Monday, December 23, 2024

ಎಲ್ಲರಿಗಿಂತ ಮೊದಲೇ UAE ಗೆ ಧೋನಿ & ಟೀಮ್ ..!

ಸೆಪ್ಟೆಂಬರ್ 19ರಿಂದ ನವೆಂಬರ್ 8ರವರೆಗೆ ಯುಎಇನಲ್ಲಿ ಐಪಿಎಲ್ ಸೀಸನ್ 13 ನಡೆಯೋದು ಬಹುತೇಕ ಪಕ್ಕಾ ಆಗಿದೆ. IPL ನಡೆಯೋದು ಖಚಿತ ಆಗ್ತಿದ್ದಂತ ಫ್ರಾಂಚೈಸಿಗಳು ತಮ್ಮ ಆ ಕಡೆ ಪ್ರಯಾಣ ಬೆಳೆಸೋಕೆ ರೆಡಿಯಾಗಿವೆ. ಅದಕ್ಕಾಗಿ ಚಾರ್ಟೆಡ್​ಪ್ಲೇನ್​​ಗಳನ್ನು ಬಾಡಿಗೆ ಪಡೆಯಲು ತೀರ್ಮಾನಿಸಿವೆ. ಆಗಸ್ಟ್ ಮೂರನೇ ವಾರದದಲ್ಲಿ ಎಲ್ಲಾ ಟೀಮ್​ಗಳು ಯುಎಇಗೆ ಹೋಗಲಿವೆ. ಆದ್ರೆ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ಉಳಿದೆಲ್ಲಾ ಟೀಮ್​ಗಳಿಗಿಂತ ಮೊದಲೇ ಯುಎಇ ತಲುಪಲಿದೆ.

ಯುಎಇಗೆ ಬೇಗ ಹೋದಲ್ಲಿ ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳೋದು ಸುಲಭ ಆಗುತ್ತೆ. ಪ್ರಾಕ್ಟಿಸ್​ಗೂ ಹೆಚ್ಚಿನ ಸಮಯ ಸಿಗುತ್ತೆ ಅನ್ನೋದು ಸಿಎಸ್​​ಕೆ ಪ್ಲ್ಯಾನ್.

ಇನ್ನು ಮಹೇಂದ್ರ ಸಿಂಗ್ ಧೋನಿ 2019 ವರ್ಲ್ಡ್​​ಕಪ್ ಬಳಿಕ ಯಾವ್ದೇ ಮ್ಯಾಚ್ ಆಡಿಲ್ಲ. ಧೋನಿ ಬ್ಲೂ ಜರ್ಸಿಯಲ್ಲಿ ಕಾಣದೆ ಹೆಚ್ಚುಕಮ್ಮಿ 1 ವರ್ಷವಾಯ್ತು. ಧೋನಿ ಐಪಿಎಲ್​ನಲ್ಲಿ ಮಿಂಚಿ ಮತ್ತೆ ಟೀಮ್ ಇಂಡಿಯಾಕ್ಕೆ ವಾಪಸ್ಸಾಗ್ಬೇಕು ಅಂತ ಫ್ಯಾನ್ಸ್ ಕಾಯ್ತಿದ್ದಾರೆ. ಐಪಿಎಲ್​ನಲ್ಲಿ ಧೋನಿ ಅಬ್ಬರಿಸ್ತಾರಾ ಅಂತ ಕಾದುನೋಡ್ಬೇಕು.

RELATED ARTICLES

Related Articles

TRENDING ARTICLES