ಹೊಸಕೋಟೆ : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ವಿಧಾನ ಸಭಾ ಕ್ಷೇತ್ರದ ರಾಜಕೀಯ ಜಿದ್ದಾಜಿದ್ದಿನ ರಾಜಕೀಯ. ಕಳೆದ ಬೈ ಎಲೆಕ್ಷನ್ ನಲ್ಲಿ ಎಂಟಿಬಿ ನಾಗರಾಜ್ ಸೋತ ನಂತರ ಹೊಸಕೋಟೆ ಕ್ಷೇತ್ರದಲ್ಲಿ ರಾಜಕೀಯ ಬೆಳವಣಿಗೆಗಳು ಸ್ವಲ್ಪ ಮಟ್ಟಿಗೆ ತಣ್ಣಗಾಗಿದ್ದವು. ಇದೀಗ ಎಂಟಿಬಿ ನಾಗರಾಜ್ ಗೆ ಎಂಎಲ್ಸಿ ಕೊಟ್ಟ ನಂತರ ಇದೀಗ ಮತ್ತೆ ಹೊಸಕೋಟೆ ಕ್ಷೇತ್ರ ರಾಜಕೀಯ ಚಟುವಟಿಕೆಗಳು ಗರಿಗೆದರಿದೆ. ಇನ್ನೂ ಕ್ಷೇತ್ರದಲ್ಲಿ ಸೇರ್ಪಡೆ ಕಾರ್ಯಕ್ರಮಗಳು ಸಹ ಜೋರಾಗಿ ನಡೆಯುತ್ತಿವೆ. ಶೀಘ್ರವಾಗಿ ಗ್ರಾಮ ಪಂಚಾಯಿತಿ ಚುನಾವಣೆ ನಡೆಯುತ್ತಿರುವುದರಿಂದ ಕಾರ್ಯಕರ್ತರು ಪಕ್ಷಗಳನ್ನು ಬದಲಾವಣೆ ಮಾಡುತ್ತಿದ್ದಾರೆ.
ಇನ್ನೂ ನಿನ್ನೆ ಹೊಸಕೋಟೆ ತಾಲೂಕಿನ ಕೊರಳೂರು ಗ್ರಾಮದಲ್ಲಿ ಎಂಎಲ್ಸಿ ನಾಗರಾಜ್ ಕಾಮಗಾರಿಗೆ ಗುದ್ದಲಿ ಪೂಜೆ ಮಾಡಿರುವುದು ಎಂಟಿಬಿ ನಾಗರಾಜ್ ಮತ್ತು ಶರತ್ ಬಚ್ಚೇಗೌಡ ಅವರ ನಡುವೆ ಮುಸುಕಿನ ಗುದ್ದಾಟ ಶುರುವಾಗಲು ಕಾರಣವಾಗಿದೆ. ಇನ್ನೂ ಈ ಬಗ್ಗೆ ಇಂದು ಶರತ್ ಬಚ್ಚೇಗೌಡ ಪ್ರತಿಕ್ರಿಯೆ ನೀಡಿದ್ದಾರೆ. ಯಾವುದೇ ಕ್ಷೇತ್ರಗಳಲ್ಲಿ ಕಾಮಗಾರಿಗಳ ಪೂಜೆ ನಡೆಯಬೇಕಾದರೆ ಸ್ಥಳಿಯ ಶಾಸಕ ಶಿಷ್ಟಚಾರ ಮುಖ್ಯವಾದದ್ದು. ಆದ್ರೆ ಎಂಟಿಬಿ ನಾಗರಾಜ್ ಶಿಷ್ಟಚಾರ ಉಲ್ಲಂಘನೆ ಮಾಡಿದ್ದಾರೆ. ಕುಮಾರಸ್ವಾಮಿ ಸರ್ಕಾರ ಇದ್ದಂತಹ ಸಂದರ್ಭದಲ್ಲಿ ಗ್ರಾಮ ವಿಕಾಸ ಯೋಜನೆಯಡಿ ಮಂಜೂರಾದ ಕಾಮಗಾರಿಯನ್ನು ಎಂಟಿಬಿ ನಾಗರಾಜ್ ಸ್ಥಳಿಯ ಅಧಿಕಾರಿಗಳಿಗೆ ಮತ್ತು ಸ್ಥಳಿಯ ಶಾಸಕರ ಗಮನಕ್ಕೆ ತರದೇ ಗುದ್ದಲಿ ಪೂಜೆ ಮಾಡಿದ್ದಾರೆ ಇದು ಖಂಡನಾರ್ಹ ಎಂದು ಅಸಮಾಧನ ವ್ಯಕ್ತ ಪಡಿಸಿದ್ದಾರೆ. ಇನ್ನೂ ನಾವು ಈ ಹಿಂದೆ ಎಂಟಿಬಿ ಕಾರಿನಲ್ಲಿ ಗರಡಿ ಇಟ್ಟುಕೊಂಡು ಓಡಾಡುತ್ತಿದ್ದರು ಎಂದು ಕೇಳಿದ್ದೆ ಈಗ ಆ ಗರಡಿ ತುಕ್ಕು ಹಿಡಿದಿರಬಹುದು ಆದ್ದರಿಂದ ತುಕ್ಕು ಬಿಡಬೇಕು ಎಂದು ಈ ಗುದ್ದಲಿ ಪೂಜೆ ನಡೆಸಿರಬಹುದು ಎಂದು ಹೊಸಕೋಟೆ ಶಾಸಕ ವ್ಯಂಗ್ಯವಾಡಿದ್ದಾರೆ.ಎಂಟಿಬಿ ನಾಗರಾಜ್ ಇದೀಗ ಎಂಎಲ್ಸಿ ಆಗಿದ್ದಾರೆ ಅವರಿಗೆ ಎಂಎಲ್ಸಿ ಶಿಷ್ಟಚಾರದ ಬಗ್ಗೆ ತಿಳಿದುಕೊಳ್ಳಬೇಕು. ವಿವೇಕ, ವಿವೇಚನೆ ಇಟ್ಟುಕೊಂಡು ಕಾಮಗಾರಿಗಳನ್ನು ಮಾಡಬೇಕು. ಇನ್ನೂ ನಿನ್ನೆ ಶಿಷ್ಟಚಾರ ಉಲ್ಲಂಘನೆ ಮಾಡಿ ಕಾಮಗಾರಿಗೆ ಗುದ್ದಲಿ ಪೂಜೆ ಮಾಡುವ ಸಂದರ್ಭದಲ್ಲಿ ಸಣ್ಣ ಘರ್ಷಣೆ ಸಹ ಆಗಿದೆ. ಪೋಲಿಸರು ಸ್ಥಳದಲ್ಲಿದ್ದ ಕಾರಣ ಗಲಾಟೆ ತಪ್ಪಿದೆ. ಈ ರೀತಿ ಘರ್ಷಣೆ ಮುಂದಿನ ದಿನಗಳಲ್ಲಿ ತಾಲೂಕಿನಲ್ಲಿ ಘರ್ಷಣೆ ನಡೆದರೆ ಇದಕ್ಕೆ ಸರ್ಕಾರ ಮತ್ತು ಎಂಎಲ್ಸಿ ನಾಗರಾಜ್ ಕಾರಣವಾಗುತ್ತಾರೆ ಎಂದು ತಿಳಿಸಿದ್ದಾರೆ.
ರಾಮಾಂಜಿ.ಎಂ ಬೂದಿಗೆರೆ ಪವರ್ ಟಿವಿ ದೇವನಹಳ್ಳಿ