Sunday, January 19, 2025

ಕೆರೆ ಮಣ್ಣು ಅಕ್ರಮ ಸಾಗಾಟ .., ರೆಡ್ ಹ್ಯಾಂಡಾಗಿ ಹಿಡಿದ ಗ್ರಾಮಸ್ಥರು…, ವಾಹನ ಸೀಜ್ ಮಾಡದೆ ಬಿಟ್ಟ ಗ್ರಾಮಲೆಕ್ಕಾಧಿಕಾರಿ…!

ಸರ್ಕಾರಿ ಕೆರೆಗಳನ್ನ ಸಂರಕ್ಷಿಸುವಂತೆ ಸರ್ಕಾರ ಆಗಾಗ ಆದೇಶಗಳನ್ನ‌ ಹೊರಡಿಸುತ್ತಿದೆ.ಈ ಕುರಿತಂತೆ ಅಧಿಕಾರಿಗಳಿಗೂ ನೀತಿ ಪಾಠ ಹೇಳುತ್ತಿದೆ. ಆದ್ರೆ ನಂಜನಗೂಡಿನ ಕೂಡ್ಲಾಪುರ ಗ್ರಾಮದ ಸರ್ಕಾರಿ ಕೆರೆ ಮಣ್ಣನ್ನ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಟ್ರಾಕ್ಟರ್ ನ್ನ ಗ್ರಾಮಸ್ಥರ ರೆಡ್ ಹ್ಯಾಂಡಾಗಿ ಹಿಡಿದು ಕೊಟ್ಟರೂ ಅಧಿಕಾರಿಗಳು ತಲೆ ಕೆಡಿಸಿಕೊಳ್ಳದೆ ನಿರ್ಲಕ್ಷ್ಯತೆ ವಹಿಸಿ ಕೇವಲ ವಾರ್ನಿಂಗ್ ಕೊಟ್ಟು ಕಳುಹಿಸಿದ್ದಾರೆ.

ಹಾಡುಹಗಲೇ ಕೆರೆ ಮಣ್ಣು ಲೂಟಿಯಾಗುತ್ತಿದ್ದ ಪ್ರಕರಣ ಗ್ರಾಮಸ್ಥರೇ ಬೆಳಕಿಗೆ ತಂದರೂ ಅಧಿಕಾರಿಗಳಿಗೆ ಲೆಕ್ಕಕ್ಕೇ ಇಲ್ಲದಂತಾಗಿದೆ.
ನಂಜನಗೂಡು ತಾಲೂಕಿನ ಕೂಡ್ಲಾಪುರ ಗ್ರಾಮದ ಕೆರೆ ಮಣ್ಣು ಮಾಫಿಯಾಗಳ ಪಾಲಾಗುತ್ತಿದೆ ಎಂದು ಗ್ರಾಮಸ್ಥರು ಅಧಿಕಾರಿಗಳಿಗೆ ಮಾಹಿತಿ ಕೊಟ್ಟಿದ್ದರು.ಈ ಬಗ್ಗೆ ಕ್ರಮ ಕೈಗೊಳ್ಳುವ ಭರವಸೆಯನ್ನ ಅಧಿಕಾರಿಗಳೂ ಸಹ ಕೊಟ್ಟಿದ್ದರು.ಈವತ್ತು ಮಣ್ಣು ಮಾಫಿಯಾದವರು ಜೆ.ಸಿ.ಬಿ ಯಂತ್ರದ ಮೂಲಕ ಬಗೆದು ಟ್ರಾಕ್ಟರ್ ನಲ್ಲಿ ತುಂಬಿಕೊಂಡು ಸಾಗಿಸುತ್ತಿದ್ದಾಗ ಗ್ರಾಮಸ್ಥರು ರೆಡ್ ಹ್ಯಾಂಡಾಗಿ ಹಿಡಿದಿದ್ದಾರೆ. ಇದನ್ನ ಗ್ರಾಮ ಲೆಕ್ಕಾಧಿಕಾರಿ ಗಮನಕ್ಕೆ ತಂದಿದ್ದಾರೆ.
ಸ್ಥಳಕ್ಕೆ ಧಾವಿಸಿದ ಗ್ರಾಮ ಲೆಕ್ಕಾಧಿಕಾರಿ ಮಂಜುನಾಥ್ ಕ್ರಮ ಕೈಗೊಳ್ಳದೆ ಕೇವಲ ವಾರ್ನಿಂಗ್ ಕೊಟ್ಟು ನಿರ್ಲಕ್ಷಿಸಿದ್ದಾರೆ.
ಟ್ರಾಕ್ಟರ್ ಹಾಗೂ ಜೆಸಿಬಿ ಸೀಜ್ ಮಾಡದೆ ವಾರ್ನಿಂಗ್ ಕೊಟ್ಟು ಕಳುಹಿಸಿದ್ದಾರೆ.
ಮಣ್ಣು‌ ಮಾಫಿಯಾ ಜೊತೆ ಗ್ರಾಮ ಲೆಕ್ಕಾಧಿಕಾರಿ ಸಹ ಕೈ ಜೋಡಿಸಿರುವ ಶಂಕೆ ಗ್ರಾಮಸ್ಥರು ವ್ಯಕ್ತಪಡಿಸಿದ್ದಾರೆ.
ಅಧಿಕಾರಿಗಳ ಕೃಪಾಕಟಾಕ್ಷದಲ್ಲೇ ಅಕ್ರಮ ಮಣ್ಣು ಸಾಗಾಟ ನಡೆಯುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ.
ಅಕ್ರಮ ಮಣ್ಣು ಸಾಗಾಟಕ್ಕೆ ಇನ್ನಾದ್ರೂ ಬ್ರೇಕ್ ಬೀಳುತ್ತಾ…? ಎಂದು ಗ್ರಾಮಸ್ಥರು ಪ್ರಶ್ನೆಯಾಗಿದೆ.ಮಣ್ಣು ಲೂಟಿಗೆ ತಾಲೂಕು ಆಡಳಿತ ಬ್ರೇಕ್ ಹಾಕುವಂತೆ ಒತ್ತಾಯ ಕೇಳಿ ಬಂದಿದೆ…

 

RELATED ARTICLES

Related Articles

TRENDING ARTICLES