ಕೊಪ್ಪಳ : ನಮ್ಮಲ್ಲಿ ಕಳಪೆ ರಸ್ತೆಗಳು ಯಾವ ಮಟ್ಟಿಗೆ ಇವೆ ಅಂದ್ರೆ ನಾವು ಆಡು ಬಾಷೆಯಲ್ಲಿ ಒಂದು ಮಾತು ಹೇಳ್ತಿವಿ ಗರ್ಭಿಣಿಯರು ಎನಾದ್ರೂ ಈ ರಸ್ತೆಯಲ್ಲಿ ಬಂದ್ರೆ ಇಲ್ಲೆ ಹೆರಿಗೆ ಆಗುತ್ತೆ ಅಂತಾ ಕಾಮಿಡಿ ಮಾಡ್ತಿವಿ ಆದ್ರೆ ಅಂತದ್ದೆ ಒಂದು ಘಟನೆ ಇದೀಗ ಕೊಪ್ಪಳದಲ್ಲಿ ನೆಡೆದುಹೋಗಿದೆ.. ಹೌದು ಮಾರ್ಗ ಮದ್ಯೆಯಲ್ಲೇ 108 ಆಂಬ್ಯಲೆನ್ಸ್ ಕೆಸರಿನಲ್ಲಿ ಸಿಲುಕಿ, ವಾಹನದಲ್ಲೇ ಹೆರಿಗೆಯಾದ ಘಟನೆಯೊಂದು ಕೊಪ್ಪಳ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಕುಷ್ಟಗಿ ತಾಲೂಕಿನ ರಾಂಪುರ ಗ್ರಾಮದಲ್ಲಿ ಘಟನೆ ನಡೆದಿದ್ದು. ಗರ್ಭಿಣಿಯನ್ನ ಆಸ್ಪತ್ರೆಗೆ ಕರೆದುಕೊಂಡು ಹೋಗುವ ವೇಳೆ ಕೆಸರಿನಲ್ಲಿ ಸುಮಾರು 20 ನಿಮಿಷಗಳ ಕಾಲ 108 ಆಂಬ್ಯಲೆನ್ಸ್ ಸಿಲುಕಿಕೊಂಡಿತ್ತು. ತಕ್ಷಣ ಆಂಬ್ಯುಲೆನ್ಸ್ ಚಾಲಕ ಹಾಗು ಸ್ಥಳೀಯರು ಆಂಬ್ಯುಲೆನ್ಸ್ ಹೊರ ತೆಗೆಯಲು ಹರಸಾಹಸ ಪಟ್ಟಿದ್ದಾರೆ. ಆದರೆ ಸಮಯ ಮೀರಿದ್ದರಿಂದ ಈ ವೇಳೆ ಗರ್ಭಿಣಿಗೆ ಹೊಟ್ಟೆ ನೋವು ಕಾಣಿಸಿಕೊಂಡು, ವಾಹನದಲ್ಲೇ ಹೆರಿಗೆಯಾಗಿದೆ. ಸದ್ಯ ತಾಯಿ ಹಾಗು ಮಗು ಆರೋಗ್ಯವಾಗಿದ್ದು, ಹಿರೇಮನ್ನಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ರಸ್ತೆಯ ಕಳಪೆ ಕಾಮಗಾರಿಯೇ ಆಂಬ್ಯುಲೆನ್ಸ್ ಸಿಲುಕಲು ಕಾರಣ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶುಕ್ರಾಜ ಕುಮಾರ್ ಪವರ್ ಟಿವಿ ಕೊಪ್ಪಳ