Sunday, December 22, 2024

ಬಳ್ಳಾರಿಯಲ್ಲಿ ಒಂದೇ ದಿನ 30 ಪೊಲೀಸರಿಗೆ ಕೊರೋನಾ ಪಾಸಿಟಿವ್..!

ಬಳ್ಳಾರಿ:  ಜಿಲ್ಲೆಯಲ್ಲಿ ಒಂದೇ ದಿನ 30 ಮಂದಿ ಪೊಲೀಸರಿಗೆ ಕೊರೋನಾ ಪಾಸಿಟಿವ್ ಬಂದಿದೆ. ಇಲಾಖೆಯ 155 ಜನರಿಗೆ ಕೊರೋನಾ ಟೆಸ್ಟ್ ಮಾಡಿಸಲಾಗಿತ್ತು. ಅದರಲ್ಲಿ 30 ಸಿಬ್ಬಂದಿಗೆ ಕೊರೋನಾ ದೃಢಪಟ್ಟಿದೆ.

ಜಿಲ್ಲೆಯಲ್ಲಿ ಕೊರೋನಾ ವ್ಯಾಪಕವಾಗಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ತನ್ನ ಎಲ್ಲಾ ಸಿಬ್ಬಂದಿ ಕೊರೋನಾ ಟೆಸ್ಟ್ ಮಾಡಿಸುತ್ತಿದೆ. ಮೊದಮೊದಲು ರೋಗಲಕ್ಷಣವಿರುವ ಮತ್ತು 50 ವರ್ಷ ಮೇಲ್ಪಟ್ಟ ವಯಸ್ಸಿನ ಸಿಬ್ಬಂದಿಯ ಪರೀಕ್ಷೆ ನಡೆಸಲಾಗುತ್ತಿತ್ತು. ನಂತರದಲ್ಲಿ ಎಲ್ಲರಿಗೂ ಪರೀಕ್ಷೆ  ಮಾಡಲಾಗುತ್ತಿದೆ. ನಿನ್ನೆಯ ಮಾಹಿತಿ ಪ್ರಕಾರ 155 ಜನ ಕೊರೋನಾ ಟೆಸ್ಟ್ ಗೆ ಒಳಪಟ್ಟಿದ್ದು, ಅದರಲ್ಲಿ 125 ಜನರ ವರದಿ ನೆಗೆಟಿವ್ ಬಂದಿದ್ದು, 30 ಸಿಬ್ಬಂದಿಗೆ ಪಾಸಿಟಿವ್ ಬಂದಿದೆ. ಸದ್ಯ ಸೋಂಕಿತ ಸಿಬ್ಬಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ.

– ಅರುಣ್ ನವಲಿ  ಬಳ್ಳಾರಿ

RELATED ARTICLES

Related Articles

TRENDING ARTICLES