ಬೆಂಗಳೂರು : ಆ ಫ್ಲೈಓವರ್ ನಿರ್ಮಾಣವಾಗಿ ಎರಡು ವರ್ಷವಾಗಿದೆಯಷ್ಟೇ. ಆದ್ರೆ ಅಷ್ಟರಲ್ಲೇ ಸಂಪೂರ್ಣ ಜಖಂ ಆಗಿದೆ. ಜೀವವನ್ನು ಗಟ್ಟಿಯಾಗಿಟ್ಕೊಂಡ್ ಅಲ್ಲಿ ವಾಹನ ಚಲಾಯಿಸ್ಬೇಕು. ಸ್ವಲ್ಪ ಯಡವಟ್ಟಾದ್ರೂ ಜೀವಕ್ಕೇ ಕುತ್ತು.. ಕಮ್ಮಿ ಅಂದ್ರು ಕೈ-ಕಾಲು ಮುರ್ಕೊಂಡು ಆಸ್ಪತ್ರೆಗೆ ಅಡ್ಮಿಟ್ ಆಗೋದ್ರಲ್ಲಿ ಡೌಟಿಲ್ಲ!
ಹೌದು, ಬೆಂಗಳೂರಿನ ಬಿಇಎಲ್ ಸರ್ಕಲ್ ಮತ್ತು ಗೊರಗುಂಟೆ ಪಾಳ್ಯಕ್ಕೆ ಹೋಗುವ ರಿಂಗ್ ರೋಡ್ ದುಸ್ಥಿತಿ ಇದು. ಇಲ್ಲಿ ಫ್ಲೈಓವರ್ ನಿರ್ಮಾಣವಾಗಿ ಎರಡು ವರ್ಷವಾಗಿದೆ ಅಷ್ಟೇ. ಆದ್ರೆ ಈಗ್ಲೇ ಅಲ್ಲಿ ವಾಹನ ಚಲಿಸುವುದು ಬಹಳ ಕಷ್ಟ! ಈ ಮಾರ್ಗದಲ್ಲಿ ದಿನಾಲೂ ಸಾಕಷ್ಟು ವಾಹನ ಓಡಾಟ ಇದ್ದೇ ಇರುತ್ತೆ. ರಸ್ತೆ ಉದ್ದಕ್ಕೂ ಇರುವ ದೊಡ್ಡ ದೊಡ್ಡ ಗುಂಡಿಗಳನ್ನು ತಪ್ಪಿಸಿ ವಾಹನ ಚಲಾಯಿಸುವುದೇ ದೊಡ್ದ ತಲೆನೋವು. ಒಂದು ಹೊಂಡ ತಪ್ಪಿಸಲು ಹೋದ್ರೆ ಇನ್ನೊಂದಕ್ಕೆ ಬೀಳೋ ಸ್ಥಿತಿ! ಹೀಗೆ ಫ್ಲೇಓವರ್ ಸಂಪೂರ್ಣ ಹಾಳಾಗಿದ್ದರೂ, ಈ ಬಗ್ಗೆ ನಾನಾ ಬಾರಿ ಅಧಿಕಾರಿಗಳ ಗಮನಕ್ಕೆ ತರಲಾಗಿದ್ದರೂ ಯಾವ್ದೇ ಸ್ಪಂದನೆ ಸಿಗ್ತಿಲ್ಲ ಅನ್ನೋ ಆರೋಪವಿದೆ. ಒಟ್ನಲ್ಲಿ ಜನ ಮಾತ್ರ ಹೈರಾಣಾಗಿದ್ದು, ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಸರಿಪಡಿಸೋ ಕೆಲಸ ಮಾಡಲಿ.