Monday, January 20, 2025

ಧಾರವಾಡ ಜಿಲ್ಲೆಯಲ್ಲಿ ವರುಣನ ಆರ್ಭಟ | ಬೆಣ್ಣೆಹಳ್ಳಕ್ಕೆ ಪ್ರವಾಹ ಭೀತಿ | ಜಲಾವೃತವಾದ ಬೆಳೆ

ಧಾರವಾಡ : ಧಾರವಾಡ ಜಿಲ್ಲೆಯಲ್ಲಿಯೂ ವರುಣನ ಆರ್ಭಟ ಮುಂದುವರೆದಿದೆ. ಮಳೆರಾಯನ ಹೊಡೆತಕ್ಕೆ ಬೆಳೆಗಳು ಸಂಪೂರ್ಣ ನೆಲ ಕಚ್ಚಿದ್ದು, ಅನ್ನದಾತ ಕಂಗಾಲಾಗಿದ್ದಾನೆ. ವರುಣನ ಆರ್ಭಟಕ್ಕೆ ಜಿಲ್ಲೆಯ ಜನ ನಲುಗಿ ಹೋಗಿದ್ದು, ಮತ್ತೆ ಪ್ರವಾಹದ ಆತಂಕ ಶುರುವಾಗಿದೆ.

ಎಡಬಿಡದೆ ಸುರಿಯುತ್ತಿರುವ ಮಳೆಗೆ ಹೊಲಗದ್ದೆಗಳು ಜಲಾವೃತಗೊಂಡಿದ್ದು,‌ ನದಿಯಂತಾಗಿವೆ. ಹೆಸರು, ಹತ್ತಿ, ಶೇಂಗಾ ಸೊಯಾಬಿನ್, ಈರುಳ್ಳಿ ಬೆಳೆ ನಾಶವಾಗಿದೆ. ಹುಬ್ಬಳ್ಳಿ ಹಾಗೂ ಕುಂದಗೋಳ ತಾಲೂಕಿನಲ್ಲಿ ಬೆಳೆಹಾನಿಯಾಗಿದ್ದು, ಕಳೆದ ವರ್ಷ ಸುರಿದ ಮಳೆಯಿಂದ ಆಗಿದ್ದ ಬೆಳೆಹಾನಿಯಿಂದ ರೈತ ಸುಧಾರಿಸಿ ಕೊಳ್ಳುವ ಮೊದಲೇ ಈಗ ಮತ್ತೆ ರೈತನಿಗೆ ವರುಣಾಘಾತವಾಗಿದೆ. ಇನ್ನೂ ಸರ್ಕಾರಿ‌ ಕಚೇರಿಗಳ ಮೇಲು‌ ವರುಣ ತನ್ನ ಪ್ರಭಾವ ಬೀರಿದ್ದು, ಕುಂದಗೋಳ ಪಟ್ಟಣದಲ್ಲಿರುವ ತಹಶಿಲ್ದಾರ ಕಚೇರಿ ಜಲಾವೃತಗೊಂಡಿದೆ. ಕಟ್ಟಡದ ಸುತ್ತ ನೀರು ತುಂಬಿಕೊಂಡಿದ್ದು ಕಟ್ಟಡದೊಳಗೆ ಹೋಗಲು ಸಾರ್ವಜನಿಕರು, ಸಿಬ್ಬಂದಿಗಳು ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ..

ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಹಳ್ಳ,ಕೆರೆಗಳು ತುಂಬಿ ಹರಿಯುತ್ತಿದ್ದು, ಟಿಪ್ಪರ್ ಒಂದು ತುಂಬಿ ಹರಿಯುವ ಹಳ್ಳದಲ್ಲಿ ಸಿಲುಕಿಕೊಂಡಿರುವ ಘಟನೆ ಹುಬ್ಬಳ್ಳಿ ತಾಲೂಕಿನ ಇಂಗಳಹಳ್ಳಿ ಗ್ರಾಮದಲ್ಲಿ ನಡೆದಿದೆ. ಬೆಣ್ಣೆ ಹಳ್ಳ ದಾಟಿಸಲು ಟಿಪ್ಪರ್ ಚಾಲಕ ಪರದಾಟ ನಡೆಸಿದ್ದು, ನಿರಂತರ ಮಳೆಯಿಂದ ಬೆಣ್ಣೆ ಹಳ್ಳ ತುಂಬಿ ಹರಿಯುತ್ತಿದ್ದು, ಟಿಪ್ಪರ್ ಗಾಡಿ ಸೇತುವೆ ಮೇಲೆ ಸಿಲುಕಿಕೊಂಡಿದೆ. ಉಣಕಲ್ ಕೆರೆ ತುಂಬಿ ಹರಿಯುತ್ತಿದ್ದು, ಹಳೆ ಹುಬ್ಬಳ್ಳಿ ಪ್ರದೇಶದ ಜನರಲ್ಲಿ ಕೆರೆ ನೀರು ಮನೆಗಳಿಗೆ ನುಗ್ಗಿದ್ರೆ ಹೇಗೆ ಎಂಬ ಆತಂಕ ಹೆಚ್ಚಾಗಿದೆ. ಬೆಣ್ಣೆಹಳ್ಳದಿಂದ ಅವಾಂತರ ಸೃಷ್ಟಿಯಾಗಿದ್ದು, ಮತ್ತೆ ನದಿ ತೀರದ ಜನರಿಗೆ ಪ್ರವಾಹದ ಭೀತಿ ಎದುರಾಗಿದೆ..

RELATED ARTICLES

Related Articles

TRENDING ARTICLES