ಚಿತ್ರದುರ್ಗ : ನನ್ನ ರಾಜಕೀಯ ಜೀವನ ಅಂತ್ಯವಾದರೂ ಸರಿಯೇ, ನನ್ನನ್ನು ಜೈಲಿಗೆ ಕಳುಹಿಸಿದರೂ ಜಗ್ಗದೇ ಬೆಳಗಾವಿ ಜಿಲ್ಲೆಗೆ ಸ್ಥಳಾಂತರ ಮಾಡಲು ಉದ್ದೇಶಿಸಿರುವ ಕಾಲೇಜ್ ಸ್ಥಳಾಂತರ ಮಾಡಲು ಬಿಡುವುದಿಲ್ಲ ಅದಕ್ಕಾಗಿ ಧರಣಿ ಮಾಡಿಯೇ ತೀರುತ್ತೇನೆ ಅಂತ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಬಿಜೆಪಿ ಸರ್ಕಾರದ ವಿರುದ್ಧ ಗರಂ ಅಗಿದ್ದಾರೆ, ರಾಜಕೀಯಕ್ಕಿಂತ ಕ್ಷೇತ್ರದ ಜನ ಸಾಮಾನ್ಯರ ಹಿತ ಮುಖ್ಯ, ಇಲ್ಲಿಗೆ ನನ್ನ ಪೊಲಿಟಿಕಲ್ ಲೈಫ್ ಕೊನೆಯಾಗಲಿ ಯಾವುದೇ ಕಾರಣಕ್ಕೂ ಕಾಲೇಜ್ ಸ್ಥಳಾಂತರ ಮಾಡಲು ಬಿಡುವುದಿಲ್ಲ ಅಂತ ಪಟ್ಟು ಹಿಡಿದಿದ್ದಾರೆ.
ಚಿತ್ರದುರ್ಗ ತಾಲೂಕಿನ ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ತುರುವನೂರು ಗ್ರಾಮಕ್ಕೆ ಸರ್ಕಾರಿ ಪದವಿ ಕಾಲೇಜ್ ಅನ್ನು ಸಿದ್ದರಾಮಯ್ಯ ಸರ್ಕಾರದಲ್ಲಿ ಮಂಜೂರು ಮಾಡಲಾಗಿತ್ತು. ಆದರೆ ಈಗಿನ ಬಿಜೆಪಿ ಸರ್ಕಾರ ದ್ವೇಷದ ರಾಜಕೀಯ ಮಾಡುತ್ತಿದೆ. ಈ ಭಾಗಕ್ಕೆ ಅನ್ಯಾಯ ಮಾಡಿ ಈ ಕಾಲೇಜನ್ನು ಬೆಳಗಾವಿ ಜಿಲ್ಲೆಗೆ ಸ್ಥಳಾಂತರ ಮಾಡಲಾಗುತ್ತಿದೆ. ತುರುವನೂರು ಕಾಲೇಜ್ ನಲ್ಲಿ 100 ಕ್ಕಿಂತ ಕಡಿಮೆ ವಿದ್ಯಾರ್ಥಿಗಳಿದ್ದಾರೆಂದು ನೆಪವೊಡ್ಡಿ ಕಾಲೇಜ್ ಸ್ಥಳಾಂತರಕ್ಕೆ ಷಡ್ಯಂತ್ರ ಮಾಡಲಾಗಿದೆ ಎಂದು ಶಾಸಕರು ಅರೋಪಿಸಿದ್ದಾರೆ. ಕಾಲೇಜಿನ ಉಳಿವಿಗಾಗಿ ಹೋರಾಟ ಮಾಡಲು ಸಿದ್ದ ಅಂತ ಎಚ್ಚರಿಕೆ ನೀಡಿದ್ದಾರೆ.