Sunday, January 19, 2025

ಸಿದ್ದರಾಮಯ್ಯ ಗೆ ಕೊರೊನಾ ಪಾಸಿಟಿವ್..! ಮೈಸೂರು ಮನೆ ಸೀಲ್ ಡೌನ್.

ಮೈಸೂರು : ಮಾಜಿ ಸಿಎಂ ಸಿದ್ದರಾಮಯ್ಯ ಸೋಂಕು ಧೃಢವಾದ ಹಿನ್ನಲೆ ಮೈಸೂರಿನ ಟಿ.ಕೆ.ಬಡಾವಣೆಯ ನಿವಾಸವನ್ನ ಸೀಲ್ ಡೌನ್ ಮಾಡಲಾಗಿದೆ. 14 ದಿನಗಳ ಕಾಲ ಆರೋಗ್ಯ ಇಲಾಖೆ ಅಧಿಕಾರಿಗಳು ಸೀಲ್ ಡೌನ್ ಮಾಡಿದ್ದಾರೆ. ಸಿದ್ದರಾಮಯ್ಯ ಮನೆ ಸ್ಯಾನಿಟೈಸ್ ಮಾಡಲಾಗಿದೆ. ಪ್ರಾಥಮಿಕ ಸಂಪರ್ಕ ಹೊಂದಿದವರಿಗೆ ತಪಾಸಣೆ ಮಾಡಲಾಗುತ್ತಿದೆ. ಮನೆ ಮುಂದೆ ಬ್ಯಾರಿಕೇಡ್ ಗಳನ್ನ ಅಳವಡಿಸಿ ಸಾರ್ವಜನಿಕ ಪ್ರವೇಶ ನಿರ್ಭಂಧಿಸಲಾಗಿದೆ. ಟ್ವಿಟರ್ ಮೂಲಕ ತಮಗೆ ಪಾಸಿಟಿವ್ ಇದೆ ಎಂದು ಧೃಢಪಡಿಸಿದ ಸಿದ್ದರಾಮಯ್ಯ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾದರು. ಕಳೆದ ನಾಲ್ಕು ದಿನಗಳಿಂದ ಮೈಸೂರಿನಲ್ಲಿ ವಾಸ್ತವ್ಯ ಹೂಡಿದ್ದ ಸಿದ್ದರಾಮಯ್ಯ ಪತ್ರಕರ್ತರ ಭವನದಲ್ಲಿ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಟಿ.ಕೆ ಬಡಾವಣೆ ನಿವಾಸದಲ್ಲಿ ತಂಗಿದ್ದರು. ಈ ಹಿನ್ನಲೆ ಪತ್ರಕರ್ತರ ಭವನದಲ್ಲಿಯೂ ಸಹ ಸ್ಯಾನಿಟೈಸ್ ಮಾಡಲಾಗಿದೆ. ಸಿದ್ದರಾಮಯ್ಯ ಜೊತೆ ಪ್ರಾಥಮಿಕ ಸಂಪರ್ಕ ಹೊಂದಿದ ಪತ್ರಕರ್ತರಿಗೂ ತಪಾಸಣೆಗೆ ಒಳಪಡುವಂತೆ ಸೂಚನೆ ಬಂದಿದೆ..

RELATED ARTICLES

Related Articles

TRENDING ARTICLES