Thursday, December 19, 2024

ಕೊಹ್ಲಿ, ತಮನ್ನಾ ಬಂಧಿಸುವಂತೆ  ಮದ್ರಾಸ್ ಹೈಕೋರ್ಟ್​ಗೆ ಅರ್ಜಿ

ನವದೆಹಲಿ : ಆನ್​​ಲೈನ್​ ಜೂಜಾಟವನ್ನು ಉತ್ತೇಜಿಸುತ್ತಿದ್ದಾರೆ ಅಂತ ಆರೋಪಿಸಿ ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಹಾಗೂ ನಟಿ ತಮನ್ನಾ ಭಾಟಿಯಾ ಅವರನ್ನು ಬಂಧಿಸುವಂತೆ ವಕೀಲರೊಬ್ಬರು ಮದ್ರಾಸ್ ಹೈಕೋರ್ಟ್​​ಗೆ ಅರ್ಜಿ ಸಲ್ಲಿಸಿದ್ದಾರೆ.

ಆನ್​ಲೈನ್ ಜೂಜಾಟಕ್ಕೆ ಬಳಸಿದ ಹಣವನ್ನು ವಾಪಸ್ಸು ನೀಡಲಾಗದೆ ಇತ್ತೀಚೆಗೆ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಯನ್ನು ಉಲ್ಲೇಖಿಸಿ ಅರ್ಜಿದಾರ ವಕೀಲ ಕೊಹ್ಲಿ, ತಮನ್ನಾ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.

ಕೊಹ್ಲಿ ಮತ್ತು ತಮನ್ನಾ ಆನ್​ಲೈನ್ ಜೂಜಾಟಕ್ಕೆ ಯುವಕರನ್ನು ಉತ್ತೇಜಿಸ್ತಿದ್ದಾರೆ. ಇದು ಯುವಕರ ಮೇಲೆ ಕೆಟ್ಟ ಪರಿಣಾಮ ಬೀರುತ್ತೆ ಅಂತ ವಕೀಲರು ದೂರಿನಲ್ಲಿ ತಿಳಿಸಿದ್ದಾರೆ. ಆಗಸ್ಟ್ 4ರಂದು ಮದ್ರಾಸ್ ಹೈಕೋರ್ಟ್ ಈ ಅರ್ಜಿಯ ವಿಚಾರಣೆ ಕೈಗೆತ್ತಿಕೊಳ್ಳಲಿದೆ.

RELATED ARTICLES

Related Articles

TRENDING ARTICLES