Friday, November 22, 2024

ಮಹಿಳಾ ಪತ್ತಿನ ಸಹಕಾರ ಸಂಘದಿಂದ ಕೋಟಿ ಕೋಟಿ ವಂಚನೆ..?!

ಮೈಸೂರು: ಮಹಿಳಾ ಪತ್ತಿನ ಸಹಕಾರ ಸಂಘವೊಂದು ಸಾವಿರಾರು ಗ್ರಾಹಕರನ್ನ ವಂಚಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಕುವೆಂಪುನಗರ `ಕೆ’ ಬ್ಲಾಕ್ ನ ಗಾನಭಾರತಿ ಆಡಿಟೋರಿಯಂ ಹಿಂಭಾಗದಲ್ಲಿರುವ ಮೈಸೂರು ನಗರ ಮಹಿಳಾ ಪತ್ತಿನ ಸಹಕಾರ ಸಂಘವೇ ಗ್ರಾಹಕರನ್ನ ವಂಚಿಸಿದೆ. ಹಿರಿಯ ನಾಗರೀಕರನ್ನೇ ಹೆಚ್ಚಾಗಿ ಟಾರ್ಗೆಟ್ ಮಾಡಿರುವ ಸಂಸ್ಥೆ ಸುಮಾರ  10 ಕೋಟಿ ಹಣ ವಂಚಿಸಿದೆ ಎಂದು ಆರೋಪಿಸಲಾಗಿದೆ. 
ನೂರಾರು ಹಿರಿಯ ನಾಗರೀಕರು ಕೊರೋನಾ ಸಂಕಷ್ಟದ ಮಧ್ಯೆ ಪೊಲೀಸ್ ಠಾಣೆಗೆ ಅಲೆದಾಡುವ ಪರಿಸ್ಥಿತಿ ಉದ್ಭವವಾಗಿದೆ.

ಕಳೆದ 24 ವರ್ಷಗಳಿಂದ ನಡೆಯುತ್ತಿರುವ ಸಹಕಾರ ಸಂಘದಲ್ಲಿ ಅಡವಿಟ್ಟ ಚಿನ್ನಾಭರಣಗಳೂ ಸಹ ನಾಪತ್ತೆಯಾಗಿದೆ ಎಂದು ಗ್ರಾಹಕರ ಆರೋಪವಾಗಿದೆ. ಕೊರೋನಾ ಹಾವಳಿ ಶುರುವಾಗುತ್ತಿದ್ದಂತೆಯೇ ಹೂಡಿದ ಹಣಕ್ಕೆ ಸಂಘ ಪಂಗನಾಮ ಹಾಕಿದೆ.ಮಹಿಳೆಯರೇ ನಡೆಸುತ್ತಿರುವ ಪತ್ತಿನ ಸಹಕಾರ ಸಂಘವನ್ನ ನಂಬಿ ಹೂಡಿದ ಹಣ ಸಮಯಕ್ಕೆ ಸರಿಯಾಗಿ ಬಾರದ ಹಿನ್ನಲೆ ಗ್ರಾಹಕರು ಕಂಗಾಲಾಗಿದ್ದಾರೆ.

ವೈಯುಕ್ತಿಕವಾಗಿ ಲಕ್ಷಾಂತರ ರೂ ಹೂಡಿರುವ ಗ್ರಾಹಕರು ತತ್ತರಿಸಿದ್ದಾರೆ. ಹೆಚ್ಚಿನ ಬಡ್ಡಿ ಆಮಿಷಕ್ಕೆ ಬಲಿಯಾಗಿ ಹಿರಿಯ ನಾಗರೀಕರು ಹಣ ಹೂಡಿದ್ದು ಸದ್ಯ ಹಣಕ್ಕಾಗಿ ಕಚೇರಿಗೆ ಅಲೆಯುತ್ತಿರುವ ಇವರು ಹೈರಾಣರಾಗಿದ್ದಾರೆ.

ಅಶೋಕಾಪುರಂ ಪೊಲೀಸ್ ಠಾಣೆಯಲ್ಲಿ ವಂಚನೆಗೆ ಒಳಗಾದ ಕೆಲವರಿಂದ ಸಹಕಾರ ಸಂಘದ ವಿರುದ್ಧ ಎಫ್.ಐ.ಆರ್ದಾ ಖಲಾಗಿದೆ. ಹೂಡಿದ ಹಣಕ್ಕಾಗಿ ಹಿರಿಯ ನಾಗರೀಕರು ಪರಿತಪಿಸುತ್ತಿದ್ದಾರೆ.
ಕೊರೋನಾ ಸಂಧರ್ಭದಲ್ಲಿ ಮನೆಯಲ್ಲಿ ಸೇಫಾಗಿ ಇರಬೇಕಿದ್ದ ಹಿರಿಯನಾಗರೀಕರಿಗೀಗ ಸಂಕಷ್ಟ ಎದುರಾಗಿದೆ.

ಕೊರೋನಾ ಹೊಡೆತದಲ್ಲಿ ಗಾಯದ ಮೇಲೆ ಬರೆ ಎಳೆದ ಮಹಿಳಾ ಪತ್ತಿನ ಸಹಕಾರ ಸಂಘದ ವಿರುದ್ದ ವಂಚನೆಗೆ ಒಳಗಾದವರು ಆಕ್ರೋಷ ವ್ಯಕ್ತಪಡಿಸಿದ್ದಾರೆ. ತಮ್ಮ ಹಣಕ್ಕಾಗಿ ಜನಪ್ರತಿನಿಧಿಗಳ ಮನೆ ಬಾಗಿಲಿಗೆ ಅಲೆಯುತ್ತಿರುವ ಗ್ರಾಹಕರಿಗೆ ನ್ಯಾಯ ಸಿಕ್ಕಿಲ್ಲ.ಪೊಲೀಸರೂ ಸಹ ಸೂಕ್ತವಾಗಿ ಸ್ಪಂದಿಸುತ್ತಿಲ್ಲವೆಂದು ಆರೋಪಿಸಿದ್ದಾರೆ.

RELATED ARTICLES

Related Articles

TRENDING ARTICLES