ : ತುಂಗಾಭದ್ರಾ ಎಡದಂಡೆಯ ಕಾಲುವೆಗೆ ನೀರು ಹರಿಸಿದರೂ ಕೊನೆ ಭಾಗದ ರೈತರಿಗೆ ನೀರು ತಲುಪುತ್ತಿಲ್ಲ ಇದಕ್ಕೆ ಅಕ್ರಮ ನೀರಾವರಿ ಕಾರಣ ಎಂದು ಆರೋಪಿಸಿ ಇಂದು ಕೊಪ್ಪಳದಲ್ಲಿ ರಾಯಚೂರು ಜಿಲ್ಲೆಯ ರೈತರು ತುಂಗಭದ್ರಾ ಎಡದಂಡೆ ಕಾಲುವೆ ಮೇಲೆ ತೀವ್ರವಾದ ಪ್ರತಿಭಟನೆ ನೆಡಸಿದರು. ತುಂಗಭದ್ರಾ ಎಡದಂಡೆ ನಾಲೆಯಲ್ಲಿ ಸ್ಥಳೀಯ ರಾಜಕೀಯ ನಾಯಕರು ತಮ್ಮದೆ ಆದ ಒಂದು ರಾಜ್ಯವನ್ನು ಮಾಡಿಕೊಂಡಿದ್ದಾರೆ ಇದರಲ್ಲಿ ಮಾಜಿ ಶಾಸಕರಾದ ಇಕ್ಬಾಲ್ ಅನ್ಸಾರಿ ಶಿವರಾಜ ತಂಗಡಗಿ ಕನಕಗಿರಿ ಶಾಸಕ ಬಸವರಾಜ ದಡೆಸೂಗೂರು ಈ ಎಲ್ಲಾ ರಾಜಕೀಯ ನಾಯಕರ ಪ್ರಭಾವದಿಂದ ಅಕ್ರಮ ನೀರಾವರಿ ಮಾಡಿಕೊಂಡಿದ್ದಾರೆ ಎಂದು ರೈತ ಮುಖಂಡ ರಾಘವೇಂದ್ರ ಕುಷ್ಟಗಿ ನೇರವಾಗಿ ಆರೋಪಿಸಿದರು. ಈ ಕೂಡಲೇ ಅಕ್ರಮ ನೀರಾವರಿಯನ್ನು ತಡೆಯಬೇಕು.. ತುಂಗಭದ್ರಾ ಜಲಾಶಯದಲ್ಲಿ ಸಾಕಷ್ಟು ನೀರಿದ್ದರೂ ರಾಯಚೂರು ಜಿಲ್ಲೆಗೆ ಮಾತ್ರ ನೀರು ಸಿಗುತ್ತಿಲ್ಲ. ನಾಲೆ ಮೇಲೆ ಕೂಡಿಸಲಾದ ಈ ಎಲ್ಲ ಅಕ್ರಮ ಪಂಪ್ ಗಳನ್ನು ಕಿತ್ತು ಹಾಕಿಸಬೇಕು. ಅಕ್ರಮ ನೀರಾವರಿ ಸ್ಥಗಿತಗೊಳಿಸಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿಯನ್ನು ಮಾಡಲಾಗಿದೆ. ಮುಖ್ಯಮಂತ್ರಿಯವರೇ ಅಕ್ರಮ ನೀರಾವರಿ ತಡೆಯಲು ಆದೇಶ ಮಾಡಿದ್ದಾರೆ. ಆದರೂ ಸಹ ಇಲ್ಲಿಯ ಅಧಿಕಾರಿಗಳು ಮಾತ್ರ ಜಪ್ಪಯ್ಯ ಅಂದ್ರು ಪಂಪ್ ಸೆಟ್ ತೆರವು ಮಾಡೊಲ್ಲಾ ಅಂತಿದ್ದಾರಂತೆ. ಇನ್ನೂ ಈ ಕುರಿತು ಜಲ ಸಂಪನ್ಮೂಲ ಸಚಿವರಾದ ರಮೇಶ್ ಜಾರಕಿಹೋಳಿ ತುರ್ತು ಆದೇಶವನ್ನು ಹೊರಡಿಸಿದ್ದಾರೆ. ತುಂಗಭದ್ರಾ ಎಡದಂಡೆಯ ಮೇಲೆ ಯಾವುದೇ ಅಕ್ರಮ ನೀರಾವರಿಗೆ ಅವಕಾಶ ಇರುವುದಿಲ್ಲ. ಕಾಲುವೆ ಮೇಲೆ ಹಾಕಿರುವ ಅಕ್ರಮ ಪಂಪ್ ಸೆಟ್ ಗಳನ್ನು ಅಧಿಕಾರಿಗಳು ಈ ಕೂಡಲೇ ತೆರವುಗೊಳಿಸುವಂತೆ ಆದೇಶಿಸಿದ್ದಾರೆ ಹಾಗೂ ಕೊಪ್ಪಳ ಜಿಲ್ಲಾಧಿಕಾರಿಗಳು ಸಹ ಈ ಕುರಿತು ಸಭೆ ನೆಡಸಿ ಅಕ್ರಮ ಪಂಪ್ ಸೆಟ್ ತೆರವು ಮಾಡಲು ಆದೇಶಿಸಿದ್ದರು. ಇನ್ನೂ ರಾಯಚೂರು ಜಿಲ್ಲೆಯ ಮಾನ್ವಿ, ಸಿಂಧನೂರು ಭಾಗದಿಂದ ಬಂದಿದ್ದ ರೈತರು ಕೊಪ್ಪಳದ ಕಾರಟಗಿ ತಾಲೂಕಿನ ಮೈಲಾಪುರ್ ಬಳಿ ಇರುವ ತುಂಗಭದ್ರಾ ಎಡದಂಡೆ ಕಾಲುವೆ ಮೇಲೆಯೆ ಪ್ರತಿಭಟನೆ ಮಾಡಿದರು. ಕಾಲುವೆಗೆ ಅಳವಡಿಸಿರುವ ಅಕ್ರಮ ಪೈಪ್ ಗಳನ್ನು ಕೂಡಲೇ ತೆಗೆಸಬೇಕು. ಇಲ್ಲದಿದ್ದರೆ ತಮಗೆ ನೀರು ತಲುಪಲಾರದು. ತುಂಗಭದ್ರಾ ಎಡದಂಡೆ ನಾಲೆಯ ಮುಖ್ಯ ಕಾಲುವೆ ಮತ್ತು ಉಪ ಕಾಲುವೆ ವ್ಯಾಪ್ತಿಯಲ್ಲಿ ಅಂದಾಜು 2 ಲಕ್ಷ ಅಕ್ರಮ ನೀರಾವರಿ ನಡೆಯುತ್ತಿದ್ದು, ತಡೆಗಟ್ಟಬೇಕು ಎಂದು ಆಗ್ರಹಿಸಿದರು.. ಪ್ರತಿಭಟನೆಯನ್ನು ತಡೆಯಲು ಬಂದಿದ್ದ ಪೊಲೀಸರನ್ನು ರೈತರು ತರಾಟಗೆ ತಗೆದುಕೊಂಡರು ಈ ನಡುವೇ ಕೆಲ ಹೊತ್ತು ಪೊಲೀಸರು ಮತ್ತು ರೈತರ ನಡುವೆ ಮಾತಿನ ಚಕುಮಕಿ ನೆಡೆಯಿತು. ಕಾಲುವೆಗೆ ಅನಧಿಕೃತವಾಗಿ ಪಂಪ್‌ಸೆಟ್ ಅಳವಡಿಸಿ 2 ಲಕ್ಷಕ್ಕೂ ಅಧಿಕ ಎಕರೆ ಪ್ರದೇಶದಲ್ಲಿ ನೀರಾವರಿ ಮಾಡಲಾಗುತ್ತಿದೆ. ಇದರಿಂದ ಸಿರವಾರ ಹಾಗೂ ಯರಮರಸ್ ಕೆಳಭಾಗದ ರೈತರ ಜಮೀನುಗಳಿಗೆ ಸರಿಯಾಗಿ ನೀರು ದೊರಕುತ್ತಿಲ್ಲ. ಆದ್ದರಿಂದ ಅನಧಿಕೃತ ಪಂಪ್‌ಸೆಟ್‌ಗಳಿಗೆ ಕಡಿವಾಣ ಹಾಕಿ ಕೆಳಭಾಗದ ರೈತರ ಜಮೀನುಗಳಿಗೆ ನೀರು ಒದಗಿಸುವ ವ್ಯವಸ್ಥೆ ಮಾಡಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡಬೇಕಾಗುತ್ತೆ ಎಂದು ಎಚ್ಚರಿಸಿದರು..
-ಶುಕ್ರಾಜ ಕುಮಾರ್ ಪವರ್ ಟಿವಿ ಕೊಪ್ಪಳ