Sunday, January 19, 2025

Power Exclusive : ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೊಸ ಸಿನಿಮಾಗೆ ಚಾಲನೆ

ಬೆಂಗಳೂರು : ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹೊಸ ಸಿನಿಮಾಗೆ ಇಂದು ಚಾಲನೆ ಸಿಕ್ಕಿದೆ. ದರ್ಶನ್ ಅಭಿನಯದ ಮತ್ತೊಂದು ಐತಿಹಾಸಿಕ ಸಿನಿಮಾ ಇದಾಗಿದ್ದು, ತರುಣ್ ಸುಧೀರ್ ಆ್ಯಕ್ಷನ್ ಕಟ್ ಹೇಳಲಿದ್ದಾರೆ.

ಹೌದು, ದರ್ಶನ್ ಅಭಿನಯದ ಸಿಂಧೂರ ಲಕ್ಷ್ಮಣ ಸಿನಿಮಾದ ಸ್ಕ್ರಿಪ್ಟ್ ಪೂಜೆ ಇಂದು ನೆರವೇರಿದೆ. ಆ ಮೂಲಕ ಅಧಿಕೃತವಾಗಿ ಸಿನಿಮಾ ಘೋಷಣೆಯಾಗಿದೆ.

ಇನ್ನು ಈ ಹಿಂದೆ ಸಿಂಧೂರ ಲಕ್ಷ್ಮಣ ನಾಟಕದಲ್ಲಿ ಸುಧೀರ್ ಸಿಂಧೂರ ಲಕ್ಷ್ಮಣನಾಗಿ ಮಿಂಚಿದ್ದರು. ಈ ಪಾತ್ರ ಅವರಿಗೆ ಬಹುದೊಡ್ಡ ಹೆಸರನ್ನು ತಂದುಕೊಟ್ಟಿತ್ತು. 1977  ಈ ನಾಟಕ ಸಿನಿಮಾ ಕೂಡ ಆಗಿತ್ತು. ಆ ಸಿನಿಮಾದಲ್ಲಿಯೂ ಸುಧೀರ್ ಅವರೇ ಸಿಂಧೂರ ಲಕ್ಷ್ಮಣನ ಪಾತ್ರದಲ್ಲಿ ಅಭಿನಯಿಸಿದ್ದರು. 

ಇದೀಗ ಅವರ ಪುತ್ರ ತರುಣ್ ಸುಧೀರ್ ತಂದೆಗೆ ಹೆಸ್ರು ಕೊಟ್ಟ ಪಾತ್ರಕ್ಕೆ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ. ನಾಟಕದಲ್ಲಿ ಸುಧೀರ್ ಸದ್ದು ಮಾಡಿದ್ದರು. ಸಿನಿಮಾದಲ್ಲಿ ದರ್ಶನ್ ಅಬ್ಬರಿಸಲಿದ್ದಾರೆ. 

 

RELATED ARTICLES

Related Articles

TRENDING ARTICLES