Friday, November 22, 2024

ಆ್ಯಂಟಿಜೆನ್ ಟೆಸ್ಟ್​ ಗೆ ವ್ಯಾಪಾರಸ್ಥರ ವಿರೋಧ, ಪಾಲಿಕೆ ಸಿಬ್ಬಂದಿ ಜೊತೆ ಮಾತಿನ ಚಕಮಕಿ

ಹುಬ್ಬಳ್ಳಿ: ಕೊರೋನಾ‌ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಧಾರವಾಡ ಜಿಲ್ಲಾಡಳಿತ ಜನನಿಬಿಡ ಪ್ರದೇಶದಲ್ಲಿ ಕೋವಿಡ್-19 ತಪಾಸಣೆಗಾಗಿ Rapid ಆ್ಯಂಟಿಜೆನ್ ತಪಾಸಣೆ ಕೈಗೊಂಡಿದ್ದು,ಹುಬ್ಬಳ್ಳಿಯ ದುರ್ಗದಬೈಲ್ ನಲ್ಲಿ ವ್ಯಾಪಾರಸ್ಥರು ಭಯದಿಂದ ತಮ್ಮ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡುವ ಮೂಲಕ ತಪಾಸಣೆಗೆ ಅಸಮಾಧಾನ ವ್ಯಕ್ತಪಡಿಸಿದರು.

ಅವಳಿನಗರದಲ್ಲಿ ನಿನ್ನೆಯಿಂದ ಪ್ರಾರಂಭಗೊಂಡ ಆ್ಯಂಟಿಜೆನ್ ತಪಾಸಣೆಗೆ ಮೊದಲ ದಿನ ಸ್ಪಂದನೆ ಉತ್ತಮವಾಗಿತ್ತು.ಅಲ್ಲದೇ ಕೆಲವು ಕಡೆಗಳಲ್ಲಿ ವ್ಯಾಪಾರಸ್ಥರು ಅಂಗಡಿ ಬಾಗಿಲು ಹಾಕಿದ್ದರು..ಅದೇ ರೀತಿ ಇಂದು ಕೂಡ ವ್ಯಾಪಾರಸ್ಥರು ಆ್ಯಂಟಿಜನ್ ತಪಾಸಣೆಗೆ ವಿರೋಧ ವ್ಯಕ್ತಪಡಿಸಿ ಅಂಗಡಿ ಬಾಗಿಲನ್ನು ಮುಚ್ಚಿದರು.ಮಹಾನಗರ ಪಾಲಿಕೆ ಅಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿಗಳು ಮನವೊಲಿಸಲು ಮುಂದಾದ ಸಂದರ್ಭದಲ್ಲಿ ವ್ಯಾಪಾರಸ್ಥರ ಹಾಗೂ ಪೊಲೀಸರ ಮಧ್ಯೆ ಮಾತಿನ ಚಕಮಕಿ ಏರ್ಪಟ್ಟಿತು.

ಅಂಗಡಿ ಬಾಗಿಲನ್ನು ಮುಚ್ಚಿ ರಸ್ತೆಗೆ ಇಳಿದ ವ್ಯಾಪಾರಸ್ಥರು ಸಾಮಾಜಿಕ ಅಂತರವನ್ನು ಮರೆತು ಗುಂಪು ಗುಂಪಾಗಿ ನಿಂತುಕೊಂಡು ವಿರೋಧ ವ್ಯಕ್ತಪಡಿಸಿದರು.ಪರಿಸ್ಥಿತಿಯನ್ನು ತಿಳಿಗೊಳಿಸಲು ಪೊಲೀಸ್ ಸಿಬ್ಬಂದಿಗಳು ಹರಸಾಹಸ ಪಟ್ಟರು.

RELATED ARTICLES

Related Articles

TRENDING ARTICLES