Sunday, January 19, 2025

ಶಾಸಕ ಹರತಾಳು ಹಾಲಪ್ಪಗೆ ಪಾಸಿಟಿವ್ ಬಂದ ಬಳಿಕ ಬೇಸರ ವ್ಯಕ್ತಪಡಿಸಿದ ಬೇಳೂರು.

ಶಿವಮೊಗ್ಗ : ಶಾಸಕ ಹರತಾಳು ಹಾಲಪ್ಪ ಮತ್ತು ಕಲರ್ ಫುಲ್ ರಾಜಕಾರಣಿ ಬೇಳೂರು ಗೋಪಾಲಕೃಷ್ಣ ಒಂದು ಕಾಲದ ಸ್ನೇಹಿತರು-ಈಗ ಬದ್ಧ ವೈರಿಗಳು. ಹಾಲಪ್ಪ ಅವರಿಗೆ ಕೊರೋನಾ ಸೋಂಕು ಧೃಢವಾಗಿದೆ. ಈ ಸಂದರ್ಭದಲ್ಲಿ ಬೇಳೂರು ಗೋಪಾಲಕೃಷ್ಣ, ಹರತಾಳು ಹಾಲಪ್ಪ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಅದೇನು ಅಂತಾ ಈ ಕೆಳಕಂಡಂತಿದೆ. ನೀವೆ ಓದಿ……

ಶಾಸಕ ಹೆಚ್ ಹಾಲಪ್ಪ ಅವರಿಗೆ ಕರೋನಾ ಪಾಸಿಟಿವ್ ಬಂದಿರುವುದು ಬೇಸರದ ಸಂಗತಿ. ಅವರು ಶೀಗ್ರವಾಗಿ ಗುಣಮುಖರಾಗಲಿ ಎಂದು ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ. ಆದರೆ ಶಾಸಕರಾಗಿ ಜವಾಬ್ದಾರಿ ಇರುವ ಹಾಲಪ್ಪ ಅವರು ಕರೋನಾ ವಿಚಾರದಲ್ಲಿ ತಪ್ಪು ಮಾಡಿದ್ದಾರೆ. ಕರೋನಾ ರಾಜ್ಯದಲ್ಲಿ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಇವರು ತಮ್ಮ ಎಮ್ ಎಸ್ ಐ ಎಲ್ ಕಛೇರಿ ಉದ್ಘಾಟನೆ ಮಾಡಿದರಲ್ಲದೆ, ಅದಕ್ಕೆ ಪತ್ರಕರ್ತರನ್ನು ಸಂಸದರನ್ನು ಹಲವು ಮಂತ್ರಿಗಳನ್ನು ಕರೆ ನೀಡಿ ಸಮಾರಂಭ ಮಾಡಿಕೂಂಡಿದ್ದಾರೆ. ಇದರಿಂದ ಕರೋನಾ ಅನೇಕ ಜನಪ್ರತಿನಿದಿಗಳಿಗೆ ಹರಡಿರುವ ಶಂಕೆ ವ್ಯಕ್ತವಾಗುತ್ತಿದೆ. ಇದು ಬಿಜೆಪಿ ಕಾರ್ಯಕರ್ತರಿಗೂ ಆತಂಕದ ವಿಚಾರವಾಗಿದೆ. ಮುಖ್ಯಮಂತ್ರಿಗಳು ಬಿ.ಎಸ್ ಯಡಿಯೂರಪ್ಪ ಅವರು ತಮಗೆ ಪಾಸಿಟಿವ್ ಬಂದ ಕೂಡಲೆ ಎಲ್ಲರಿಂದಲೂ ದೂರ ಇದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೂಂಡಿದ್ದಾರೆ. ಆದರೆ ಶಾಸಕ ಹಾಲಪ್ಪ ಅವರು ಕರೋನಾ ದೃಡವಾದರೂ ಹೇಳಲು ಎರಡು ದಿನ ತಡ ಮಾಡಿದ್ದಾರೆ. ಇದು ಸರಿಯಾದ ಕ್ರಮವಲ್ಲ. ಕಾಯಿಲೆ ಪ್ರತಿಯೂಬ್ಬರಿಗೂ ಬರುತ್ತದೆ ವಾಸಿಯಾಗುತ್ತದೆ. ಆದರೆ ಅದರಲ್ಲಿ ಗುಟ್ಟು ಮಾಡುವುದು ಏನಿದೆ.? ಸಾಗರದ ಜನರಿಗೆ ವಿನಂತಿ ಮಾಡುತ್ತೇನೆ. ಯಾರೂ ಕರೋನಾ ಕಾಯಿಲೆ ಬಗ್ಗೆ ಆತಂಕ ಪಡಬೇಡಿ ಯಾರಿಗಾದರೂ ಅದರ ಸಿಮ್’ಟೆಮ್ಸ್ ಬಂದರೆ ಪರೀಕ್ಷೆ ಮಾಡಿಸಿಕೂಳ್ಳಿ. ಎಂದು ವಿನಂತಿಸುತ್ತೇನೆ. ಎಲ್ಲರನ್ನು ತಾಯಿ ಸಾಗರದ ಮಾರಿಕಾಂಭೆ ಮಹಾಗಣಪತಿ ರಕ್ಷಣೆ ಮಾಡಲಿ ಎಂದು ಪ್ರಾರ್ಥಿಸುತ್ತೇನೆ.

-ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ, ಸಾಗರ

RELATED ARTICLES

Related Articles

TRENDING ARTICLES