Sunday, January 19, 2025

ಅಯೋಧ್ಯೆಯಲ್ಲಿ ಭವ್ಯವಾದ ರಾಮಮಂದಿರ ನಿರ್ಮಾಣ ನಮ್ಮೆಲ್ಲರ ಕನಸಾಗಿತ್ತು : ಸಚಿವ ಜಗದೀಶ್ ಶೆಟ್ಟರ್

ಹುಬ್ಬಳ್ಳಿ : ಅಯೋಧ್ಯೆಯಲ್ಲಿ ಭವ್ಯವಾದ ರಾಮಮಂದಿರ ನಿರ್ಮಾಣ ನಮ್ಮೆಲ್ಲರ ಕನಸಾಗಿತ್ತು. ಅದು ಇಂದು ನಿರ್ಮಾಣವಾಗುತ್ತಿದೆ ಎಂದು ಬೃಹತ್ ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು ಇದೂ ದೇಶದ ಜನರ ಕನಸಾಗಿತ್ತು, ನಾಳೆಯ ದಿನ ಸುವರ್ಣ ಅಕ್ಷರಗಳಲ್ಲಿ ಬರೆದದಿಡುವ ದಿನವಾಗಿದೆ. ಲಾಲಕೃಷ್ಣ ಅಡ್ವಾನಿಯವರ ರಥಯಾತ್ರೆಯಲ್ಲಿ ಭಾಗವಹಿಸಿದ ಕ್ಷಣ ನನಗೆ ಸಾರ್ಥಕ ಎನಿಸಿದೆ. ಅಂದಿನ ರಥಯಾತ್ರೆ ಕಾರ್ಯಕ್ರಮವನ್ನ ನಾನೇ ವಹಿಸಿಕೊಂಡಿದ್ದೆ. ಅದು ನನಗೆ ಬಹಳ ಖುಷಿ ಎನಿಸಿದೆ. ಹುಬ್ಬಳ್ಳಿಯ ರಥಯಾತ್ರೆ ನನಗೆ ಬಹಳ ಖುಷಿ ಕೊಟ್ಟಿದೆ. ಆಗ ತಾನೇ ನಾನು ಸಕ್ರಿಯ ರಾಜಕಾರಣಕ್ಕೆ ಎಂಟ್ರಿಕೊಟ್ಟಿದ್ದೆ. ಹೀಗಾಗಿ ಅಡ್ವಾಣಿಯವರ ರಥಯಾತ್ರೆ ನನ್ನ ಜೀವನದಲ್ಲಿ ಮರೆಯಲಾಗದ ಕ್ಷಣ. ರಾಮಮಂದಿರ ನಿರ್ಮಾಣಕ್ಕೆ ಅಡ್ವಾಣಿಯವರ ಕೊಡುಗೆ ಅಪಾರ. ರಾಮಮಂದಿರ ನಿರ್ಮಾಣದ ವಿಚಾರವನ್ನ ವಿರೋಧ ಪಕ್ಷಗಳು ರಾಜಕೀಯ ವಿಚಾರ ಮಾಡಿದ್ರು. ರಾಮಮಂದಿರ ವಿಚಾರದ ಮೂಲಕ ಸಂಘರ್ಷ ಮಾಡಿದ್ರು. ಆದ್ರೆ ನಾವು ಅಂದು ಮಂದಿರ ನಿರ್ಮಾಣ ಮಾಡುತ್ತೆವೆಂದು ಹೇಳಿದ್ದೆವು ಅದನ್ನ ಮಾಡಿದ್ದೆವೆಂದ್ರು.

RELATED ARTICLES

Related Articles

TRENDING ARTICLES