Sunday, January 19, 2025

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ‘ಕೈ’ ನಾಯಕರಿಗೆ ಕ್ವಾರೆಂಟೈನ್ ನಿಯಮ ಅನ್ವಯಿಸುವುದಿಲ್ಲವೇ..!?

ದಕ್ಷಿಣ ಕನ್ನಡ : ಜಿಲ್ಲೆಯಲ್ಲಿ ರಾಜಕೀಯ ನಾಯಕರಿಗೊಂದು ಕಾನೂನು, ಜನಸಾಮಾನ್ಯರಿಗೊಂದು ಕಾನೂನು ಅನ್ನೋ ಹಾಗಾಗಿದೆ. ಆಗಸ್ಟ್ 1 ರಂದು ವಿಧಾನಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜಾ ಹಾಗೂ ಅವರ ಪತ್ನಿ ಡಾ.ಕವಿತಾ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಆದರೆ ಜುಲೈ 31 ದಕ್ಷಿಣ ಕನ್ನಡ ಪ್ರವಾಸ ಮಾಡಿದ್ದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಜೊತೆ ಐವನ್ ಡಿಸೋಜಾ ನಿಕಟ ಸಂಪರ್ಕದಲ್ಲಿದ್ದರು. ದಿನವಿಡೀ ಅವರ ಕಾರ್ಯಕ್ರಮದಲ್ಲಿಯೂ ಭಾಗವಹಿಸಿದ್ದರು. ಸ್ವ್ಯಾಬ್ ಟೆಸ್ಟ್ ಕೊಟ್ಟ ಬಳಿಕವೂ ಅವರ ಜೊತೆಗೆ ತಿರುಗಾಡಿದ್ದರು. ಮಾತ್ರವಲ್ಲದೇ ಹಲವು ಕಾಂಗ್ರೆಸ್ ನಾಯಕರು ಕೂಡಾ ಐವನ್ ಹಾಗೂ ಡಿಕೆಶಿ ಜೊತೆಗಿದ್ದರು. ಆದರೆ ಈ ರೀತಿ ಸಂಪರ್ಕದಲ್ಲಿದ್ದ ನಾಯಕರು ಇದೀಗ ಬಿಂದಾಸ್ ಆಗಿ ಓಡಾಡುತ್ತಿದ್ದಾರೆ. ಮಾತ್ರವಲ್ಲದೇ ಡಿಕೆಶಿ ಸುದ್ದಿಗೋಷ್ಟಿ ನಡೆಸಿದ್ದ ಅದೇ ಕಾಂಗ್ರೆಸ್ ಭವನದಲ್ಲಿ ಆಗಸ್ಟ್ 3 ರಂದು ಮಹಿಳಾ ಹಾಗೂ ಯುವ ಕಾಂಗ್ರೆಸ್ ಸದಸ್ಯರು ಸೇರಿಕೊಂಡು ರಾಖಿ ಹಬ್ಬ ಆಚರಿಸಿಕೊಂಡಿದ್ದಾರೆ. ಈ ರೀತಿ ರಕ್ಷಾ ಬಂಧನ ಆಚರಿಸಿಕೊಂಡವರಲ್ಲಿ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಿಥುನ್ ರೈ ಹಾಗೂ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಲೆಟ್ ಪಿಂಟೋ ಅವರು ಕೂಡಾ ಇದ್ದು, ಇವರು ಯಾಕಾಗಿ ಕ್ವಾರೆಂಟೈನ್ ಪಾಲಿಸಿಲ್ಲ ಅನ್ನೋ ಚರ್ಚೆ ಆರಂಭವಾಗಿದೆ. ಇಬರಿಬ್ಬರೂ ಡಿಕೆಶಿ ಜೊತೆ ವೇದಿಕೆಯನ್ನೂ ಹಂಚಿಕೊಂಡಿದ್ದು, ಐವನ್ ಕೂಡಾ ಆ ಎಲ್ಲಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಆಗಸ್ಟ್ 1 ರಂದು ಕೊರೊನಾ ದೃಢಪಟ್ಟಿರುವ ಬಗ್ಗೆ ಸ್ವತಃ ಐವನ್ ಅವರೇ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದರು. ಅದಾಗಿ ಕೆಲವೇ ಹೊತ್ತಿನಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪತ್ರಕರ್ತರು ಹಾಗೂ ‘ಕೈ’ ನಾಯಕರಿಗೆ ಸೆಲ್ಫ್ ಕ್ವಾರೆಂಟೈನ್ ಆಗುವಂತೆ ಸೂಚಿಸಲಾಗಿತ್ತು. ಅಂತೆಯೇ ಮಾಜಿ ಸಚಿವ ರಮಾನಾಥ ರೈ, ಯುಟಿ ಖಾದರ್ ಹಾಗೂ ಪತ್ರಕರ್ತರು ಸೆಲ್ಫ್ ಕ್ವಾರೆಂಟೈನ್ ಗೆ ಒಳಗಾಗಿದ್ದಾರೆ. ಆದರೆ ಶಾಲೆಟ್ ಪಿಂಟೋ, ಮಿಥುನ್ ರೈ ಸಹಿತ ಹಲವು ನಾಯಕರು ಐವನ್‌ ಡಿಸೋಜಾ ಅವರ ಪ್ರಾಥಮಿಕ ಸಂಪರ್ಕಕಕ್ಕೆ ಬಂದಿದ್ದರೂ ಕ್ವಾರೆಂಟೈನ್ ಪಾಲಿಸದ ಇವರ ಬಗ್ಗೆ ಜಿಲ್ಲಾಡಳಿತ ಹಾಗೂ ಜಿಲ್ಲಾ ಆರೋಗ್ಯ ಇಲಾಖೆ ಯಾಕಾಗಿ ಸುಮ್ಮನಿದೆ ಅನ್ನೋ ಪ್ರಶ್ನೆ ಎದುರಾಗಿದೆ.

ಇರ್ಷಾದ್ ಕಿನ್ನಿಗೋಳಿ
ಪವರ್ ಟಿವಿ, ಮಂಗಳೂರು

RELATED ARTICLES

Related Articles

TRENDING ARTICLES