Friday, December 20, 2024

ಬೋರಿಂಗ್ ಆಸ್ಪತ್ರೆಯ ನರ್ಸಿಂಗ್ ಆಫೀಸರ್​ಗಳಿಂದ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ

ಬೆಂಗಳೂರು: ಯಾವುದೇ ಭೇದ-ಭಾವವಿಲ್ಲದೆ ನಿಸ್ವಾರ್ಥ ಸೇವೆ ಸಲ್ಲಿಸುವವರು ಸ್ಟಾಫ್ ನರ್ಸ್ ಗಳು .. ಆದರೆ ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಸಿಬ್ಬಂದಿ ನಡುವೆ ತಾರತಮ್ಯ ಮಾಡಲಾಗ್ತಿದೆ. ಇದನ್ನು ಖಂಡಿಸಿ ಇಂದು ಬೋರಿಂಗ್ ಮೆಡಿಕಲ್ ಕಾಲೇಜು ಸ್ಟಾಫ್ ನರ್ಸ್​​ಗಳು ಅನಿರ್ದಿಷ್ಟಾವದಿ ಪ್ರತಿಭಟನೆಗಿಳಿದಿದ್ದಾರೆ.ಈ ಪ್ರತಿಭಟನೆಯಲ್ಲಿ 70 ಕ್ಕೂ ಹೆಚ್ಚು ನರ್ಸಿಂಗ್ ಸ್ಟಾಫ್ ಭಾಗಿಯಾಗಿದ್ದಾರೆ.

ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ, ಖಾಯಂ ಶುಶ್ರೂಷಕರ ಸಂಘದಿಂದ ಪ್ರತಿಭಟನೆ ನಡೆಸಲಾಗುತ್ತದೆ.

ನರ್ಸಿಂಗ್ ಆಫೀಸರ್ಸ್ ಬೇಡಿಕೆಗಳೇನು?

ಆರೋಗ್ಯ ಇಲಾಖೆಯ‌ ಸ್ಟಾಫ್ ನರ್ಸ್​​ಗಳಿಗೆ ಸಿಗುವ ಸೌಲಭ್ಯ ವೈದ್ಯಕೀಯ ಶಿಕ್ಷಣ ಇಲಾಖೆಯ ಸ್ಟಾಫ್ ನರ್ಸ್​​ಗಳಿಗೂ ಸಿಗಬೇಕು.

ನೂತನ‌ ಪಿಂಚಣಿ ಯೋಜನೆ ಅನುಷ್ಠಾನಗೊಳಿಸಬೇಕು.

ಜ್ಯೋತಿ ಸಂಜೀವಿನಿ ಯೋಜನೆಯ ಸೌಲಭ್ಯ ವೈದ್ಯಕೀಯ ‌ಶಿಕ್ಷಣ ಇಲಾಖೆ ಸ್ಟಾಫ್ ನರ್ಸ್​​​ಗಳಿಗೂ ದೊರಕಬೇಕು.

ಸ್ಟಾಫ್ ನರ್ಸ್​​ಗಳಿಗೆ ಪ್ರೋತ್ಸಾಹ ಧನ, ವಿಶೇಷ ಭತ್ಯೆ ನೀಡಬೇಕು

ಮೂಲ ವೇತನದ ಶೇ. 50ರಷ್ಟು ಹೆಚ್ಚುವರಿ ವೇತನ ಮಾಡಬೇಕು ..

ಈಗಾಗಲೇ ಈ ಬೇಡಿಕೆಗಳನ್ನು ಈಡೇರಿಸುವಂತೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಹಾಗೂ ಸಿಎಂ ಬಿ.ಎಸ್​ ಯಡಿಯೂರಪ್ಪ ಅವರಿಗೂ ಕೂಡ ಮನವಿ ಪತ್ರ ಸಲ್ಲಿಸಲಾಗಿದೆ. ಆದ್ರೆ ಯಾವುದೇ ಪ್ರಯೋಜನವಾಗಿಲ್ಲ ಅಂತ ಪ್ರತಿಭಟನೆಗಿಳಿದಿದ್ದಾರೆ. 

RELATED ARTICLES

Related Articles

TRENDING ARTICLES