Sunday, January 19, 2025

IPL 2020 ಫೈನಲ್ ಮುಂದೂಡಿಕೆ ..?

ಇಂಡಿಯನ್ ಪ್ರೀಮಿಯರ್ ಲೀಗ್  (IPL) 13ನೇ ಆವೃತ್ತಿ ಅಂತೂ ಇಂತೂ ನಡೆಯೋದು ಪಕ್ಕಾ ಆಗಿದೆ. ಮಾರ್ಚ್​ 29ರಿಂದಲೇ ಆರಂಭವಾಗಬೇಕಿದ್ದ ಟೂರ್ನಿಗೆ ಕೊರೋನಾ ಅಡ್ಡಿಪಡಿಸಿತ್ತು. ಇದೀಗ ಯುಎಇನಲ್ಲಿ  ಈ ಬಾರಿ ಟೂರ್ನಿ ನಡೆಯಲಿದೆ.  ಸದ್ಯದ ಮಾಹಿತಿ ಪ್ರಕಾರ ಸೆಪ್ಟೆಂಬರ್ 19 ರಿಂದ ನವೆಂಬರ್ 8ರವರೆಗೆ ಟೂರ್ನಿ ನಡೆಯುತ್ತೆ. ಅಂದ್ರೆ ಉದ್ಘಾಟನಾ ಪಂದ್ಯ ಸೆಪ್ಟೆಂಬರ್ 19ಕ್ಕೆ ನಡೆದ್ರೆ, ಫೈನಲ್ ಮ್ಯಾಚ್​​ ನವೆಂಬರ್ 8ರಂದು ನಡೆಯಲಿದೆ.

ಆದ್ರೆ ದೀಪಾವಳಿ ಹಬ್ಬದ ವಾರವನ್ನು ಬಳಸಿಕೊಂಡು ಐಪಿಎಲ್ ಫೈನಲ್​ನ ಕಾತುರತೆಯನ್ನು ಇನ್ನೂ ಎರಡ್ಮೂರು ದಿವಸ ಕಾಯ್ದರಿಸಿಕೊಳ್ಳುವ ಪ್ಲಾನ್ ಪ್ರಸಾರಕರದ್ದಾಗಿದೆ ಎನ್ನಲಾಗಿದೆ.  IPL ಫೈನಲ್ ಮುಂದೂಡಲ್ಪಟ್ಟಿದ್ದೇ ಆದಲ್ಲಿ, ಟೀಮ್ ಇಂಡಿಯಾ ಭಾರತಕ್ಕೆ ಬಂದು ಆಸ್ಟ್ರೇಲಿಯಾಕ್ಕೆ ಹೋಗೋ ಬದಲು, ಯುಎಇಯಿಂದಲೇ ಆಸೀಸ್​ ಪ್ರವಾಸ ಕೈಗೊಳ್ಳಲಿದೆ. ಅಕ್ಟೋಬರ್ 11ರಿಂದ ಭಾರತ ಮತ್ತು ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿ ಆರಂಭವಾಗಲಿದೆ.  IPL ಬಗ್ಗೆ ಶೀಘ್ರದಲ್ಲೇ ನಡೆಯಲಿರೋ ಗರ್ವನಿಂಗ್ ಕೌನ್ಸಿಲ್ ಸಭೆಯಲ್ಲಿ ಅಂತಿಮ ನಿರ್ಧಾರ ಪ್ರಕಟವಾಗಲಿದೆ.

RELATED ARTICLES

Related Articles

TRENDING ARTICLES