ವಿಜಯಪುರ : ಕುಡಿದ ಅಮಲಿನಲ್ಲಿ ಗಾಯಗೊಂಡು ಜಿಲ್ಲಾಸ್ಪತ್ರೆಗೆ ಕರೆತರಲ್ಪಟ್ಟಿದ್ದ ವ್ಯಕ್ತಿ ಚಿಕಿತ್ಸೆ ಪಡೆಯಲು ನಿರಾಕರಸಿ ರಂಪಾಟ ನಡೆಸಿದ ಘಟನೆ ವಿಜಯಪುರದ ಜಿಲ್ಲಾ ಆಸ್ಪತ್ರೆಯ ಮುಂಭಾಗ ನಡೆದಿದೆ.
ಇಂದು ಮಧ್ಯಾಹ್ನ ಕುಡಿದ ಅಮಲಿನಲ್ಲಿದ್ದ ವ್ಯಕ್ತಿ ರಸ್ತೆಯಲ್ಲಿ ಬಿದ್ದು ಗಾಯಗೊಂಡಿದ್ದ. ತಕ್ಷಣವೇ ಆತನನ್ನ ಸಾರ್ವಜನಿಕರು ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ಕರೆ ತಂದಿದ್ದಾರೆ. ವೈದ್ಯರು ಆತನಿಗೆ ಚಿಕಿತ್ಸೆ ನೀಡಲು ಮುಂದಾದಾಗ ವೈದ್ಯರನ್ನೆ ಬೈದು ಚಿಕಿತ್ಸೆ ಪಡೆಯದೆ ಜಿಲ್ಲಾಸ್ಪತ್ರೆ ಎದುರು ರಂಪಾಟ ನಡೆಸಿದ್ದಾನೆ. ಬಳಿಕ ಸಾರ್ವಜನಿಕರು ಹಾಗೂ ವೈದ್ಯಕೀಯ ಸಿಬ್ಬಂದಿ ಆತನನ್ನ ಆಸ್ಪತ್ರೆ ಒಳಗೆ ಬರುವಂತೆ ಎಷ್ಟೇ ತಿಳಿ ಹೇಳಿದ್ರೂ ಚಿಕಿತ್ಸೆಗೆ ಸಹಕರಿಸದೆ ಕೂಗಾಟ ನಡೆಸಿದ್ದಾನೆ. ಅವ್ಯಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಒಂದು ಗಂಟೆಗೂ ಅಧಿಕ ಕಾಲ ಆತನ ಮನವೂಲಿಸಿ ವೈದ್ಯರು ಚಿಕಿತ್ಸೆ ನೀಡಿದ್ದಾರೆ.