Monday, December 23, 2024

ಪಿಪಿಇ ಕಿಟ್ ಧರಿಸಿ‌ ಅಂತ್ಯಸಂಸ್ಕಾರ ನೆರವೇರಿಸಿದ ಯುವಕರು

ಹಾಸನ : ಕೊರೋನಾ ಸೋಂಕಿತ ಮಸ್ಲಿಂ ಮಹಿಳೆಯ ಅಂತ್ಯಸಂಸ್ಕಾರ ಮಾಡಿ ಯುವಕರ ತಂಡವೊಂದು ಮಾನವೀಯತೆ ಮೆರೆದಿದೆ. 

ಜಿಲ್ಲೆಯ ಹೊಳೆನರಸೀಪುರದ ಮಹಿಳೆಯೊಬ್ಬರು ಕೊರೋನಾದಿಂದ ಮೃತಪಟ್ಟಿದ್ದು, ಹೊಳೆನರಸೀಪುರದ ದೊಡ್ಡ ಮಸೀದಿ ಬೀದಿ ಯುವಕರು ಪಿಪಿಇ ಕಿಟ್ ಧರಿಸಿ, ಸುರಕ್ಷಾಕ್ರಮಗಳನ್ನು ಅನುಸರಿಸಿ ಮುಸ್ಲಿಮರ ಕಬ್ರಸ್ಥಾನ್​ನಲ್ಲಿ ಆಕೆಯ ಅಂತ್ಯಕ್ರಿಯೆ ನೆರವೇರಿಸಿದ್ದಾರೆ. 

ಸರ್ಕಾರದ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡು ಮುಸ್ಲಿಂ ಸಂಪ್ರದಾಯದಂತೆ ಕಾರ್ಯ ನೆರವೇರಿಸಿ ಇತರರಿಗೆ ಮಾದರಿಯಾಗಿದ್ದಾರೆ. ಹಲವು ಕಡೆಗಳಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿ ಕೊರೋನಾ ಸೋಂಕಿತರ ಅಂತ್ಯಸಂಸ್ಕಾರ ವಿಚಾರದಲ್ಲಿ ಅಮಾನವೀಯತೆಯಿಂದ ನಡೆದುಕೊಂಡಿದ್ದನ್ನು ನೋಡಿದ್ದೀವಿ. ಹೀಗಿರುವಾಗ ಈ ಯುವಕರ ಅಂತ್ಯಸಂಸ್ಕಾರ ನಡೆಸಿರುವುದು ನಿಜಕ್ಕೂ ಮಾದರಿಯಾಗಿದೆ. 

RELATED ARTICLES

Related Articles

TRENDING ARTICLES