Monday, December 23, 2024

ರಸ್ತೆಯ ಮೇಲೆ ಉಪಯೋಗಿಸಿದ ಪಿಪಿಇ ಕಿಟ್​ಗಳು ಚೆಲ್ಲಾಪಿಲ್ಲಿ: ಸ್ಥಳೀಯರಲ್ಲಿ ಆತಂಕ

ವಿಜಯಪುರ :ರಸ್ತೆಯ ಮೇಲೆ ಪಿಪಿಇ ಕಿಟ್​​ಗಳು ಬಿದ್ದು ಆತಂಕದ ವಾತಾವರಣ ನಿರ್ಮಾಣವಾದ ಘಟನೆ ವಿಜಯಪುರ ನಗರದ ಶಾಪೇಟೆಯ ರಸ್ತೆಯಲ್ಲಿ ನಡೆದಿದೆ. ಕಸ ವಿಲೇವಾರಿ ಸಿಬ್ಬಂದಿ ರಸ್ತೆ ಮೇಲೆ ಪಿಪಿಇ‌ ಕಿಟ್ ಎಸೆದು ಹೋಗಿದ್ದು, ಸ್ಥಳೀಯರು ಆತಂಕಕ್ಕೊಳಗಾಗಿದ್ದಾರೆ.

ಕೊರೋನಾ ಪೀಡಿತರಿಗೆ ಚಿಕಿತ್ಸೆ ನೀಡಿದ ಬಳಿಕ ಕಿಟ್​ಗಳನ್ನು ನಾಶ ಮಾಡಬೇಕಿತ್ತು. ನಿಯಮಾನುಸಾರ ನಾಶವಾಗಬೇಕಿದ್ದ ಕಿಟ್ ಗಳು ಸಾಗಾಟದ ವೇಳೆ ಬಿದ್ದಿರುವ ಶಂಕೆ ವ್ಯಕ್ತವಾಗಿದ್ದು ಕೂಡಲೇ ಇಲ್ಲಿ ಬಿದ್ದಿರುವ ಪಿಪಿಇ‌ ಕಿಟ್​ಗಳನ್ನು ತೆಗೆದು ಹಾಕಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಈ ಹಿಂದೆ ಕೂಡಾ ಎರಡು ಬಾರಿ ವಿಜಯಪುರ ನಗರದ ಬೇರೆ ಬೇರೆ ಕಡೆಗಳಲ್ಲಿ ಪಿಪಿಇ ಕಿಟ್ ಎಸೆದು ಆತಂಕ ಮೂಡಿದ್ದರು, ಇನ್ನಾದರೂ ಜಿಲ್ಲಾಡಳಿತ, ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಮಹಾನಗರ ಪಾಲಿಕೆ ಅಧಿಕಾರಿಗಳು ಈ ಕುರಿತು ಮುಂಜಾಗೃತೆ ವಹಿಸಬೇಕಾಗಿದೆ.

RELATED ARTICLES

Related Articles

TRENDING ARTICLES