Saturday, January 18, 2025

ಬಿಜೆಪಿ ಸೇರೋಕೆ ಒಂದು ರೂಪಾಯಿ ಕೂಡ ಪಡೆದಿಲ್ಲ – ಸಚಿವ ಶ್ರೀಮಂತ ಪಾಟೀಲ್

ಬಾಗಲಕೋಟೆ : ಆಪರೇಷನ್ ಕಮಲ ಎಂದರೇನು ಅಂತ ನನಗೆ ಗೊತ್ತಿಲ್ಲಾ. ನಾನು ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಬಂದಿದ್ದೇನೆ. ಇದಕ್ಕೆ ನೀವೂ ಆಪರೇಷನ್ ಕಮಲ, ದುಡ್ಡು ತಗಂಡ್ರು ಎನ್ನುವುದಾದರೇ ನನ್ನ ಮಗನ ಮೇಲೆ ಪ್ರಮಾಣ ಮಾಡಿ ಹೇಳ್ತೇನೆ ನಾನು ಒಂದೇ ಒಂದು ರೂಪಾಯಿ ಕೂಡ ತೆಗೆದುಕೊಂಡಿಲ್ಲ ಎಂದು ಅಲ್ಪಸಂಖ್ಯಾತ, ಜವಳಿ, ಕೈಮಗ್ಗ ಇಲಾಖೆ ಸಚಿವ ಶ್ರೀಮಂತ ಪಾಟೀಲ್ ಹೇಳಿದ್ದಾರೆ. ಇಂದು ಬಾಗಲಕೋಟೆ ಜಿಲ್ಲಾಡಳಿತ ಭವನದಲ್ಲಿ ಮಾತನಾಡಿದ ಸಚಿವ ಶ್ರೀಮಂತ ಪಾಟೀಲ್​​​, ಆಪರೇಷನ್​ ಕಮಲ ಅಂದ್ರೇನು? ಇದಕ್ಕೆ ಎಷ್ಟು ದುಡ್ಡು ಖರ್ಚು ಮಾಡಿದ್ರು ನನಗೆ ಗೊತ್ತೇ ಇಲ್ಲ. ಹೀಗೆ ನನ್ನ ಬಗ್ಗೆ ಏನೋ ಹೇಳಿದ್ರೆ ನಾನೇನು ಮಾಡಲಿಕ್ಕೆ ಆಗೋದಿಲ್ಲ ಎಂದರು.

ಇನ್ನು ಮೆಡಿಕಲ್ ಕಿಟ್ ಖರೀದಿಯಲ್ಲಿ ಹಗರಣ ಆಗಿದೆ ಎನ್ನುವುದು ರಾಜಕಾರಣಿಗಳಿಗೆ ಹೇಗೆ ಗೊತ್ತಾಗುತ್ತದೆ. ಟೆಕ್ನಿಕಲ್ ವಸ್ತುಗಳಿರುತ್ತವೆ. ಈ ವೈರಸ್ ಬೇರೆ ಹೊಸದು. ಮೆಡಿಕಲ್ ಕಿಟ್​​ ಖರೀದಿ ಬಗ್ಗೆ ಎಕ್ಸ್​​ಪರ್ಟ್ಸ್​ ಹೇಳಬೇಕು. ಇಲ್ಲಿ ಯಾವುದೇ ಮೆಡಿಕಲ್​​ ಕಿಟ್​ ಹಗರಣ ನಡೆದಿಲ್ಲ ಎಂದ ಶ್ರೀಮಂತ ಪಾಟೀಲ್​, ಅಲ್ದೆ ಪಠ್ಯದಿಂದ ಟಿಪ್ಪು ಸುಲ್ತಾನ್​​​ ವಿಚಾರ ಕೈಬಿಟ್ಟಿದ್ದಕ್ಕೆ ಕಾಂಗ್ರೆಸ್​ ವಿರೋಧ ವ್ಯಕ್ತಪಡಿಸುತ್ತಿದೆ ಯಾಕೇ? ಎಂಬ ಮಾಧ್ಯಮದವರ ಪ್ರಶ್ನೆಗೆ ಪಾಟೀಲ್​ ಉತ್ತರಿಸಿದರು. ಸಿಎಂ ಜತೆಗೆ ನಾನು ಚರ್ಚೆ ಮಾಡುತ್ತೇನೆ. ನಮ್ಮ ಪಕ್ಷದಲ್ಲಿ ಜಾತಿ, ಧರ್ಮ ಬೇಧ ಮಾಡುವುದಿಲ್ಲ. ನಮ್ಮಲ್ಲಿ ಆ ರೀತಿ ಏನು ಇಲ್ಲ. ಇದು ಸೆನ್ಸಿಟಿವ್ ಆಗಿರೋದ್ರಿಂದ ಸಿಎಂ ಜೊತೆಗೆ ಮಾತನಾಡುತ್ತೇನೆ ಎಂದರು‌. ಲಕ್ಷ್ಮಣ್ ಸವದಿ ಸಿಎಂ ಆಗುವಷ್ಟು ಪ್ರಬಲರೇ ಎನ್ನುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಶ್ರೀಮಂತ ಪಾಟೀಲ್​​, ರಾಜಕೀಯದಲ್ಲಿ ಯಾರು ಪ್ರಬಲರೋ ಅವರಿಗೆ ಸಿಎಂ ಪಟ್ಟ ಸಿಗುತ್ತೇ. ಸಿಎಂ ಆಗುವ ಕ್ರೈಟಿರಿಯಾ ಏನು ಅನ್ನೋದು ನನಗೆ ಗೊತ್ತಿಲ್ಲಾ. ನಾನು ಇನ್ನೂ ಆ ಲೇವಲ್​​ಗೆ ಬೆಳೆದಿಲ್ಲ.

RELATED ARTICLES

Related Articles

TRENDING ARTICLES