ಚಿತ್ರದುರ್ಗ : ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ಪೋಲಿಸರನ್ನು ಕೊರೊನಾ ಮಹಾಮಾರಿ ಬಿಟ್ಟು ಬಿಡದೆ ಕಾಡುತ್ತಿದೆ. ಇಂದು ಕೂಡ ಚಿತ್ರದುರ್ಗ ನಗರದ DAR ಕ್ವಾಟ್ರಸ್ ನಲ್ಲಿ ವಾಸವಿದ್ದ ಪೇದೆಯ ಕುಟುಂಬ ನಾಲ್ವರಿಗೆ ಕೊರೊನಾ ಸೋಂಕು ತಗುಲಿದೆ. ಕಳೆದೆರಡು ದಿನದ ಹಿಂದೆ ವೈಯರ್ಲೆಸ್ ಪಿಎಸ್ ಐ ಗೆ ಸೋಂಕು ದೃಢಪಟ್ಟಿತ್ತು. ಆತನ ಸಂಪರ್ಕ ಹೊಂದಿದ್ದ ಪೇದೆಯ 110 ವರ್ಷದ ಅಜ್ಜಿ 07 ತಿಂಗಳ ಅಣ್ಣನ ಮಗು, ಅತ್ತಿಗೆ ಮತ್ತು ತಾಯಿಗೆ ಸೋಂಕು ಧೃಡಪಟ್ಟಿದೆ. ಹೀಗಾಗಿ ಒಂದು ವಾರದ ಹಿಂದೆ ಡಿಎಆರ್ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಬಂದಿದ್ದ ಹಿನ್ನೆಲೆಯಲ್ಲಿ ಸೀಲ್ ಡೌನ್ ಆಗಿದ್ದ ಡಿಎಆರ್ ಕ್ವಾಟ್ರಸ್ ನಲ್ಲಿ ಸೀಲ್ ಡೌನ್ ಮುಂದುವರೆಸಲಾಗಿದ್ದು, ಚಿತ್ರದುರ್ಗದ ಕೋಟೆ ಠಾಣೆಯಲ್ಲಿ ಕೂಡ ಓರ್ವ ಪೊಲೀಸ್ ಪೇದೆಗೆ ಕೊರೊನಾ ಧೃಡಪಟ್ಟಿದ್ದು, ಮೊಳಕಾಲ್ಮೂರು ಠಾಣೆಯ ಇಬ್ವರು ಪೊಲೀಸರಿಗೂ ಸೋಂಕು ದೃಢಪಟ್ಟಿದೆ. ಒಟ್ಟಾರೆ ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು 564 ಕ್ಕೆ ಎರಿದ್ದು, ಇಂದು ಮತ್ತಷ್ಟು ಪಾಸಿಟಿವ್ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆ ಇದೆ. ಇದುವರೆಗೆ ಕೋರೋನಾ ಮಹಾಮಾರಿ 10 ಜನರನ್ನು ಬಲಿ ಪಡದಿದೆ. 151 ಜನರು ಗುಣಮುಖರಾಗಿದ್ದಾರೆ. 303 ಕೊರೊನಾ ಆಕ್ಟೀವ್ ಪ್ರಕರಣಗಳಿರುವ ಹಿನ್ನೆಲೆಯಲ್ಲಿ 132 ಕಂಟೋನ್ನೆಂಟ್ ಝೋನ್ ಗಳನ್ನು ನಿರ್ಮಾಣ ಮಾಡಲಾಗಿದೆ.