Monday, December 23, 2024

ಮಾಸ್ಕ್​ ಧರಿಸಿ ಎಂದಿದ್ದಕ್ಕೆ ಯವಕರು ಎಸ್ಕೇಪ್!

ಚಿಕ್ಕಮಗಳೂರು: ಮಾಸ್ಕ್ ಹಾಕದ್ದನ್ನ ಪ್ರಶ್ನಿಸಿದ್ದಕ್ಕೆ ಯುವಕರು ಮಹಿಳೆ ಜೊತೆ ಅಸಭ್ಯವಾಗಿ ವರ್ತಿಸಿದ್ದು, ಸ್ಥಳಿಯರು ತರಾಟೆ ತೆಗೆದುಕೊಳ್ಳುತ್ತಿದ್ದಂತೆ ತಪ್ಪಾಯ್ತು… ತಪ್ಪಾಯ್ತು… ಎಂದು ಸಿನಿಮಿಯ ರೀತಿ ಕಾರ್ ಟರ್ನ್ ಮಾಡಿಕೊಂಡು ಹೋಗಿರೋ ಘಟನೆ ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲೂಕಿನ ನೆಮ್ಮಾರ್ ಗ್ರಾಮದಲ್ಲಿ ನಡೆದಿದೆ. ಅದೃಷ್ಟವಶಾತ್ ಕಾರಿನ ಹಿಂಭಾಗ ಯಾರೂ ಇರಲಿಲ್ಲ. ಇದ್ದಿದ್ದರೆ ದೊಡ್ಡ ಅನಾಹುತ ಸಂಭವಿಸುತ್ತಿತ್ತು. ಉಡುಪಿ ಮೂಲದ ನಾಲ್ಕೈದು ಸ್ನೇಹಿತರು ನಿಸ್ಸಾನ್ ಕಾರಿನಲ್ಲಿ ಪ್ರವಾಸಕ್ಕೆ ಬಂದಿದ್ದರು. ಶೃಂಗೇರಿಯ ನೆಮ್ಮಾರ್ ಬಳಿಯ ಹ್ಯಾಂಗಿಂಗ್ ಬ್ರಿಡ್ಜ್ ಬಳಿ ಫೋಟೋ ಶೂಟ್ ಮಾಡಿಕೊಳ್ತಿದ್ರು. ಮುಖಕ್ಕೆ ಮಾಸ್ಕ್ ಹಾಕದ ಹಿನ್ನೆಲೆ ಬ್ರಿಡ್ಜ್ ಬಳಿ ಓಡಾಡ್ತಾ, ಅಂಗಡಿಗೆ ಹೋಗಿ ಬರುತ್ತಿದ್ದರು. ಅಂಗಡಿಯಲ್ಲಿದ್ದ ಮಹಿಳೆ ಮಾಸ್ಕ್ ಹಾಕಿಕೊಳ್ಳಿ ಎಂದು ಹೇಳಿದ್ದಕ್ಕೆ ಮಹಿಳೆ ಒಬ್ಬರೇ ಇದ್ರು ಎಂದು ಯುವಕರು ಮಹಿಳೆ ಜೊತೆ ಕಿರಿಕ್ ಮಾಡಿದ್ದಾರೆ. ಮಹಿಳೆ ಆ ಉಡುಪಿ ಮೂಲದ ಯುವಕರ ಜೊತೆ ಮಾಸ್ಕ್ ಧರಿಸಿ ಎಂದು ಜಗಳ ಮಾಡಿದ್ದಾರೆ. ಗಲಾಟೆ ಕಂಡು ಅಕ್ಕಪಕ್ಕದ ಜನ ಬರುತ್ತಿದ್ದಂತೆ ಯುವಕರು ಎಸ್ಕೇಪ್ ಆಗಲು ಪ್ರಯತ್ನಿಸಿದ್ದಾರೆ. ಆದರೆ, ಸ್ಥಳಿಯ ಯುವಕರು ಬಂದು ಪ್ರವಾಸಿ ಯುವಕರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಆಗ ತಪ್ಪಾಯ್ತು… ತಪ್ಪಾಯ್ತು… ಎಂದು ಎಸ್ಕೇಪ್ ಆಗಿದ್ದಾರೆ. ಆದರೆ, ಅವರು ಕಾರನ್ನ ಟರ್ನ್ ಮಾಡಿದ ರೀತಿ ಸಿನಿಮಿಯ ಮಾದರಿಯಲ್ಲಿತ್ತು. ಕಾರಿನ ಹಿಂಭಾಗ ಯಾರಾದ್ರು ಇದ್ದಿದ್ರೆ ಏನಾದ್ರು ಒಂದು ಅನಾಹುತ ಸಂಭವಿಸುತ್ತಿತ್ತು. ಅದೃಷ್ಟವಶಾತ್ ಎನೂ ಅಗಿಲ್ಲ. ಶೃಂಗೇರಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ…

RELATED ARTICLES

Related Articles

TRENDING ARTICLES