Thursday, January 23, 2025

ಕೊರೋನಾ ಗೆದ್ದ ಕಾಮೇಗೌಡ; ಇಂದು ಕೊವಿಡ್ ಆಸ್ಪತ್ರೆಯಿಂದ ಬಿಡುಗಡೆ ಸಾಧ್ಯತೆ

ಮಂಡ್ಯ: ಕಳೆದ ವಾರವಷ್ಟೇ ಆಧುನಿಕ ಭಗೀರಥ ಕೆರೆ ಕಾಮೇಗೌಡರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿತ್ತು.
ಈ ಹಿನ್ನೆಲೆಯಲ್ಲಿ ಕೆರೆ ಕಾಮೇಗೌಡರನ್ನ ಮಂಡ್ಯದ ಕೊವಿಡ್ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿತ್ತು.
ಇದೀಗ ಕೆರೆ ಕಾಮೇಗೌಡರ ಕೊವಿಡ್ ಟೆಸ್ಟ್ ರಿಪೋರ್ಟ್ ನೆಗೆಟಿವ್ ಬಂದಿದೆ. ಕೊರೋನಾ ಗೆದ್ದ ಕಾಮೇಗೌಡರನ್ನ ಕೊವಿಡ್ ಆಸ್ಪತ್ರೆಯಿಂದ ಇಂದು ಡಿಸ್ಚಾರ್ಜ್ ಮಾಡುವ ಸಾಧ್ಯತೆ ಇದ್ದು, ಅದಕ್ಕಾಗಿ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗ್ತಿದೆ.ಇತ್ತೀಚೆಗೆ ಕೆರೆ ಕಾಮೇಗೌಡರು ಅನಾರೋಗ್ಯ ಪೀಡಿತರಾಗಿದ್ರು. ತನ್ನ ಬಲಗಾಲು ನೋವು ಉಲ್ಬಣಿಸಿದ್ದ ಕಾರಣ ಮಳವಳ್ಳಿ ಮತ್ತು ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಕೂಡ ಪಡೆದಿದ್ದರು.
ಕಾಲು ನೋವಿನ ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ಓಡಾಟ ನಡೆಸಿದ್ದ ಪರಿಣಾಮ ಕಾಮೇಗೌಡರಿಗೆ ಕೊರೋನಾ ಸೋಂಕು ತಗುಲಿತ್ತು.
ಪ್ರಧಾನಿ ಮೋದಿಯಿಂದ ಪ್ರಶಂಸೆಗೆ ಪಾತ್ರವಾಗಿದ್ದ ಕಾಮೇಗೌಡರಿಗೆ ಮಂಡ್ಯ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಹೆಚ್ಚಿನ ನಿಗಾವಹಿಸಿ, ಚಿಕಿತ್ಸೆ ನೀಡುತ್ತಿದ್ದರು. ಇದೀಗ ಕಾಮೇಗೌಡರ ಕೊವಿಡ್ ಟೆಸ್ಟ್ ರಿಪೋರ್ಟ್ ನೆಗೆಟಿವ್ ಬಂದಿದೆ. ಹೀಗಾಗಿ ಅವರನ್ನ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿ, ಕಾಮೇಗೌಡರ ಕಾಲಿನ ಗಾಯಕ್ಕೆ ಮನೆಯಲ್ಲಿಯೇ ಚಿಕಿತ್ಸೆ ಕೊಡಿಸಲು ವೈದ್ಯರು ಸೂಚನೆ ನೀಡಿದ್ದಾರೆ.

ಡಿ.ಶಶಿಕುಮಾರ್, ಮಂಡ್ಯ

RELATED ARTICLES

Related Articles

TRENDING ARTICLES