Monday, January 6, 2025

ನಾಡದೊರೆಗೆ ಪಾಸಿಟಿವ್ – ಸಿ.ಎಂ. ತವರು ಕ್ಷೇತ್ರದಲ್ಲಿ ದೇವರ ಮೊರೆ ಹೋದ ಅಭಿಮಾನಿಗಳು

ಶಿವಮೊಗ್ಗ: ನಾಡದೊರೆ ಸಿ.ಎಂ. ಯಡಿಯೂರಪ್ಪ ಕೊರೋನಾ ಪಾಸಿಟಿವ್ ಸೋಂಕು ಧೃಢವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ, ಸಿ.ಎಂ. ತವರು ಕ್ಷೇತ್ರ ಶಿವಮೊಗ್ಗ ಜಿಲ್ಲೆಯಲ್ಲಿ, ಅವರ ಅಭಿಮಾನಿಗಳು, ಪಕ್ಷ ಭೇದ ಮರೆತು ಸಿ.ಎಂ. ಗುಣಮುಖರಾಗಲೀ ಎಂದು ಪ್ರಾರ್ಥಿಸುತ್ತಿದ್ದಾರೆ. ದೇವಸ್ಥಾನದಲ್ಲಿ ಪೂಜೆ ನೆರವೇರಿಸಿ, ದರ್ಗಾದಲ್ಲಿ ಚಾದರ ಅರ್ಪಿಸಿ, ತಮ್ಮ ದೊರೆಯ ಆರೋಗ್ಯಕ್ಕಾಗಿ ದೇವರ ಮೊರೆ ಹೋಗಿದ್ದಾರೆ.

ಬಿ.ಎಸ್.ವೈ ಇಷ್ಟು ದಿನ ಕೊರೋನಾ ಪಾಸಿಟಿವ್ ಸೋಂಕು ಹರಡಬಾರದೆಂಬ ನಿಟ್ಟಿನಲ್ಲಿ ಹಲವಾರು ಕ್ರಮಗಳನ್ನು ತೆಗೆದುಕೊಂಡಿದ್ದು, ಗೃಹ ಕಚೇರಿ ಕೃಷ್ಣದಲ್ಲಿಯೇ ಕುಳಿತು, ಸಾಲು, ಸಾಲು ಸಭೆಗಳು, ವೈದ್ಯರು, ತಜ್ಞರ ಜೊತೆ ಚರ್ಚೆ ನಡೆಸಿ ಕೊರೋನಾ ಸೋಂಕು ಹರಡದಂತೆ, ಮತ್ತು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತಿದ್ದರು. ಆದ್ರೆ, ಈ ಕೊರೋನಾ ಮಹಾಮಾರಿ ಮುಖ್ಯಮಂತ್ರಿಗೆ ಬಿಟ್ಟಿಲ್ಲ. ಅತ್ತ ಕೇಂದ್ರ ಗೃಹ ಸಚಿವ ಅಮಿತ್​ಶಾಗೆ ಕೊರೋನಾ ಸೋಂಕು ಧೃಢವಾದ ದಿನವೇ ಇತ್ತ ಸಿ.ಎಂ.ಕೂಡ ಆಸ್ಪತ್ರೆಗೆ ದಾಖಲಾಗಿದ್ದು, ಈ ಹಿನ್ನೆಲೆಯಲ್ಲಿ, ಶೀಘ್ರವೇ ಗುಣಮುಖರಾಗಲೀ ಎಂದು ಸಿ.ಎಂ. ಅಭಿಮಾನಿಗಳು ದೇವರ ಮೊರೆ ಹೋಗಿದ್ದಾರೆ. ಶಿವಮೊಗ್ಗ ನಗರದಲ್ಲಿರುವ ಶಿವಾಲಯದಲ್ಲಿ ಮುಖ್ಯಮಂತ್ರಿ ಅವರ ಅಭಿಮಾನಿಗಳು ವಿಶೇಷ ಪೂಜೆ ನೆರವೇರಿಸಿ, ಅವರ ಆರೋಗ್ಯಕ್ಕಾಗಿ ಪ್ರಾರ್ಥಿಸಿದ್ರು. ಅಲ್ಲದೇ, ಮಹಾರುದ್ರಾಭಿಷೇಕ, ಅಷ್ಟ ಬಿಲ್ವಾರ್ಚನೆ ವಿಶೇಷ ಪೂಜೆ ನೆರವೇರಿಸುವುದರ ಮೂಲಕ, ಮೃತ್ಯುಂಜಯನಲ್ಲಿ ಬೇಡಿಕೊಂಡಿದ್ದಾರೆ.

ಇನ್ನು ಕೆಲೆವೆಡೆ ದರ್ಗಾದಲ್ಲಿಯೂ ವಿಶೇಷ ಪೂಜೆ ನೆರವೇರಿಸಿದ್ದು, ಜಿಲ್ಲಾ ವಕ್ಫ್ ಮಂಡಳಿವತಿಯಿಂದ ನಗರದ ಮಹಾವೀರ ವೃತ್ತದಲ್ಲಿರುವ, ಹಜರತ್ ಸಯ್ಯದ್ ಶಾ ಆಲಿಂ ದರ್ಗಾದಲ್ಲಿ ಪ್ರಾರ್ಥಿಸಿದ್ರು. ಅಲ್ಲದೇ, ದರ್ಗಾಕ್ಕೆ ಚಾದರ ಅರ್ಪಿಸಿ ಮುಸಲ್ಮಾನ್ ಬಾಂಧವರಾದ ಯಡ್ಯೂರಪ್ಪ ಅಭಿಮಾನಿಗಳು ಮತ್ತು ಹಿತೈಷಿಗಳು ವಿಶೇಷ ಪ್ರಾರ್ಥನೆ ನೆರವೇರಿಸಿದ್ರು.

ಒಟ್ಟಾರೆ, ಮುಖ್ಯಮಂತ್ರಿ ಅವರಿಗೆ, ಕೊರೋನಾ ಸೋಂಕು ಧೃಢ ಹಿನ್ನೆಲೆಯಲ್ಲಿ, ಅವರ ಅಭಿಮಾನಿಗಳಲ್ಲಿ ತೀವ್ರ ಬೇಸರ ಮೂಡಿಸಿದೆ. ಬೇಗನೆ ಗುಣಮುಖರಾಗಲಿ ಎಂಬುದೇ ಎಲ್ಲರ ಆಶಯವಾಗಿದ್ದು, ಕೊರೋನಾದಿಂದ ರಾಜ್ಯ, ದೇಶ  ಮುಕ್ತರಾಗಲೀ ಎಂದು ಬೇಡಿಕೊಂಡಿದ್ದಾರೆ.

RELATED ARTICLES

Related Articles

TRENDING ARTICLES