ರಾಜ್ಯದಲ್ಲಿ ಕೋವಿಡ್ ಮಹಾಮಾರಿಯ ಮಧ್ಯೆಯೇ ಯಶಸ್ವಿಯಾಗಿ ಸೆಕೆಂಡ್ ಪಿಯುಸಿ ಹಾಗೂ ಹತ್ತನೇ ತರಗತಿ, ಸಿಇಟಿ ಪರೀಕ್ಷೆ ನಡೆಸಿರೋ ಶಿಕ್ಷಣ ಇಲಾಖೆಗೆ ಈಗ ಮತ್ತೊಂದು ತಲೆ ನೋವು ಎದುರಾಗಿದೆ. ಜೂನ್ ಜುಲೈ ಕಳ್ದೂ ಆಗಸ್ಟ್ ಬಂದ್ರೂ ಸೆಪ್ಟೆಂಬರ್ ನಲ್ಲೂ ಶಾಲೆಗಳನ್ನ ಓಪನ್ ಮಾಡೋಕೆ ಶಿಕ್ಷಣ ಇಲಾಖೆ ಹಿಂದೇಟು ಹಾಕ್ತ ಇದೆ. ಇದಕ್ಕೆಲ್ಲಾ ಕಾರಣ ಅಂದ್ರೆ ತಜ್ಞರು ಕೊಟ್ಟ ಒಂದು ವರದಿ.
ಹೊಸ ಬ್ಯಾಗ್.. ಹೊಸ ಶೂ.. ಹೊಸ ಸ್ಕೂಲ್ ಯೂನಿಫಾರಂ ಹಾಕ್ಕೊಂಡು ಪ್ರೆಂಡ್ಸ್ ಗಳ ಜೊತೆ ಜೂನ್ ತಿಂಗಳ ಜಿಟಿ ಜಿಟಿ ಮಳೆಯ ಮಧ್ಯೆ, ಕೊಡೆ ಹಿಡ್ಕೊಂಡು ಲವಲವಿಕೆಯಿಂದ ಶಾಲೆಗಳ ಕಡೆ ಮುಖಮಾಡಬೇಕಿದ್ದ ಮಕ್ಕಳು, ಸದ್ಯ ಮನೆಯಲ್ಲಿಯೇ ಕೂತು ತಮ್ಮ ಸವಿ ದಿನಗಳನ್ನ ಮಿಸ್ ಮಾಡ್ತಾ ಇದ್ದಾರೆ.
ಎಷ್ಟು ಚಂದಾ ಅಲ್ವಾ. ಅಂತಹ ದಿನಗಳನ್ನು ಕಸಿದುಕೊಂಡಿದ್ದು ಕೋವಿಡ್ 19 ಅನ್ನೋ ಮಹಾಮಾರಿ. ವೈರಸ್ ನ ರಣ ಹೊಡೆತಕ್ಕೆ ತತ್ತರಿಸಿ ಹೋಗಿರೋ ಎಲ್ಲಾ ವಲಯಗಳು ಪುನರಿಜ್ಜೀವನದ ಕನಸನ್ನ ಕಾಣ್ತ ಇದೆ. ಅದೇ ರೀತಿ ಶಿಕ್ಷಣ ಇಲಾಖೆ ಕೂಡ ಹಲವು ಸವಾಲುಗಳನ್ನ ಎದುರಿಸಿ, ಶಾಲೆಗಳ ರೀ ಓಪನ್ ಯಾವಾಗ ಅನ್ನೋ ಗೊಂದಲದಲ್ಲಿದೆ. ಇದ್ರಿಂದಾಗಿ 1 ರಿಂದ 9 ನೇ ತರಗತಿಯ ಮಕ್ಕಳಿಗೆ ಮಿಡ್ ಟರ್ಮ್ ಪರೀಕ್ಷೆ ನಡೆಸದಿರಲು ಇಲಾಖೆ ಚಿಂತನೆ ನಡೆಸಿದೆ. ಮಧ್ಯಾವದಿ ಪರೀಕ್ಷೆಯನ್ನ ಕೈಬಿಟ್ಟು ಅಂತಿಮ ಪರೀಕ್ಷೆ ನಡೆಸೋ ಪ್ಲಾನ್ ಮಾಡಿದ್ರೆ ಹೇಗೆ ಅಂತಾ ತಜ್ಞರ ವರದಿ ಸಂಗ್ರಹಿಸೋಕೆ ಇಲಾಖೆ ಸಜ್ಜಾಗಿದೆ. 2020-21ನೇ ಸಾಲಿನ ಶೈಕ್ಷಣಿಕ ವರ್ಷ ಇಷ್ಟೋತ್ತ್ರಲ್ಲಿ ಆರಂಭವಾಗಬೇಕಿತ್ತು. ಆದ್ರೆ ಸೆಪ್ಟೆಂಬರ್ ನಲ್ಲೂ ಸೋಂಕು ಹೆಚ್ಚಾಗೋ ಆತಂಕ ಎದುರಾಗಿರೋದ್ರಿಂದ ಇಲಾಖೆಗೆ ಸಂಕಟ ಎದುರಾಗಿದೆ.
ಶಾಲಾ ಆರಂಭಿಸುವ ಬಗ್ಗೆ ಸರ್ಕಾರಕ್ಕೂ ಸ್ಪಷ್ಟತೆ ಇಲ್ಲ.!
