Monday, December 23, 2024

ನಾಳೆಯಿಂದ ಜಿಮ್, ಥಿಯೇಟರ್, ಯೋಗ ಸೆಂಟರ್​​ಗಳು  ಓಪನ್..!

ಬೆಂಗಳೂರು: ಕಳೆದ ನಾಲ್ಕು ತಿಂಗಳುಗಳಿಂದ ಜಿಮ್, ಥಿಯೇಟರ್, ಯೋಗ ಸೆಂಟರ್​ಗಳು ಕ್ಲೋಸ್ ಆಗಿದ್ದು, ನಾಳೆಯಿಂದ ಓಪನ್ ಮಾಡಲು ನಿರ್ಧರಿಸಲಾಗಿದೆ.

ನಷ್ಟದಲ್ಲಿರುವ ಜಿಮ್​​ ಮಾಲೀಕರು ಹೊಸ ಭರವಸೆಯಲ್ಲಿ ಜಿಮ್​ ಓಪನ್ ಮಾಡಲು ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಜಿಮ್ ಪ್ರಿಯರು ಸಾಮಾಜಿಕ ಅಂತರದೊಂದಿಗೆ ಮಾಸ್ಕ್ ಹಾಕುವುದು ಕಡ್ಡಾಯವಾಗಿದೆ.ಇನ್ನು ಯೋಗಾ ಸೆಂಟರ್​ಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುವಂತಿಲ್ಲ.

ಇನ್ನು ಜಿಮ್​ಗೆ ಬರುವವರು ಹೆದರುವ ಅವಶ್ಯಕತೆ ಇಲ್ಲ. ಎಲ್ಲಾ ಕೊರೋನಾ ಸಮಸ್ಯೆಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ಹಾಗೂ ಸೂಕ್ತ ಸರ್ಕಾರದ ಕ್ರಮಕ್ಕೆ ಅನುಗುಣವಾಗಿ ಜಿಮ್ ಹಾಗು ಥಿಯೇಟರ್ ಹಾಗೂ ಯೋಗ ಸೆಂಟರ್ ತೆರೆಯಲು ನಿರ್ಧರಿಸಲಾಗಿದೆ.

RELATED ARTICLES

Related Articles

TRENDING ARTICLES