ದಾವಣಗೆರೆ : ಕೊರೊನಾ ಹೆಮ್ಮಾರಿ ವಿಶ್ವದಾದ್ಯಂತ ವ್ಯಾಪಿಸಿದೆ.. ಈ ಹಿನ್ನಲೆ ಎಲ್ಲೆಡೆ ಚಿಕಿತ್ಸೆ ನಡೆಯುತ್ತಿದ್ದು, ಅದರಲ್ಲಿ ಸುರಕ್ಷಾ ಸಾಧನ ಪಿಪಿಇ ಕಿಟ್ ಬಳಸಿದ ಬಳಿಕ ರವಾನೆಯೇ ದೊಡ್ಡ ಸಮಸ್ಯೆ ಆಗಿದೆ, ಎಲ್ಲೆಂದರಲ್ಲಿ ಬಿಸಾಡುವುದು, ಅರೆ ಬರೆ ಸುಟ್ಟಿರುವ ದೃಶ್ಯ ಕಾಣಸಿಗುತ್ತಿವೆ.. ಹೀಗಾಗಿಯೇ ಬೆಣ್ಣೆ ನಗರಿ ದಾವಣಗೆರೆಯಲ್ಲಿ ಪಿಪಿಇ ಕಿಟ್ ಮರುಬಳಕೆಗೆ ಪರಿಸರ ಸ್ನೇಹಿ ದೇಸಿ ಯಂತ್ರ ಸಿದ್ದವಾಗಿ ನಿಂತಿದೆ..
ಹೌದು.. ಕೊರೊನಾ ಮಹಾಮಾರಿ ಎಲ್ಲೆಡೆ ಆವರಿಸಿ ಆತಂಕ ಸೃಷ್ಟಿಸಿದೆ.. ಎಲ್ಲಾ ಆಸ್ಪತ್ರೆಗಳಲ್ಲೂ ಕೊರೊನಾ ಸೋಂಕಿತರೇ ತುಂಬಿದ್ದಾರೆ.. ಅಷ್ಟೆ ಅಲ್ಲದೇ ಕೊರೊನಾ ವಾರಿಯರ್ಸ್ ಗಳಾದ ವೈದ್ಯರು, ವೈದ್ಯ ಸಿಬ್ಬಂದಿಗಳಿಗೂ ಕೂಡ ಸೋಂಕು ಹರಡುತ್ತಿದೆ.. ಪಿಪಿಇ ಕಿಟ್ ಸರಿಯಾದ ವಿಲೇವಾರಿ ಇಲ್ಲದಿರುವುದು ದೊಡ್ಡ ಸಮಸ್ಯೆಯಾಗಿ ಉಲ್ಬಣಿಸಿದೆ.. ಎಲ್ಲೆಂದರಲ್ಲಿ ಪಿಪಿಇ ಕಿಟ್ ಗಳು ಸಿಗುತ್ತಿವೆ, ಜೊತೆಗೆ ಅರೆಬರೆ ಸುಟ್ಟಿರುವ ದೃಶ್ಯಗಳು ಸಾಮಾನ್ಯವಾಗಿವೆ.. ಸರಿಯಾದ ವಿಲೇವಾರಿ ಆಗದಿರುವುದು ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ.. ಈ ಹಿನ್ನಲೆ ದಾವಣಗೆರೆಯ ಈಶ್ವರ್ ರೇಡಿಯೊ ಅಂಗಡಿ ಎಪಿ ದಿವಾಕರ್ ಅವರು ಪಿಪಿಇ ಸುಡಲು ದೇಸಿ ಯಂತ್ರ ಸಿದ್ದಪಡಿಸಿದ್ದಾರೆ.. ವೈದ್ಯಕೀಯ ತ್ಯಾಜ್ಯ ಸುಡಲು ಪರಿಸರ ಸ್ನೇಹಿ ಇನ್ಸಿನೇರೇಟರ್ ಯಂತ್ರ ಅಭಿವೃದ್ದಿಪಡಿಸಲಾಗಿದೆ. ಈ ಯಂತ್ರದಿಂದ ಪಿಪಿಇ ಕಿಟ್ ಸುಲಭವಾಗಿ ಸುಡಬಹುದಾಗಿದೆ..
ಇನ್ನೂ ಈ ಯಂತ್ರದಲ್ಲಿ ಪಿಪಿಇ ಕಿಟ್, ಗ್ಲೌಸ್, ಮಾಸ್ಕ್ ವೈದ್ಯಕೀಯ ತ್ಯಾಜ್ಯ ಸುಡಬಹುದಾಗಿದೆ.. ಮರುಬಳಕೆಯೂ ಮಾಡಬಹುದಾಗಿದೆ, ಕಾರ್ಬನ್ ಮಾನಾಕ್ಸೈಡ್ ಪ್ರಮಾಣ ಕಡಿಮೆ ಉಪಯೋಗಿಸುವ ವಿದ್ಯುತ್ ಯಂತ್ರ ಇದಾಗಿದ್ದು, ಅತೀ ಕಡಿಮೆ ಹೊಗೆ ಉಗುಳುವ ಪರಿಸರ ಸ್ನೇಹಿ ಯಂತ್ರದಿಂದ ಪಿಪಿಇ ಕಿಟ್ ವಿಲೇವಾರಿ ಸಮಸ್ಯೆಯಿಂದ ಮುಕ್ತಿ ಸಿಗುತ್ತದೆ. ಈ ಹಿನ್ನಲೆ ಸರ್ಕಾರ ಯಂತ್ರ ಪರಿಶೀಲಿಸಿದ ಬಳಿಕ ಅನುಮತಿ ನೀಡಿ ಆಸ್ಪತ್ರೆಗಳಲ್ಲಿ ಬಳಸಲು ಆದೇಶ ನೀಡಬೇಕಿದೆ ಅಂತ ಸ್ಥಳೀಯರಾದ ವಾಣಿ ನಾಗಭೂಷಣ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ..
ಒಟ್ಟಾರೆ ಈ ಸಂಕಷ್ಟದ ಕಾಲದಲ್ಲಿ ವೈದ್ಯಕೀಯ ತ್ಯಾಜ್ಯ ವಿಲೇವಾರಿಯೇ ದೊಡ್ಡ ಸಮಸ್ಯೆಯಾಗುತ್ತಿದೆ.. ಇದರಿಂದ ವೈರಸ್ ಹರಡುವ ಸಾಧ್ಯತೆಯೂ ಇರುವುದರಿಂದ ಇಂತಹ ಯಂತ್ರಗಳನ್ನು ಕೋವಿಡ್ ಆಸ್ಪತ್ರೆಗಳಲ್ಲಿ ಬಳಸುವ ಮೂಲಕ ಸರ್ಕಾರ ಸುರಕ್ಷತೆಗೆ ಆದ್ಯತೆ ನೀಡಬೇಕಿದೆ.