ಒಂದು ಕಡೆ ದಿನೇ ದಿನೇ ಕೊರೋನಾ ಸೋಂಕಿತ ಪ್ರಕರಣಗಳು ಹೆಚ್ಚಾಗ್ತಾ ಇವೆ. ಈಗಾಗಲೇ ಶಿಕ್ಷಣ ಇಲಾಖೆ ವಿದ್ಯಾರ್ಥಿಗಳಿಗೆ ನಿರಂತರ ಕಲಿಕೆಗೆ ಕೆಲ ಕಾರ್ಯಕ್ರಮಗಳನ್ನ ಜಾರಿಗೆ ತಂದಿದೆ. ವಿದ್ಯಾಗಮ, ಆನ್ ಲೈನ್ ತರಗತಿ, ಡಿಡಿ ಚಂದನ ಮೂಲಕ ವಿದ್ಯಾರ್ಥಿಗಳಿಗೆ ಪಾಠ ಮಾಡಲಾಗುತ್ತಿದೆ. ಗ್ರಾಮೀಣ ಪ್ರದೇಶದ ಪ್ರತಿ 20 ಮಕ್ಕಳಿಗೆ ಒಬ್ಬ ಶಿಕ್ಷಕರನ್ನ ನಿಯೋಜನೆ ಮಾಡಲಾಗಿದೆ. ಆದ್ರೂ ಕೂಡ ಗ್ರಾಮೀಣ ಭಾಗದ ಮಕ್ಕಳಿಗೆ ಸರಿಯಾಗಿ ಪಾಠ ಸಿಗುತ್ತಿಲ್ಲ ಅನ್ನೋ ಆರೋಪಗಳು ಕೇಳಿ ಬರ್ತಾ ಇವೆ. ವಿದ್ಯುತ್ ಸಮಸ್ಯೆ, ಇಂಟರ್ ನೆಟ್ ಸಮಸ್ಯೆ ಯಿಂದ ಮಕ್ಕಳಿಗೆ ಸರಿಯಾಗಿ ಶಿಕ್ಷಣ ಸಿಗುತ್ತಿಲ್ಲ. ಆಲ್ಲದೆ ಶಿಕ್ಷಣ ಇಲಾಖೆ ಮಕ್ಕಳನ್ನ ನಿರಂತರ ಕಲಿಕೆ ಮೂಲಕ ಮನೆಯಲ್ಲೇ ಪಾಠ ನೀಡಲಾಗುತ್ತಿದೆ. ಆದ್ರೆ ಇದು ಹೀಗೆ ಮುಂದುವರಿದ್ರೆ ಮಕ್ಕಳಿಗೆ ಪರೀಕ್ಷೆ ನಡೆಸಲು ಸಾಧ್ಯವಿಲ್ಲ ಅನ್ನೋದು ತಜ್ಞರ ಅಭಿಪ್ರಾಯ. ಆದ್ರೆ ಶೈಕ್ಷಣಿಕ ವರ್ಷ ಪ್ರಾರಂಭವಾದ ನಂತರವೇ ಪಠ್ಯ ಕಡಿತದ ಬಗ್ಗೆ ಸ್ಪಷ್ಟನೆ ಸಿಗಲಿದೆ. ಅಲ್ಲಿಯವರೆಗೂ ಪಠ್ಯ ಕಡಿತದ ಬಗ್ಗೆ ಸ್ಪಷ್ಟತೆ ಸಿಗಲ್ಲ. ಆಗಸ್ಟ್ ಸೆಪ್ಟೆಂಬರ್ ನಲ್ಲಿ ಕೊರೋನಾ ಸೊಂಕಿತ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆ ಇರೋದ್ರಿಂದ ಶಾಲೆಗಳನ್ನ ಶೀಘ್ರದಲ್ಲಿ ಓಪನ್ ಮಾಡೋ ಸಾಧ್ಯತೆ ತೀರಾ ಕಡಿಮೆ…?
ಒಟ್ನಲ್ಲಿ ಕರೋನಾ ಸೋಂಕಿತರ ಪಟ್ಟಿ ದಿನೇ ದಿನೇ ಆಗಸದತ್ತ ಮುಖಮಾಡಿ ಸಾಗ್ತ ಇದೆ. ಶಾಲೆಗಳನ್ನ ಓಪನ್ ಮಾಡಿದ್ರೆ ವಿದ್ಯಾರ್ಥಿಗಳಿಗೂ ಸೋಂಕು ತಗುಲುವ ಸಾಧ್ಯತೆ ಹೆಚ್ಚಾಗಿದೆ. ಶೈಕ್ಷಣಿಕ ವರ್ಷದ ಆರಂಭ ಮಕ್ಕಳ ಭವಿಷ್ಯ ಎರಡನ್ನೂ ಮನನ ಮಾಡಿಕೊಂಡು ಸೂಕ್ತ ಮುನ್ನೆಚ್ಚರಿಕೆಯಿಂದ ಇಲಾಖೆ ಶಾಲೆಗಳನ್ನ ತೆರೆಯೋಕೆ ಮುಂದಾಗಬೇಕಿದೆ.
ಸ್ವಾತಿ ಪುಲಗಂಟಿ