Sunday, January 19, 2025

ಸೋಂಕಿತರನ್ನು ನೆಲದ ಮೇಲೆ ಮಲಗಿಸಿ ಮಾನವೀಯತೆ ಮರೆತ ಫ್ಯಾಕ್ಟರಿ ಆಡಳಿತ ಮಂಡಳಿ..!!

ಹಾಸನ : ಪಾಸಿಟಿವ್ ಬಂದ ವ್ಯಕ್ತಿಗಳನ್ನು ರೂಮಿನಲ್ಲಿ ಕೂಡಿ ಹಾಕಿ ಅಮಾನವೀಯತೆ ನಡೆದಿರುವ ಘಟನೆ ಹಾಸನ ಜಿಲ್ಲೆಯ ಹೊರವಲಯದ ಕೈಗಾರಿಕಾ ಪ್ರದೇಶದ ಕಾರ್ಖಾನೆಯೊಂದರಲ್ಲಿ ನಡೆದಿದೆ.‌ ನಗರದ ಕೈಗಾರಿಕಾ ಪ್ರದೇಶದಲ್ಲಿರುವ ಹಿಮತ್ ಸಿಂಕಾ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿರುವ 130 ಮಂದಿ ಕಾರ್ಮಿಕರಿಗೆ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಮಾಡಲಾಗಿದ್ದು, ಪಾಸಿಟಿವ್ ಬಂದ ವ್ಯಕ್ತಿಗಳನ್ನು ಒಂದು ಕೋಣೆಯೊಳಗೆ ಕೂಡಿಹಾಕಿ ಮೂಲಸೌಕರ್ಯ ನೀಡದೆ ನೆಲದ ಮೇಲೆ ಮಲಗುವಂತಹ ಸ್ಥಿತಿಗೆ ಕಾರ್ಖಾನೆ ಮಾಡಿರೋದು ಕಾರ್ಮಿಕರ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನು ಪಾಸಿಟಿವ್ ಬಂದ ಕಾರ್ಮಿಕರಿಗೆ ಯಾವುದೇ ರೀತಿಯ ಚಿಕಿತ್ಸೆಯನ್ನು ನೀಡದೆ ಅವರಿಗೆ ಮಲಗಲು ವ್ಯವಸ್ಥೆ ಕಲ್ಪಿಸದೆ ಐವತ್ತಕ್ಕೂ ಹೆಚ್ಚು ಮಂದಿ ಸಿಬ್ಬಂದಿಗಳು ನೆಲದಲ್ಲಿ ಮಲಗುವಂತಹ ಸ್ಥಿತಿ ನೋಡಿದರೆ ಕಾರ್ಖಾನೆಯ ಆಡಳಿತ ಮಂಡಳಿ ಕಾರ್ಮಿಕರನ್ನು ಯಾವ ರೀತಿ ನಡೆಸಿಕೊಳ್ಳುತ್ತಿದೆ ಎಂಬುದು ಗೊತ್ತಾಗಲಿದೆ. ಇನ್ನು ಪಾಸಿಟಿವ್ ಬಂದ ಕಾರ್ಮಿಕರು ನೆಲದಲ್ಲಿಯೇ ಮಲಗಿ ತಮ್ಮ ಅಸಹಾಯಕತೆಯನ್ನು ತೋರಲಾಗಿದೆ. ಭಯಭೀತಗೊಂಡ ಸ್ಥಿತಿಯಲ್ಲಿರುವ ದೃಶ್ಯವನ್ನು ಅಲ್ಲಿನ ಸಿಬ್ಬಂದಿಗಳು ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.

RELATED ARTICLES

Related Articles

TRENDING ARTICLES